ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವದ 3ನೇ ಅಧಿಕ ಗೋಲ್ ಸಾಧಕರಾಗಿ ಮಿಂಚಿದ ಸುನಿಲ್ ಛೆಟ್ರಿ

ವಿಶ್ವದ 3ನೇ ಅಧಿಕ ಗೋಲ್ ಸಾಧಕರಾಗಿ ಮಿಂಚಿದ ಸುನಿಲ್ ಛೆಟ್ರಿ | Oneindia Kannada
Sunil Chhetri climbs to 3rd on highest active international goalscorers list

ನವದೆಹಲಿ, ಜೂ. 2: ಫುಟ್ಬಾಲ್ ಕ್ರೇತ್ರದಲ್ಲಿ ಭಾರತ ಹೆಚ್ಚು ಗಮನ ಸೆಳೆಯುವಂತೆ ಮಾಡಿದ್ದ ಸುನಿಲ್ ಛೆಟ್ರಿ ಅವರು ಈಗ ಮತ್ತೆ ಇಡೀ ಭಾರತ ಬೀಗುವಂತೆ ಮಾಡಿದ್ದಾರೆ. ಫುಟ್ಬಾಲ್ ನಲ್ಲಿ ಅಧಿಕ ಗೋಲ್ ಬಾರಿಸಿದ ವಿಶ್ವದ ಅಗ್ರ ಸ್ಥಾನಿಗರಲ್ಲಿ ಛೆಟ್ರಿ 3ನೆಯವರಾಗಿ ಗುರುತಿಸಿಕೊಂಡಿದ್ದಾರೆ.

ಭಾರತ ಫುಟ್ಬಾಲ್ ತಂಡದ ನಾಯಕರಾಗಿರುವ ಛೆಟ್ರಿ ಅಧಿಕ ಗೋಲ್ ಬಾರಿಸಿದ ಆಟಗಾರರಲ್ಲಿ 3ನೇ ಸ್ಥಾನಿಗರಾಗಿ ಗುರುತಿಸಿಕೊಂಡಿದ್ದಷ್ಟೇ ಅಲ್ಲ, ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೊ, ಅರ್ಜೆಂಟೀನಾ ಫುಟ್ಬಾಲ್ ಬಲಾಡ್ಯ ಲಿಯೋನೆಲ್ ಮೆಸ್ಸಿಯ ಬೆನ್ನ ಹಿಂದೆಯೇ ಇದ್ದಾರೆ ಎನ್ನುವುದೇ ವಿಶೇಷ.

ಒಟ್ಟು 149 ಪಂದ್ಯಗಳನ್ನಾಡಿರುವ ರೊನಾಲ್ಡೋ 81 ಗೋಲ್ ಸಾಧನೆ ಮಾಡಿದ್ದಾರೆ. ಅವರ ಬೆನ್ನ ಹಿಂದಿರುವ ಮೆಸ್ಸಿ 124 ಪಂದ್ಯಗಳಲ್ಲಿ 64 ಗೋಲ್ ಸಿಡಿಸಿದ್ದರೆ, ಕೇವಲ 98 ಪಂದ್ಯಗಳನ್ನಾಡಿರುವ ಛೆಟ್ರಿ 59 ಗೋಲ್ ಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ.

ಇತ್ತೀಚೆಗೆ ಭಾರತದ ಫುಟ್ಬಾಲ್ ತಂಡ ಇಂಟರ್ ಕಾಂಟಿನೆಂಟಲ್ ಕಪ್‌ ಟೂರ್ನಿಯಲ್ಲಿ ಚೈನೀಸ್ ತೈಪೆ ವಿರುದ್ಧ 5-0ರ ಭರ್ಜರಿ ಗೆಲುವು ದಾಖಲಿಸಿತ್ತು. ಇದರಲ್ಲಿ ಛೆಟ್ರಿ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿ ಭಾರತವೂ ಫುಟ್ಬಾಲ್ ನಲ್ಲಿ ಗಟ್ಟಿ ದೇಶವೇ ಎನ್ನುವುದನ್ನು ಲೋಕಕ್ಕೆ ಸಾರಿದ್ದರಲ್ಲದೆ, ಭಾರತದ ಹ್ಯಾಟ್ರಿಕ್ ಗೋಲ್ ಸಾಧಕನಾಗಿ ಹೊಸ ಇತಿಹಾಸವನ್ನೂ ಬರೆದಿದ್ದರು.

ಈ ಹ್ಯಾಟ್ರಿಕ್ ಗೋಲ್ ನೆರವಿನಿಂದಲೇ ಛೆಟ್ರಿ ಅಗ್ರ ಮೂರನೇ ಸ್ಥಾನಕ್ಕೇರಿದ್ದಾರೆ. ಅಗ್ರ ಗೋಲ್ ದಾಖಲಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನಿಗರಾಗಿ ಸ್ಪೇನ್ ಡೇವಿಡ್ ವಿಲ್ಲ (59 ಗೋಲು), 5ನೇ ಸ್ಥಾನಿಗರಾಗಿ ಅಮೆರಿಕಾದ ಕ್ಲಿಂಟ್ ಡೆಂಪ್ಸೆ (57 ಗೋಲು) ಮತ್ತು 6ನೇ ಸ್ಥಾನಿಗರಾಗಿ ಬ್ರೆಜಿಲ್ ಸ್ಟಾರ್ ನೇಮರ್ (53) ಇದ್ದಾರೆ.

Story first published: Saturday, June 2, 2018, 18:26 [IST]
Other articles published on Jun 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X