ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಹಾಸನ ಮೂಲದ ಅಂತರಾಷ್ಟ್ರೀಯ ಪಂಜ ಕುಸ್ತಿ ಪಟು ಮಧುರಾ ಕೆ.ಎನ್

Madhura KN

ಮಧುರಾ ಕೆ.ಎನ್ , ಅಂತರಾಷ್ಟ್ರೀಯ ಮಟ್ಟದ ಪಂಜ ಕುಸ್ತಿ ಪಟು. ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ತನ್ನನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ಯುವ ಪಂಜ ಕುಸ್ತಿ ಆಟಗಾರ್ತಿ. ಹಾಸನ ಮೂಲದ ಮಧುರಾ ರಾಜ್ಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ , ಚಾಂಪಿಯನ್‌ಶಿಪ್‌ಗಳಲ್ಲಿ ಭಾಗಿಯಾಗಿ ಪಂಜ ಕುಸ್ತಿಯಲ್ಲಿ ತಮ್ಮ ತಾಕತ್ತನ್ನ ಪ್ರದರ್ಶಿಸಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಮಧುರಾ ಕೆ.ಎನ್ ಅವರು ಆಡದೇ ಉಳಿದಿರುವ ಕ್ರೀಡೆಗಳಿಲ್ಲ. ಸಿಂಗಲ್ ಇವೆಂಟ್‌ಗಳಲ್ಲಷ್ಟೇ ಅಲ್ಲದೆ ಗ್ರೂಪ್ ಗೇಮ್‌ಗಳಲ್ಲೂ ಮಧುರಾ ಕೆ.ಎನ್ ಭಾಗಿಯಾಗುವ ಮೂಲಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ನಮ್ಮೂರ ಪ್ರತಿಭೆ: ಇಕ್ವೆಸ್ಟ್ರಿಯನ್ ಚಾಂಪಿಯನ್, ಬೆಂಗಳೂರಿನ ಫವಾದ್ ಮಿರ್ಜಾನಮ್ಮೂರ ಪ್ರತಿಭೆ: ಇಕ್ವೆಸ್ಟ್ರಿಯನ್ ಚಾಂಪಿಯನ್, ಬೆಂಗಳೂರಿನ ಫವಾದ್ ಮಿರ್ಜಾ

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ಅಂತರಾಷ್ಟ್ರೀಯ ಮಟ್ಟ ಪಂಜ ಕುಸ್ತಿ ಪಟು ಕನ್ನಡತಿ ಮಧುರಾ ಕೆ.ಎನ್ ಕುರಿತಾಗಿ ಪ್ರಮುಖ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ಮಧುರಾ ಕುರಿತು ಕೆಲವು ಪ್ರಮುಖ ಮಾಹಿತಿಗಳು ಈ ಕೆಳಗಿದೆ.

ಬಾಲ್ಯ ಜೀವನ ಮತ್ತು ಪರಿಚಯ

ಬಾಲ್ಯ ಜೀವನ ಮತ್ತು ಪರಿಚಯ

ಜನವರಿ 3, 1996ರಲ್ಲಿ ನಾಗೇಂದ್ರ ಮತ್ತು ಶಿವಮ್ಮ ದಂಪತಿಗೆ ಜನಿಸಿದ್ರು. ಹಾಸನ ಜಿಲ್ಲೆಯ ಕೊಂಡಚ್ಚಿಯಲ್ಲಿ ಜನಿನಿದ್ರು. ಬಿಕಾಂ ಪದವೀಧರೆಯಾಗಿರುವ ಇವರು ಕುಸ್ತಿ, ಪಂಜ ಕುಸ್ತಿ, ಹ್ಯಾಂಡ್‌ಬಾಲ್‌, ಜೂಡೋ, ಅಥ್ಲೆಟಿಕ್ಸ್‌ ಶಾಟ್‌ಪುಟ್‌, ಹಲವಾರು ಕ್ರೀಡೆಗಳಲ್ಲಿ ರಾಜ್ಯ , ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ನಮ್ಮೂರ ಪ್ರತಿಭೆ: ಬೆಂಗಳೂರಿನ ಯುವ ಫಾರ್ಮುಲಾ 2, DTM ರೇಸರ್‌ ಅರ್ಜುನ್ ಮೈನಿ

ಮಧುರಾ ಪ್ರಮುಖ ಸಾಧನೆಗಳು

ಮಧುರಾ ಪ್ರಮುಖ ಸಾಧನೆಗಳು

2011-12 ಅಂಡಮಾನ್ ನಡೆದ ರಾಷ್ಟ್ರಮಟ್ಟದ ಫುಟ್ಬಾಲ್ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ

2012-13ರಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯಸ್ಥಾನ

2015-16ರಲ್ಲಿ ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಶಸ್ತಿ

2018-19ರಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ರಾಷ್ಟ್ರಮಟ್ಟದ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ

2019-20ರಲ್ಲಿ ಛತ್ತೀಗಡದಲ್ಲಿ ನಡೆದ ಪಂಜಕುಸ್ತಿ ಪಂದ್ಯಾವಳಿಯಲ್ಲಿ ಎರಡು ಚಿನ್ನದ ಪದಕ

ರೊಮೆನಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಪಂಜ ಕುಸ್ತಿಯಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಗೆ ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಧುರ ಭಾಗಿಯಾಗಿದ್ದಾರೆ.

ನಮ್ಮೂರ ಪ್ರತಿಭೆ: ಭಾರತದ ಉದಯೋನ್ಮುಖ ಟೇಬಲ್ ಟೆನಿಸ್ ತಾರೆ ಅರ್ಚನಾ ಕಾಮತ್

ಪ್ರಮುಖ ಪ್ರಶಸ್ತಿಗಳು

ಪ್ರಮುಖ ಪ್ರಶಸ್ತಿಗಳು

ಮಧುರಾ ಕೆ.ಎನ್‌ ಹಲವಾರು ಕ್ರೀಡೆಗಳಲ್ಲಿ ಭಾಗಿಯಾಗುವ ಮೂಲಕ ಮಲ್ಟಿ ಸ್ಪೋರ್ಟ್‌ ಸ್ಟಾರ್ ಆಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಹೀಗಾಗಿ ಇವರ ಸಾಧನೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

2018ರಲ್ಲಿ ಶ್ರೀ ಹಾಸನಾಂಭ ಪ್ರಶಸ್ತಿ

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಕರ್ನಾಟಕ ಕುಮಾರಿ ಪ್ರಶಸ್ತಿ

2019ರಲ್ಲಿ ಮಿಸ್ ಕರ್ನಾಟಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Story first published: Monday, June 20, 2022, 19:58 [IST]
Other articles published on Jun 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X