ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ISL 2022: ಈಸ್ಟ್ ಬೆಂಗಾಲ್‌ಗೆ ಸತತ ಎರಡನೇ ಸೋಲು, ಎಫ್‌ಸಿ ಗೋವಾ 2-1 ಅಂತರದ ಜಯ

FC GOA

ಐಎಸ್‌ಎಲ್‌ 2022ರ ಮೊದಲ ತವರಿನ ಪಂದ್ಯದಲ್ಲಿ ಈಸ್ಟ್ ಬೆಂಗಾಲ್, ಎಫ್‌ಸಿ ಗೋವಾ ವಿರುದ್ಧ 1-2 ಅಂತರದಿಂದ ಸೋತಿದೆ. ಈ ಬಾರಿಯ ಲೀಗ್ ನ ಮೊದಲ ಪಂದ್ಯದಲ್ಲಿ ಕೊಚ್ಚಿಯಲ್ಲಿ ನಡೆದಿದ್ದ ಕೇರಳ ಬ್ಲಾಸ್ಟರ್ಸ್ ಎದುರು ಸ್ಟೀಫನ್ ಕಾನ್ ಸ್ಟಂಟೈನ್ ಬಳಗ ಸೋತಿತ್ತು. ಆದ್ರೆ ಸಾಲ್ಟ್‌ ಲೇಕ್‌ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತವರಿನ ಅಂಗಳದಲ್ಲಿ ಲಯಕ್ಕೆ ಮರಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೋಲ್ಕತ್ತಾದಲ್ಲಿಯೂ ತಂಡ ಸೋಲನ್ನು ಎದುರಿಸಬೇಕಾಯಿತು.

ಪಂದ್ಯದ 7 ನಿಮಿಷಗಳ ನಂತರ ಎಫ್‌ಸಿ ಗೋವಾ ಪರ ಬ್ರೆಂಡನ್ ಫೆರ್ನಾಂಡಿಸ್ ಗೋಲು ಗಳಿಸಿ ಮುನ್ನಡೆದರು. ಅಲ್ವಾರೊ ವಜ್ಕ್ವೆಜ್ ಅವರ ಪಾಸ್‌ನಿಂದ ಬ್ರೆಂಡನ್ ಗೋವಾಗೆ ಮುನ್ನಡೆ ನೀಡಿದರು. ಓಚರ್ ಜರ್ಸಿ ಹೋಲ್ಡರ್‌ಗಳು ಈಸ್ಟ್ ಬೆಂಗಾಲ್ ಮೇಲೆ ಆಕ್ರಮಣಕಾರಿ ಒತ್ತಡವನ್ನು ಹೆಚ್ಚಿಸಿದರು, ವಿದೇಶದಲ್ಲಿ ಮೊದಲ ಗೋಲು ಪಡೆಯುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಮೊದಲಾರ್ಧದಲ್ಲಿ ಹೆಚ್ಚಿನ ಗೋಲುಗಳಿರಲಿಲ್ಲ.

ದ್ವಿತೀಯಾರ್ಧದಲ್ಲೂ ಎಫ್‌ಸಿ ಗೋವಾ ಆಕ್ರಮಣಕಾರಿ ಆಟವಾಡಿತು. ಆದಾಗ್ಯೂ, ಈಸ್ಟ್ ಬೆಂಗಾಲ್ ಪಂದ್ಯಕ್ಕೆ ಮರಳಲು ದ್ವಿತೀಯಾರ್ಧದ ಆರಂಭದಲ್ಲಿ ಸರಣಿ ದಾಳಿಯನ್ನು ಪ್ರಾರಂಭಿಸಿತು. ರಕ್ಷಣಾತ್ಮಕ ಮೈಂಡ್ ಸೆಟ್‌ನಲ್ಲಿ ಪಂದ್ಯವನ್ನು ಆಡಿದ ಸ್ಟೀಫನ್ ಕಾನ್‌ಸ್ಟಂಟೈನ್ ಪಡೆ ಹಿನ್ನಡೆ ಅನುಭವಿಸಿತು. ಈಸ್ಟ್ ಬೆಂಗಾಲ್‌ಗೆ ಈ ದಿನ ಉತ್ತಮವಾಗಿ ದಾಳಿ ಮಾಡಲು ಸಾಧ್ಯವಾಗಲಿಲ್ಲ.

ಬ್ರಿಟಿಷ್ ಕೋಚ್ ನಿರ್ದಿಷ್ಟವಾಗಿ ಪ್ರತಿದಾಳಿ ಫುಟ್‌ಬಾಲ್‌ಗೆ ಒತ್ತು ನೀಡುತ್ತಿದ್ದಾರೆ. ಪಂದ್ಯದ 64ನೇ ನಿಮಿಷದಲ್ಲಿ ಕ್ಲೇಟನ್ ಸಿಲ್ವಾ ಪೆನಾಲ್ಟಿಯಲ್ಲಿ ಗೋಲು ಗಳಿಸುವ ಮೂಲಕ ಈಸ್ಟ್ ಬೆಂಗಾಲ್ ತಂಡಕ್ಕೆ ಒಂದು ಗೋಲು ತಂದುಕೊಟ್ಟರು. ಪಂದ್ಯವನ್ನು ಸಮಬಲಗೊಳಿಸಲು ಬಹಳ ಪ್ರಯತ್ನ ಪಟ್ಟ ಈಸ್ಟ್ ಬೆಂಗಾಲ್ ಮತ್ತೊಮ್ಮೆ ತಮ್ಮ ದಾಳಿಯನ್ನು ಹೆಚ್ಚಿಸುವ ಬದಲು ರಕ್ಷಣಾತ್ಮಕ ತಂತ್ರಕ್ಕೆ ತಿರುಗಿತು.

ದ್ವಿತೀಯಾರ್ಧದಲ್ಲಿ ಈಸ್ಟ್ ಬೆಂಗಾಲ್ ತಂಡದ ಕ್ಲೇಟನ್ ಸಿಲ್ವಾ ಪೆನಾಲ್ಟಿ ಗೋಲು ಗಳಿಸಿದ್ದು ಬಿಟ್ಟರೆ ಮತ್ಯಾವ ಆಟಗಾರನು ಮತ್ತೆ ಗೋಲು ಗಳಿಸಲಿಲ್ಲ. ಪಂದ್ಯ ಮುಗಿಯುವ ಕೆಲವೇ ಕ್ಷಣಗಳ ಮುನ್ನ ಈಸ್ಟ್ ಬೆಂಗಾಲ್ ಹೆಚ್ಚುವರಿ ಸಮಯದಲ್ಲಿ ಎರಡು ಗೋಲುಗಳ ಅಂತರದಲ್ಲಿ ಸೋಲನುಭವಿಸಬೇಕಾಯಿತು. ಗೋವಾ ಪರ ಎದು ಬೇಡಿಯಾ 90+4 ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಬೆಂಗಾಲ್ ತವರು ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದರು. ಎಫ್‌ಸಿ ಗೋವಾ 2-1 ಅಂತರದಲ್ಲಿ ಪಂದ್ಯ ಜಯಿಸಿತು.

Story first published: Wednesday, October 12, 2022, 23:49 [IST]
Other articles published on Oct 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X