ವಿಶ್ವಕಪ್ ಮೇಲೆ ಉಗ್ರರ ಕಣ್ಣು, ಆತಂಕದಲ್ಲಿ ಫ್ಯಾನ್ಸ್!

By: ವಿಕಾಸ್ ನಂಜಪ್ಪ

ಮಾಸ್ಕೋ, ನವೆಂಬರ್ 02: ಜಗತ್ತಿನಾದ್ಯಂತ ಭಯದ ವಾತಾವರಣ ಹುಟ್ಟು ಹಾಕಲು ಮುಂದಾಗಿರುವ ಇರಾಕಿ ಉಗ್ರ ಸಂಘಟನೆ ಐಸಿಸ್‌ ಉಗ್ರರ ಕಣ್ಣು ಈಗ ಫಿಫಾ ವಿಶ್ವಕಪ್ ಫುಟ್ಬಾಲ್ ಮೇಲೆ ಬಿದ್ದಿದೆ. ರಷ್ಯಾದಲ್ಲಿ ನಡೆಯಲಿರುವ ಜಾಗತಿಕ ಫುಟ್ಬಾಲ್ ಹಬ್ಬದ ವಾತವರಣ ಹಾಳು ಮಾಡುವುದಾಗಿ ಉಗ್ರರು ಘೋಷಿಸಿದ್ದಾರೆ.

ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರನ್ನು ಗುರಿಯಾಗಿಸಿಕೊಂಡು, ಮೆಸ್ಸಿ ಅಳುತ್ತಿರುವ ಪೋಸ್ಟರ್‌ವೊಂದನ್ನು ಐಸಿಸ್ ಉಗ್ರ ಸಂಘಟನೆ ಇತ್ತೀಚೆಗೆ ಬಿಡುಗಡೆ ಮಾಡಿತ್ತು.

Wait for us, we are waiting, ISIS tells football fans ahead of 2018 FIFA World Cup

ಈ ಪೋಸ್ಟರ್‌ನಲ್ಲಿ ಮೆಸ್ಸಿಯವರನ್ನು ಜೈಲು ಕಂಬಿಗಳ ಹಿಂದೆ ರಕ್ತ ಕಣ್ಣೀರು ಸುರಿಸುತ್ತಿರುವಂತೆ ಚಿತ್ರಿಸಲಾಗಿದೆ. ಇದರಲ್ಲಿ Just Do IT, Just Terrorism ಎಂಬ ಅಡಿಬರಹವಿದೆ. ಇದಾದ ಬಳಿಕ ಮತ್ತೊಂದು ಪೋಸ್ಟರ್ ಹೊರ ಹಾಕಿದ್ದಾರೆ.

'ನಮಗಾಗಿ ಕಾಯಿರಿ' ಎಂದು ಅರೇಬಿಕ್ ನಲ್ಲಿ ಬರೆಯಲಾಗಿದೆ. ಈ ಪೋಸ್ಟರ್‌ ಅನ್ನು ವಾಫಾ ಮೀಡಿಯಾ ಫೌಂಡೇಶನ್ ಬಿಡುಗಡೆ ಮಾಡಿತ್ತು.

ಈಗ ಹೊಸ ಪೋಸ್ಟರ್ ನಲ್ಲಿ ಮಾಸ್ಕೋದ ಲುನಿಕಿ ಸ್ಟೇಡಿಯಂನ ಚಿತ್ರವಿದ್ದು, ಸಶಸ್ತ್ರಧಾರಿಯೊಬ್ಬ ನಿಂತಿದ್ದಾನೆ. 15 ಜುಲೈ 2018ರಲ್ಲಿ ಇದೇ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ ನಿಗದಿಯಾಗಿದೆ. ಸೈಟ್ ಗ್ರೂಪ್ ನ ವೆಬ್ ಸೈಟ್ ಅಡ್ರೆಸ್ ಕೂಡಾ ಇದೆ. ಅಲ್ಲಾಹ್ ನ ವಿರೋಧಿಗಳನ್ನು ಮುಜಾಹಿದ್ದೀನ್ ಗಳು ನಾಶ ಪಡಿಸುತ್ತಾರೆ. ಕಾಯುತ್ತಿರಿ, ನಾವು ಕಾಯುತ್ತಿದ್ದೇವೆ ಎಂಬರ್ಥದಲ್ಲಿ ಸಂದೇಶ ನೀಡಲಾಗಿದೆ.

Story first published: Thursday, November 2, 2017, 11:13 [IST]
Other articles published on Nov 2, 2017
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