ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಕೊಚ್ಚಿಯಲ್ಲಿ ಕೇರಳ-ಒಡಿಶಾ ಸಮಬಲದ ಹೋರಾಟ

ISL: Kerala, Odisha settle for a point as injuries take a toll

ಕೊಚ್ಚಿ, ನವೆಂಬರ್ 9: ಕೇರಳ ಬ್ಲಾಸ್ಟರ್ಸ್ ತಂಡ ಮನೆಯಂಗಣದಲ್ಲಿ ಉತ್ತಮ ರೀತಿಯಲ್ಲಿ ಹೋರಾಡಿ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಹಳದಿ ಸೇನೆಯಲ್ಲಿ ಮನೆ ಮಾಡಿತ್ತು. ಆದರೆ ಹೊಸ ಉತ್ಸಾಹದಲ್ಲಿರುವ ಒಡಿಶಾ ತಂಡ ಅದಕ್ಕೆ ಅವಕಾಶ ನೀಡಲಿಲ್ಲ ಪರಿಣಾಮ ಇಂಡಿಯನ್ ಸೂಪರ್ ಲೀಗ್ ನ 18ನೇ ಪಂದ್ಯ ಗೋಳಿಲ್ಲದೆ 0-0ದಲ್ಲಿ ಡ್ರಾಗೊಂಡಿತು.

ಅಂಪೈರ್ ಎಡವಟ್ಟಿಗೆ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ: ವಿಡಿಯೋಅಂಪೈರ್ ಎಡವಟ್ಟಿಗೆ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ: ವಿಡಿಯೋ

ಮೊದಲೇ ಗಾಯದ ಸಮಸ್ಯೆಯೇ ಸುದ್ದಿಯಾಗಿರುವ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೆ ಮೂವರು ಗಾಯದ ಪಟ್ಟಿಗೆ ಸೇರಿದರು. ಕೇರಳದ ನಾಯಕ ಜೈರೋ ರೊಡ್ರಿಗಸ್ ಆರಂಭದಲ್ಲೆ ಗಾಯಗೊಂಡು ಅಂಗಣದಿಂದ ಹೊರ ನಡೆದಿರುವುದು ಕೇರಳದ ಶಕ್ತಿಯ ಹಿನ್ನಡೆಗೆ ಪ್ರಮುಖ ಕಾರಣವಾಯಿತು.

ನ.16ರಂದು ನಗರದಲ್ಲಿ WWE ಸೂಪರ್ ಸ್ಟಾರ್ ಷಾರ್ಲೆಟ್ ಫ್ಲೇರ್ ಹವಾ!ನ.16ರಂದು ನಗರದಲ್ಲಿ WWE ಸೂಪರ್ ಸ್ಟಾರ್ ಷಾರ್ಲೆಟ್ ಫ್ಲೇರ್ ಹವಾ!

ಈ ಫಲಿತಾಂಶದ ನಂತರ ಒಡಿಶಾ ಎಫ್ ಸಿ ಐದನೇ ಸ್ಥಾನ ತಲುಪಿದರೆ ಕೇರಳ ಎಫ್ ಸಿ ಆರನೇ ಸ್ಥಾನ ತಲುಪಿತು. ಪ್ರಥಮಾರ್ಧವೂ ಗೋಳಿಲ್ಲದೆ ಅಂತ್ಯಗೊಂಡಿತ್ತು. ಕೇರಳ ಬ್ಲಾಸ್ಟರ್ಸ್ ತಂಡದ ವಿಚಿತ್ರ ದಾಖಲೆ ಮುಂದುವರಿದಿರುವುದು ಗಮನಾರ್ಹ. ಕಳೆದ ಬಾರಿ ಎಟಿಕೆ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಎಟಿಕೆ ಸತತ 14 ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿತ್ತು. ಆ ಕಹಿ ನೆನಪು ಕೇರಳ ತಂಡವನ್ನು ಕಾಡದಿರದು.

ಈ ದಿನಗಳ 'ಸಿಕ್ಸರ್ ಕಿಂಗ್' ರೋಹಿತ್ ಶರ್ಮಾ ಎನ್ನುತ್ತಿವೆ ಅಂಕಿ-ಅಂಶಗಳು!ಈ ದಿನಗಳ 'ಸಿಕ್ಸರ್ ಕಿಂಗ್' ರೋಹಿತ್ ಶರ್ಮಾ ಎನ್ನುತ್ತಿವೆ ಅಂಕಿ-ಅಂಶಗಳು!

