ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

FIH ವಿಶ್ವ ರ್‍ಯಾಂಕಿಂಗ್: ಇತಿಹಾಸದಲ್ಲಿ ತನ್ನ ಅತ್ಯುನ್ನತ ಸ್ಥಾನಕ್ಕೇರಿದ ಭಾರತ ಮಹಿಳಾ ಹಾಕಿ ತಂಡ

FIH World Rankings: Indias womens hockey team climbed to sixth place

ಭಾರತೀಯ ಮಹಿಳಾ ಹಾಕಿ ತಂಡ ಶ್ರೇಯಾಂಕಪಟ್ಟಿಯಲ್ಲಿ ತನ್ನ ಅತ್ಯುನ್ನತ ಸಾಧನೆ ಮಾಡಿದೆ. ಎಫ್‌ಐಹೆಚ್ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನಕ್ಕೇರಿದ್ದು ಇದು ಭಾರತೀಯ ಮಹಿಳಾ ತಂಡದ ಅತ್ಯುತ್ತಮ ಸಾಧನೆಯಾಗಿದೆ. 2029.396 ಅಂಕಗಳೊಂದಿಗೆ ಭಾರತೀಯ ಮಹಿಳಾ ಹಾಕಿ ತಂಡ ಈಗ ವಿಶ್ವ ರ‍್ಯಾಂಕಿಂಗ್‌ನಲ್ಲಿ ಸ್ಪೇನ್‌ ತಂಡವನ್ನು ಹಿಂದಿಕ್ಕಿದೆ.

FIH ಹಾಕಿ ಪ್ರೊ ಲೀಗ್ 2021/22ರಲ್ಲಿ ಅರ್ಜೆಂಟಿನಾ ವಿರುದ್ಧ ಎರಡು ಪಂದ್ಯಗಳಲ್ಲಿ ಕೂಡ ಸೋಲು ಅನುಭವಿಸಿರುವ ಸ್ಪೈನ್ ಒಂದು ಸ್ಥಾನದ ಕುಸಿತ ಕಂಡಿದೆ. ಅಲ್ಲದೆ ಈ ತಿಂಗಳಿನಲ್ಲಿ ಬೆಲ್ಜಿಯಂ ಹಾಗೂ ಇಂಗ್ಲೆಂಡ್ ವಿರುದ್ಧ ಕೂಡ ತಲಾ ಒಂದೊಂದು ಪಂದ್ಯದಲ್ಲಿ ಸ್ಪೈನ್ ಸೋಲು ಅನುಭವಿಸಿತ್ತು.

5 ಐಪಿಎಲ್ ಟ್ರೋಫಿ ಗೆದ್ದ ನಂತರ ತನ್ನ ಮುಂದಿನ ಗುರಿ ಏನೆಂದು ರಿವೀಲ್ ಮಾಡಿದ ಹಾರ್ದಿಕ್ ಪಾಂಡ್ಯ5 ಐಪಿಎಲ್ ಟ್ರೋಫಿ ಗೆದ್ದ ನಂತರ ತನ್ನ ಮುಂದಿನ ಗುರಿ ಏನೆಂದು ರಿವೀಲ್ ಮಾಡಿದ ಹಾರ್ದಿಕ್ ಪಾಂಡ್ಯ

2029.396 ಅಂಕಗಳೊಂದಿಗೆ ಭಾರತ ಆರನೇ ಸ್ಥಾನದಲ್ಲಿದ್ದು ಮೊದಲ ಸ್ಥಾನದಲ್ಲಿ 3049.495 ಅಂಕಗಳಿಸಿರುವ ನೆದರ್‌ಲ್ಯಾಂಡ್ಸ್ ಇದ್ದರೆ 2674.837 ಅಂಕಗಳಿಸಿರುವ ಅರ್ಜೆಂಟಿನಾ 2ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 2440.750 ಅಂಕ ಗಳಿಸಿದ್ದು ಇಂಗ್ಲೆಂಡ್ 2204.590 ಮತ್ತು ಜರ್ಮನಿ 2201.085 ಅಂಕಗಳೊಂದಿಗೆ ಅಗ್ರ ಐದು ತಂಡಗಳಾಗಿದೆ.

