ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2022ರ T20 ವಿಶ್ವಕಪ್‌ನಲ್ಲೂ ನಿನಗೆ ಸ್ಥಾನ ಸಿಗಲ್ಲ! ಟ್ರೋಲ್ ಆದ ಯುಜವೇಂದ್ರ ಚಹಾಲ್

Yuzvendra chahal

ಹೊಸದಿಲ್ಲಿಯಲ್ಲಿ ಮುಗ್ಗರಿಸಿದ್ದ ಟೀಂ ಇಂಡಿಯಾ ಕಟಕ್‌ನಲ್ಲಿ ಎರಡನೇ ಟಿ20 ಪಂದ್ಯದಲ್ಲೂ ಸೋಲುವ ಕಾಣುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಭಾರತ ನೀಡಿದ್ದ 148ರನ್‌ಗಳ ಗುರಿಯನ್ನ ದಕ್ಷಿಣ ಆಫ್ರಿಕಾ 10 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿತು.

ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ 40 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಬೌಲಿಂಗ್ ನಲ್ಲಿ ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ನಾಲ್ಕು ವಿಕೆಟ್ ಕಬಳಿಸಿದ್ದು ಮಾತ್ರ ಭಾರತಕ್ಕೆ ಸಮಾಧಾನ ತಂದಿದೆ.

ಆದ್ರೆ ಭಾರತದ ಸ್ಪಿನ್ನರ್‌ಗಳು ಸಂಪೂರ್ಣ ನಿರಾಸೆ ಮೂಡಿಸಿದರು. ಯುಜವೇಂದ್ರ ಚಹಾಲ್ ಅವರ ಕಳಪೆ ಫಾರ್ಮ್ ಗಮನಾರ್ಹವಾಗಿದೆ. ಚಹಾಲ್ ನಾಲ್ಕು ಓವರ್‌ಗಳಲ್ಲಿ 49 ರನ್‌ಗಳನ್ನು ಬಿಟ್ಟುಕೊಟ್ಟು, ಪಡೆದಿದ್ದು ಮಾತ್ರ ಒಂದು ವಿಕೆಟ್. ಇನ್ನು ಅವರ ಬೌಲಿಂಗ್ ಎಕಾನಮಿ 12.25 ಆಗಿದ್ದು, ಚಹಾಲ್ ಮೊದಲ ಪಂದ್ಯದಲ್ಲೂ ನಿರಾಸೆ ಅನುಭವಿಸಿದ್ದಾರೆ. ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ನಂತರ ಭಾರತ ಪರ ಚಹಾಲ್ ಮಿಂಚುವಲ್ಲಿ ವಿಫಲರಾಗಿದ್ದಾರೆ.

ಸಾಕಷ್ಟು ಟ್ರೋಲ್‌ಗೆ ಒಳಗಾದ ಯುಜವೇಂದ್ರ ಚಹಾಲ್

ಸಾಕಷ್ಟು ಟ್ರೋಲ್‌ಗೆ ಒಳಗಾದ ಯುಜವೇಂದ್ರ ಚಹಾಲ್

ಇದೀಗ ಭಾರತ ಪರ ಚಹಾಲ್ ಕಳಪೆ ಪ್ರದರ್ಶನ ತೋರಿದ್ದಕ್ಕೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲ ತೀವ್ರ ಟ್ರೋಲ್ ಮಾಡುತ್ತಿದ್ದಾರೆ. ಭಾರತದ ಪರ ಆಡಲು ಐಪಿಎಲ್‌ನಲ್ಲಿ ಮಿಂಚಿದ್ರೆ ಸಾಲದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹಿರಿಯ ಬೌಲರ್‌ಗೆ ನೀಡಿದ್ದ ಯಾವುದೇ ಜವಾಬ್ದಾರಿಯನ್ನು ತೋರಿಸುತ್ತಿಲ್ಲ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ.

2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಸರಣಿ ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ!

2022ರ ಟಿ20 ವಿಶ್ವಕಪ್‌ನಲ್ಲೂ ನಿನಗೆ ಸ್ಥಾನವಿಲ್ಲ!

2022ರ ಟಿ20 ವಿಶ್ವಕಪ್‌ನಲ್ಲೂ ನಿನಗೆ ಸ್ಥಾನವಿಲ್ಲ!

2021 ರ ಟಿ20 ವಿಶ್ವಕಪ್‌ನಿಂದ ಚಹಾಲ್ ಹೊರಗುಳಿದಿದ್ದು ಒಳ್ಳೆಯದು ಮತ್ತು 2022 ರ ಟಿ20 ವಿಶ್ವಕಪ್‌ಗೆ ಚಹಾಲ್ ಭಾರತ ತಂಡದಲ್ಲಿ ಇರುವುದಿಲ್ಲ ಎಂದು ಅಭಿಮಾನಿಗಳು ಟೀಕೆ ಮಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟ್ರೋಲ್ ಮಾಡಿರುವ ನೆಟ್ಟಿಗರು, ಚಹಾಲ್ ಐಪಿಎಲ್‌ನಲ್ಲಿ ಸಿಂಹ, ಭಾರತ ತಂಡದಲ್ಲಿ ಬೆಕ್ಕು ಇದ್ದ ಹಾಗೆ ಎಂದಿದ್ದಾರೆ.