ಶೆಟ್ಟೋರಿ ಪಡೆಗೆ ಈಗ ಹಳೆ ಕಹಿ ನೆನಪು ದೂರವಾಗಬೇಕಾದರೆ ಇಲ್ಲೊಂದು ಜಯ ಗಳಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ತಂಡವನ್ನು ಮತ್ತೆ ಗಾಯದ ಸಮಸ್ಯೆ ಕಾಡಿರುವುದು ಈ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಇನ್ನೊಂದೆಡೆ ಒಡಿಶಾ ತಂಡ ಕೇರಳಕ್ಕೆ ವಿರುದ್ಧವಾದ ದಿಕ್ಕಿನಲ್ಲಿದೆ, ಅಂದರೆ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ, ಮುಂಬೈ ಸಿಟಿ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ 4-2 ಗೋಳುಗಳಿಂದ ಗೆದ್ದು ಚೇತರಿಕೆ ಕಂಡಿತ್ತು. ಆ ಆತ್ಮವಿಶ್ವಾಸ ಇಲ್ಲಿ ಪ್ರಯೋಜನಕ್ಕೆ ಬರಲಿಲ್ಲ.

ISL: Kerala, Odisha settle for a point as injuries take a toll

ಆತ್ಮ ವಿಶ್ವಾಸದಲ್ಲಿ ಕೇರಳ ಎಫ್ ಸಿ
ಕೇರಳ ಬ್ಲಾಸ್ಟರ್ಸ್ ಎಫ್ ಸಿ ಹಾಗೂ ಒಡಿಶಾ ಎಫ್ ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ ನ 16ನೇ ಪಂದ್ಯದಲ್ಲಿ ಮುಖಾಮುಖಿಯಾದವು. ಟೂರ್ನಿಯ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಟಿಕೆ ವಿರುದ್ಧ ಜಯ ಗಳಿಸಿತ್ತು. ಆದರೆ ಆನಂತರದ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಕಳೆದ ಬಾರಿಯೂ ಕೇರಳ ಬ್ಲಾಸ್ಟರ್ಸ್ ತಂಡ ಇದೇ ರೀತಿ ಮೊದಲ ಪಂದ್ಯದಲ್ಲಿ ಗೆದ್ದು ಆ ನಂತರ ಹದಿನಾಲ್ಕು ಪಂದ್ಯಗಳಲ್ಲಿ ಸೋತಿತ್ತು. ಇದು ಎಲ್ಕೋ ಶೆಟ್ಟೋರಿ ಅವರಿಗೆ ಚೆನ್ನಾಗಿಯೇ ಗೊತ್ತಿದೆ.

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಉತ್ತರಖಂಡ ಸದೆಬಡಿದ ಕರ್ನಾಟಕ

ತಂಡದ ನಾಯಕ ಬಾರ್ತಲೋಮ್ಯೋ ಓಗ್ಬ್ಯಾಚೆ ಅವರಿಗೆ ಇನ್ನೂ ಗೋಲು ಗಳಿಸುವ ಅವಕಾಶ ಸಿಕ್ಕಿರಲಿಲ್ಲ. ಸೆರ್ಗಿಯೋ ಸಿಡಾನ್ಚಾ, ಮೊಹಮ್ಮದ್ ಜಿನ್ನಿಂಗ್ ಮತ್ತು ಸಹಲ್ ಅಬ್ದುಲ್ ಸಮದ್ ಅವರು ಫಾರ್ವಾರ್ಡ್ ವಿಭಾಗದಲ್ಲಿ ಇನ್ನೂ ಮಿಂಚಬೇಕಿದೆ. ಮಾರಿಯೋ ಆರ್ಕ್ಯೂಸ್ ಹಾಗೂ ಗಿಯನ್ನಿ ಜುವೆರ್ಲೂನ್ ಗಾಯಗೊಂಡಿದ್ದು ತಂಡದ ಯಶಸ್ಸಿಗೆ ಹಿನ್ನಡೆಯಾಗಿತ್ತು.

ಎರಡು ಸೋಲುಗಳ ನಂತರ ಮುಂಬೈ ಸಿಟಿ ಎಫ್ ಸಿ ವಿರುದ್ಧ ಕಂಡಿರುವ ಜಯ ಒಡಿಶಾ ತಂಡದ ಮನೋಬಲವನ್ನು ಹೆಚ್ಚಸಿದೆ. ಕ್ಸಿಸ್ಕೋ ಹೆರ್ನಾಂಡಿಸ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರಿಡೀನ್ ಸ್ಯಾಂಟಾನ ಹಾಗೂ ಜೆರ್ರಿ ಫಾರ್ವಾರ್ಡ್ ವಿಭಾಗದಲ್ಲಿ ತಂಡಕ್ಕೆ ನೆರವಾದರು. ಡಿಫೆನ್ಸ್ ವಿಭಾಗದಲ್ಲಿ ಒಡಿಶಾ ತಂಡ ಇನ್ನೂ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಬೇಕಾಗಿದೆ.

Story first published: Saturday, November 9, 2019, 11:40 [IST]
Other articles published on Nov 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X