ಇನ್ನು 2021/22ರ FIH ಹಾಕಿ ಪ್ರೊ ಲೀಗ್ ಟೂರ್ನಿಯಲ್ಲಿ ಭಾರತ 8 ಪಂದ್ಯಗಳಲ್ಲಿ 22 ಅಂಕಗಳನ್ನು ಗಳಿಸಿದ್ದು 3ನೇ ಸ್ಥಾನದಲ್ಲಿದೆ. ಜೂನ್ 11 ಹಾಗೂ 12ರಂದು ಬೆಲ್ಜಿಯಂ ತಂಡದ ವಿರುದ್ಧ ಭಾರತೀಯ ವನಿತಾ ತಂಡ ಡಬಲ್ ಹೆಡ್ಡರ್ ಮುಖಾಮುಖಿಯಲ್ಲಿ ಎದುರಾಗಲಿದ್ದು ಈ ಪಂದ್ಯ ಕೂಡ ಕುತೂಹಲ ಮೂಡಿಸಿದೆ.

ಸಾಧನೆಯ ಬಗ್ಗೆ ಮಾತನಾಡಿದ ಭಾರತೀಯ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಜನ್ನೆಕೆ ಸ್ಕೋಪ್‌ಮನ್ ಸಂತಸ ವ್ಯಕ್ತಪಡಿಸಿದ್ದಾರೆ. "ಒಂದು ತಂಡವಾಗಿ ಮಹಿಳಾ ಹಾಕಿಯಲ್ಲಿ ನಾವು ಸುಧಾರಣೆ, ಬೆಳವಣಿಗೆ ಕಾಣಲು ಹಾಗೂ ಸ್ಥಿತ ಪ್ರದರ್ಶನ ನೀಡುವ ಮೂಲಕ ಪ್ರಬಲ ಸ್ಫರ್ಧಿಗಳಾಗುವ ಗುರಿ ಹೊಂದಿದ್ದೇವೆ. ಎಫ್‌ಐಹೆಚ್ ವಿಶ್ವ ಶ್ರೇಯಾಂಕದಲ್ಲಿನ ಏರಿಕೆ ಈ ಹಾದಿಯಲ್ಲಿನ ಉತ್ತಮ ಸೂಚನೆಯಾಗಿದೆ" ಎಂದಿದ್ದಾರೆ.

"ಇನ್ನು ಇದೇ ಸಂದರ್ಭದಲ್ಲಿ ಮಹಿಳಾ ಹಾಕಿ ಪ್ರೊ ಲೀಗ್ ಜೊತೆಗೆ FIH ಮಹಿಳಾ ವಿಶ್ವಕಪ್ ಕೂಡ ಹತ್ತಿರವಾಗುತ್ತಿದೆ. ಇಂಥಾ ಸಂದರ್ಭದಲ್ಲಿ ನಮ್ಮ ಗಮನ ಆಟದ ಮೇಲಿನ ಗಮನ ಕಳೆದುಕೊಂಡರೆ ಪರಿಸ್ಥಿತಿ ತಕ್ಷಣವೇ ಬದಲಾಗಲಿದೆ" ಎಂಬ ಎಚ್ಚರಿಕೆಯ ಮಾತುಗಳನ್ನು ಕೂಡ ಆಡಿದ್ದಾರೆ ಕೋಚ್ ಸ್ಕೋಪ್‌ಮನ್.

IPL 2022: ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ಅಬ್ಬರಿಸಿದ ಐವರು ಆಟಗಾರರಿವರುIPL 2022: ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ಅಬ್ಬರಿಸಿದ ಐವರು ಆಟಗಾರರಿವರು

ಮಹಿಳಾ ಹಾಕಿ ತಂಡದ ಈ ಸಾಧನೆಗೆ ತಂಡದ ನಾಯಕಿ ಸವಿತಾ ಕೂಡ ಪ್ರತಿಕ್ರಿಯೆ ನೀಡಿದ್ದು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. "ಇದು ನಮ್ಮ ತಂಡದ ಆಟಗಾರರ ಪರಿಶ್ರಮಕ್ಕೆ ದೊರೆತ ಪ್ರತಿಫಲವಾಗಿದೆ. ಬಲಿಷ್ಠ ಎದುರಾಳಿಗಳ ವಿರುದ್ಧ ನಮ್ಮ ತಂಡ ಒಗ್ಗಟ್ಟಾಗಿ ಹೋರಾಡಿದ್ದು ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದೇವೆ. ನಮ್ಮ ಬೆಳವಣಿಗೆಯ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದ್ದು ತಂಡವಾಗಿ ನಾವೆಲ್ಲಾ ಒಟ್ಟಾಗಿ ಕಲಿಯುತ್ತಿದ್ದೇವೆ" ಎಂದಿದ್ದಾರೆ ಸವಿತಾ.

Story first published: Tuesday, May 31, 2022, 18:44 [IST]
Other articles published on May 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X