ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶೂಟಿಂಗ್ ನಲ್ಲಿ ಬೆಳ್ಳಿ ಗೆದ್ದ ಬೆಂಗಳೂರಿನ ಪ್ರಕಾಶ್

By Prasad

ಗ್ಲಾಸ್ಗೋ, ಜು. 26 : ಬೆಂಗಳೂರಿನ ಪ್ರಕಾಶ್ ನಂಜಪ್ಪ ಅವರು ಕಾಮನ್ವೆಲ್ತ್ ಕ್ರೀಡಾಕೂಟ 2014ರ ಪುರುಷರ 10 ಮೀಟರ್ ಏರ್ ಪಿಸ್ಟಲ್ ಶೂಟಿಂಗ್ ಸ್ಪರ್ಧೆಯಲ್ಲಿ ಶನಿವಾರ ಬೆಳ್ಳಿ ಪದಕ ಗಳಿಸಿದ್ದಾರೆ. ಇದರೊಂದಿಗೆ ಮೂರು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಸೇರಿ ಒಟ್ಟು ಹನ್ನೊಂದು ಪದಕಗಳನ್ನು ಭಾರತ ಗೆದ್ದುಕೊಂಡಂತಾಗಿದೆ.

ಬೆಂಗಳೂರಿನ ಹೆಮ್ಮೆಯ 38 ವರ್ಷದ ಪ್ರಕಾಶ್ ನಂಜಪ್ಪ ಅವರು ಒಟ್ಟು 198.2 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರೆ, ಆಸ್ಟ್ರೇಲಿಯಾದ ಡೇನಿಯೆಲ್ ರಪಾಚೋಲಿ ಅವರು 199.5 ಅಂಕ ಗಳಿಸಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

CWG: After paralytic attack, India's Prakash Nanjappa wins Silver

ಪ್ರಕಾಶ್ ನಂಜಪ್ಪ ಅವರ ಈ ಸಾಧನೆಯ ಹಿಂದೆ ನೋವಿನ ಕಥೆಯೂ ಇದೆ. ಕಳೆದ ವರ್ಷ ಸ್ಪೇನ್ ನಲ್ಲಿ ಇದೇ ಸಮಯದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದರು. ಅವರಿಗೆ ಬೆಲ್ಸ್ ಪಾಲ್ಸಿ (ಒಂದು ಬಗೆಯ ಮೌಖಿಕ ಪಾರ್ಶ್ವವಾಯು) ಆಗಿದೆ ಎಂದು ತಿಳಿದುಬಂದಿತ್ತು. ಇದನ್ನು ಮೆಟ್ಟಿ ನಿಂತಿರುವ ಛಲದಂಕಮಲ್ಲ ಪ್ರಕಾಶ್ ಅವರು ಹೆಮ್ಮೆಯ ಸಾಧನೆ ಮಾಡಿದ್ದಾರೆ.

ಪ್ರಕಾಶ್ ಅವರ ತಂದೆ ಪಿಎನ್ ಪಾಪಣ್ಣ ಅವರು ಕೂಡ ರಾಷ್ಟ್ರಮಟ್ಟದ ಶೂಟರ್ ಆಗಿದ್ದರು. ಅವರಿಂದ ಸ್ಫೂರ್ತಿ ಪಡೆದ ಪ್ರಕಾಶ್ ಅವರು ಶೂಟಿಂಗ್ ಆರಿಸಿಕೊಂಡಿದ್ದರು. ಆದರೆ, 2003ರಲ್ಲಿ ಇದರಿಂದ ಅಲ್ಪಕಾಲಿಕ ಬಿಡುಗಡೆ ಪಡೆದಿದ್ದ ಅವರು, ಕೆನಡಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ 6 ವರ್ಷ ಕೆಲಸ ಮಾಡಿದ್ದರು. 2009ರಲ್ಲಿ ಭಾರತಕ್ಕೆ ಮರಳಿದ ಅವರು ತಮ್ಮ ಗುರಿಯನ್ನು ಬದಲಿಸಿಕೊಂಡಿದ್ದರು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X