ಫುಟ್ಬಾಲ್ ವಿಶ್ವಕಪ್‌ 2022: ರಿಲಯನ್ಸ್‌ ಜಿಯೋದಿಂದ ವಿಶೇಷ ರೋಮಿಂಗ್ ಯೋಜನೆ

ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಕತಾರ್ ನಲ್ಲಿ ನಡೆಯಲಿರುವ ಫಿಫಾ (FIFA) ವಿಶ್ವಕಪ್ 2022 ಅನ್ನು ವೀಕ್ಷಿಸಲು ಹೋಗುವ ಗ್ರಾಹಕರಿಗಾಗಿ ವಿಶೇಷ ಅಂತರಾಷ್ಟ್ರೀಯ ರೋಮಿಂಗ್ (IR) ಪ್ಯಾಕ್‌ಗಳನ್ನು ಹೊರ ತಂದಿದೆ.

ಈ ಯೋಜನೆಗಳ ಸಹಾಯದಿಂದ ಜಿಯೋ ಗ್ರಾಹಕರು ಕತಾರ್, ಯುಎಇ (UAE) ಮತ್ತು ಸೌದಿ ಅರೇಬಿಯಾಗೆ ತೆರಳಿದಾಗ ತಡೆರಹಿತ ಸಂವಹನ ನಡೆಸಲು ಸಾಧ್ಯವಾಗುತ್ತದೆ.

ಒಟ್ಟು ಐದು ಪ್ರಿಪೇಯ್ಡ್ ಯೋಜನೆಗಳನ್ನು ಜಿಯೋ ಪರಿಚಯಿಸಿದೆ, ಭಾರತದಲ್ಲಿನ ಜಿಯೋ ಗ್ರಾಹಕರು ಫಿಫಾ ವಿಶ್ವಕಪ್‌ಗಾಗಿ ವಿದೇಶಕ್ಕೆ ಪ್ರಯಾಣಿಸುವಾಗ ಬಳಸಬಹುದಾದ ಈ ಯೋಜನೆಗಳು ಇಂತಿದೆ.

ಫುಟ್ಬಾಲ್‌ನಿಂದ ಫಿಫಾ ಹೇಗೆ ಹಣ ಗಳಿಸುತ್ತದೆ? ವರ್ಷಕ್ಕೆ ಎಷ್ಟು ಆದಾಯ? ವಿಶ್ವಕಪ್‌ನಿಂದ ಎಷ್ಟು ಲಾಭ?

ಎರಡು ರೀತಿಯ ಯೋಜನೆಗಳಿವೆ - ಒಂದು ಧ್ವನಿ, ಡೇಟಾ ಮತ್ತು SMS ಪ್ರಯೋಜನಗಳನ್ನು ಹೊಂದಿದೆ ಮತ್ತು ಇನ್ನೊಂದು ಡೇಟಾ ಲೋಡಿಂಗ್‌ಗಾಗಿ ಮಾತ್ರ ಬಿಡುಗಡೆಯಾಗಿದೆ.

ಡೇಟಾ ಮಾತ್ರ ಹೊಂದಿರುವ ಯೋಜನೆಗಳು:
ಮೊದಲ ಯೋಜನೆಯು 1122 ರೂಗಳಿಗೆ ಬರಲಿದೆ ಮತ್ತು 5 ದಿನಗಳ ವ್ಯಾಲಿಡಿಟಿ ಹೊಂದಿದ್ದು, 1GB ಡೇಟಾವನ್ನು ನೀಡುತ್ತದೆ. ಎರಡನೇ ಡೇಟಾ-ಮಾತ್ರ ಯೋಜನೆಯು ರೂ 5122 ಗೆ ಸಿಗಲಿದ್ದು, 21 ದಿನಗಳ ಮಾನ್ಯತೆಯೊಂದಿಗೆ 5GB ಡೇಟಾವನ್ನು ನೀಡುತ್ತದೆ.

ಧ್ವನಿ, ಡೇಟಾ ಮತ್ತು SMS ಅನ್ನು ನೀಡುವ ಯೋಜನೆಗಳು:
ಈ ಪಟ್ಟಿಯಲ್ಲಿರುವ ಮೊದಲ ಯೋಜನೆಯು 1599 ರೂಪಾಯಿ ಯೋಜನೆಯಾಗಿದ್ದು, ಇದು 15 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ ಮತ್ತು 1GB ಡೇಟಾ, 150 ನಿಮಿಷಗಳ ಸ್ಥಳೀಯ ಧ್ವನಿ ಕರೆ + ಹೋಮ್ ವಾಯ್ಸ್ ಕರೆ ಮತ್ತು 100 SMS (ಮೇಲೆ ತಿಳಿಸಲಾದ ಮೂರು ದೇಶಗಳಿಗೆ) ನೀಡುತ್ತದೆ.

ಎರಡನೇ ಯೋಜನೆಯು 3999 ರೂ ಬೆಲೆ ಹೊಂದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 30 ದಿನಗಳವರೆಗೆ 3GB ಡೇಟಾವನ್ನು ನೀಡುತ್ತದೆ ಜೊತೆಗೆ 250 ನಿಮಿಷಗಳ ಸ್ಥಳೀಯ ಮತ್ತು ಹೋಮ್ ವಾಯ್ಸ್ ಕರೆ ಮತ್ತು 100 SMS (ಮೇಲೆ ತಿಳಿಸಲಾದ ಮೂರು ದೇಶಗಳಿಗೆ) ನೀಡುತ್ತದೆ.

ಕೊನೆಯದಾಗಿ, ನೀವು 6799 ಪ್ಲಾನ್‌ಗೆ ಹೋಗಬಹುದು, ಇದರೊಂದಿಗೆ ನೀವು 5GB ಡೇಟಾ, 500 ನಿಮಿಷಗಳ ಸ್ಥಳೀಯ ಮತ್ತು ಹೋಮ್ ವಾಯ್ಸ್ ಕರೆ ಮತ್ತು 100 SMS (ಮೇಲೆ ತಿಳಿಸಲಾದ ಮೂರು ದೇಶಗಳಿಗೆ) ನೀಡುತ್ತದೆ.

ಕತಾರ್, ಯುಎಇ ಮತ್ತು ಸೌದಿ ಅರೇಬಿಯಾ 3 ದೇಶಗಳಲ್ಲಿ ಗ್ರಾಹಕರು ಯಾವುದೇ ಮಾರ್ಗದಿಂದ ಪ್ರಯಾಣಿಸುತ್ತಿದ್ದರೂ ತಡೆರಹಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಯೋಜನೆಗಳು ಲಭ್ಯವಿವೆ.

For Quick Alerts
ALLOW NOTIFICATIONS
For Daily Alerts
ಫಿಫಾ ವಿಶ್ವಕಪ್ ಪೂರ್ವಭಾವಿಗಳು
VS
Story first published: Thursday, November 17, 2022, 19:54 [IST]
Other articles published on Nov 17, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X