ಮೊದಲ ಪಂದ್ಯದಲ್ಲಿ ಚಹಾಲ್‌ಗೆ ನಾಲ್ಕು ಓವರ್‌ಗಳನ್ನು ನೀಡದಿದ್ದಕ್ಕಾಗಿ ನಾಯಕ ರಿಷಬ್ ಪಂತ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆದರೆ ಚಹಲ್ ಗೆ ನಾಲ್ಕು ಓವರ್ ಗಳನ್ನು ನೀಡದಿರುವುದು ಒಳ್ಳೆಯದು, ರಿಷಬ್ ಅವರನ್ನು ಟೀಕಿಸಿದ್ದು ತಪ್ಪು ಎಂದು ಇದೀಗ ಅಭಿಮಾನಿಗಳು ಹೇಳುತ್ತಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 10 ವರ್ಷಗಳ ಬಳಿಕ ಈ ವಿಶೇಷ ದಾಖಲೆ ಮಾಡಿದ ಭುವನೇಶ್ವರ್ ಕುಮಾರ್

ಚಹಾಲ್ ಉತ್ತಮ ಪ್ರದರ್ಶನ ನೀಡಿದ್ದು ನೆನಪಿಗೆ ಬರ್ತಿಲ್ಲ!

ಚಹಾಲ್ ಉತ್ತಮ ಪ್ರದರ್ಶನ ನೀಡಿದ್ದು ನೆನಪಿಗೆ ಬರ್ತಿಲ್ಲ!

ಚಹಾಲ್ ಅಂತಿಮವಾಗಿ ಭಾರತಕ್ಕೆ ಉತ್ತಮ ಬೌಲಿಂಗ್ ಮಾಡಿರುವ ಇನ್ನಿಂಗ್ಸ್‌ ನೆನಪಿಗೆ ಬರ್ತಿಲ್ಲ ಎಂದು ಮತ್ತೆ ಕೆಲವರು ಅಭಿಮಾನಿಗಳು ಚಹಾಲ್‌ರನ್ನ ಟೀಕಿಸಿದ್ದಾರೆ. ನಾಯಕನಾಗಿ ರಿಷಬ್ ಅವರ ನಿರ್ಧಾರಗಳು ಕೆಟ್ಟದ್ದಲ್ಲ ಎಂದು ಬೆಂಬಲಿಸಿರುವ ಅಭಿಮಾನಿಗಳು, ತಂಡದ ಪ್ರಮುಖ ಸ್ಪಿನ್ನರ್ 148 ರನ್ ಡಿಫೆಂಡ್ ಮಾಡುವಾಗ 49 ರನ್ ಬಿಟ್ಟುಕೊಟ್ಟರೆ ನಾಯಕ ಏನನ್ನೂ ಮಾಡಲು ಸಾಧ್ಯವಿಲ್ಲ. ಪಿಚ್‌ನಲ್ಲಿ ಸ್ಪಿನ್ನರ್‌ಗಳ ಬೆಂಬಲವಿದ್ದರೂ ಅದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಭಾರತ ಯಾವಾಗಲೂ ಅತ್ಯುತ್ತಮ ಸ್ಪಿನ್ನರ್‌ಗಳನ್ನು ಹೊಂದಿದ್ದರೂ, ಈಗ ಭಾರತ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಉತ್ತಮ ಸ್ಪಿನ್ನರ್‌ಗಳ ಕೊರತೆ ಎಂದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮುಂದಿನ ಪಂದ್ಯಕ್ಕೆ ಚಹಾಲ್ ತಂಡದಲ್ಲಿ ಇರಬಾರದು ಮತ್ತು ರವಿ ಬಿಷ್ಣೋಯ್ ಅವರನ್ನು ಬದಲಾಯಿಸಬೇಕು ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ. ಕುಲದೀಪ್ ಯಾದವ್ ಗಾಯದ ಸಮಸ್ಯೆಯಿಂದ ಹೊರಗುಳಿದ್ದು, ಬಿಷ್ಣೋಯ್ ಒಬ್ಬರನ್ನೇ ಆಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಚಹಾಲ್ ಅಷ್ಟೇ ಅಲ್ಲದೆ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಪ್ರದರ್ಶನದ ವಿರುದ್ಧವೂ ಟ್ರೋಲ್‌ಗಳು ಹೆಚ್ಚಿವೆ. ಐಪಿಎಲ್ ಫೈನಲ್‌ನಲ್ಲಿ ಮೂರು ವಿಕೆಟ್ ಪಡೆದು ನ್ಯೂಬಾಲ್‌ನಲ್ಲಿ ಮಿಂಚಿದ್ದ ಹಾರ್ದಿಕ್, ಭಾರತೀಯ ಜೆರ್ಸಿಯಲ್ಲಿ ನಿಜಕ್ಕೂ ನಿರಾಸೆ ಮೂಡಿಸಿದ್ದಾರೆ. ಅವನು ಚೆಂಡನ್ನು ತೆಗೆದುಕೊಂಡಾಗಲೆಲ್ಲಾ ಚೆನ್ನಾಗಿ ಸೋಲಿಸುತ್ತಾನೆ. ಅವರು ಕಟಕ್‌ನಲ್ಲಿ ಮೂರು ಓವರ್‌ಗಳಲ್ಲಿ 31 ರನ್ ನೀಡಿದರು ಮತ್ತು ಒಂದೇ ಒಂದು ವಿಕೆಟ್ ಪಡೆಯಲಿಲ್ಲ.

Story first published: Tuesday, June 14, 2022, 9:51 [IST]
Other articles published on Jun 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X