ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೇಬಲ್ ಟೆನಿಸ್ ಟೀಮ್ ವರ್ಲ್ಡ್ ಚಾಂಪಿಯನ್‌ಶಿಪ್: ಚೈನೀಸ್ ತೈಪೆ ವಿರುದ್ಧ ಸೋತು ಹೊರಬಿದ್ದ ಭಾರತ ಮಹಿಳಾ ತಂಡ

Table Tennis Team World Championship: Indian womens lost against Chinese Taipei in round of 16 stage

ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ ಟೇಬಲ್ ಟೆನಿಸ್ ಟೀಮ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ನಿರಾಸೆ ಅನುಭವಿಸಿದೆ. ಚೈನೀಸ್ ತೈಪೆ ವಿರುದ್ಧ ನಡೆದ ಈ ಪಂದ್ಯದಲ್ಲಿ ಮಣಿಕಾ ಬಾತ್ರಾ, ಶ್ರೀಜಾ ಅಕುಲಾ ಮತ್ತು ದಿಯಾ ಚಿತಾಲೆ ಅವರನ್ನೊಳಗೊಂಡ ತಂಡ ತಮ್ಮ ಸಿಂಗಲ್ಸ್ ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಭಾರತ ಈ ಸ್ಪರ್ಧೆಯಿಂದ ಹೊರಬಿದ್ದಿದೆ.

ಟೂರ್ನಮೆಂಟ್‌ನುದ್ದಕ್ಕೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿರುವ ಮಣಿಕಾ ಬಾತ್ರಾ ವಿಶ್ವದ 22ನೇ ಶ್ರೇಯಾಂಕದ ಆಟಗಾರ್ತಿ ಚೆನ್ ಸ್ಜು-ಯು ವಿರುದ್ಧ ನಡೆದ ಪಂದ್ಯದಲ್ಲಿ ಸೋಲು ಅನುಭವಿಸಿದರು. ಬಾತ್ರಾ ಈ ಸೆಣೆಸಾಟದಲ್ಲಿ 11-7, 11-9, 11-3 ಅಂಕಗಳ ಪಡೆದು ಸೋಲು ಅನುಭವಿಸಿದರು. ನಂತರ ಶ್ರೀಜಾ ಅಕುಲಾ ವಿರುದ್ಧ ಕೂಡ ಚೈನೀಸ್ ತೈಪೆ ಆಟಗಾರ್ತಿಯ ವಿರುದ್ಧ ಸೋಲು ಅನುಭವಿಸುವ ಮೂಲಕ 0-2 ಅಂತರದಿಂದ ಹಿನ್ನಡೆ ಅನುಭವಿಸಿತು. ಶ್ರೀಜಾ ಅಕುಲಾ ವಿರುದ್ಧ ಚೈನೀಸ್ ತೈಪಡೆ ತಂಡದ ಚೆಂಗ್ ಐ-ಚಿಂಗ್ 11-8, 5-11, 11-6, 11-9 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

T20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರT20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರ

ಅಂತಿಮವಾಗಿ 19 ವರ್ಷದ ದಿಯಾ ಚಿತಾಲೆ ಅವರು 6-11, 11-9, 11-9, 8-11, 7-11 ಅಂತರದಿಂದ ಲಿಯು ಹ್ಸಿಂಗ್-ಯಿನ್ ವಿರುದ್ಧ ಸೋಲು ಮೂಲಕ ಭಾರತ ಮಹಿಳಾ ತಂದ ಹೋರಾಟ ಅಂತ್ಯವಾಯಿತು. ಇದಕ್ಕೂ ಮೊದಲು ಗ್ರೂಪ್ ಹಂತದಲ್ಲಿ ಭಾರತವು ಜೆಕ್ ರಿಪಬ್ಲಿಕ್ ಮತ್ತು ಈಜಿಪ್ಟ್ ತಂಡಗಳನ್ನು ಸೋಲಿಸಿತ್ತು. ಆದರೆ ಜರ್ಮನಿ ವಿರುದ್ಧ ಸೋಲು ಅನುಭವಿಸಿದ ಕಾರಣ ಗುಂಪಿನಲ್ಲಿ ಎರಡನೇ ಸ್ಥಾನವನ್ನು ಗಳಿಸಿತು.

ಏತನ್ಮಧ್ಯೆ, ಪುರುಷರ ತಂಡವು ತನ್ನ ಕ್ವಾರ್ಟರ್‌ಫೈನಲ್ ಸೆಣೆಸಾಟದಲ್ಲಿ ಅಗ್ರ ಶ್ರೇಯಾಂಕದ ಚೀನಾ ತಂಡವನ್ನು ಎದುರಿಸಲಿದೆ. ಪುರುಷರ ತಂಡ ಫ್ರಾನ್ಸ್ ವಿರುದ್ಧ ಸೋತ ನಂತರ ನಾಕೌಟ್ ಹಂತಕ್ಕೆ ಪ್ರವೇಶ ದುರ್ಗಮವಾಗಿತ್ತು. ಆದರೆ ಹಾಂಗ್ ಕಾಂಗ್ ತಂಡದ ಫಲಿತಾಶಂ ಹಾಗೂ ಮತ್ತು ಶ್ರೇಯಾಂಕದ ಕಾರಣದಿಂದಾಗಿ ಸ್ಪರ್ಧೆಯಲ್ಲಿ ಮುಂದುವರಿದಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022; ಫೈನಲ್‌ನಲ್ಲಿ ಗೌತಮ್ ಗಂಭೀರ್ ಬಳಗಕ್ಕೆ ಪಠಾಣ್ ಬಳಗ ಸವಾಲುಲೆಜೆಂಡ್ಸ್ ಲೀಗ್ ಕ್ರಿಕೆಟ್ 2022; ಫೈನಲ್‌ನಲ್ಲಿ ಗೌತಮ್ ಗಂಭೀರ್ ಬಳಗಕ್ಕೆ ಪಠಾಣ್ ಬಳಗ ಸವಾಲು

ಭಾರತ ಪುರುಷರ ತಂಡ ಅಂತಿಮ 16ರ ಸುತ್ತಿಗೆ ಪ್ರವೇಶ ಪಡೆದರೂ ಇದೀಗ ಅಗ್ರ ಶ್ರೇಯಾಂಕದ ಚೀನಾವನ್ನು ಎದುರಿಸುವ ಕಠಿಣ ಸವಾಲು ಮುಂದಿದೆ. ಭಾರತ ತಂಡ ಗ್ರೂಪ್ ಹಂತದಲ್ಲಿ ವಿಶ್ವದ 2ನೇ ಶ್ರೇಯಾಂಕದ ಜರ್ಮನಿಯನ್ನು ಸೋಲಿಸಿತ್ತು. ಆದರೆ ಬಲಿಷ್ಠ ಚೀನಾ ಪಡೆ ಭಾರತೀಯ ಆಟಗಾರರಿಗೆ ಇನ್ನೂ ದೊಡ್ಡ ಸವಾಲನ್ನು ನೀಡಲಿದೆ.

Story first published: Wednesday, October 5, 2022, 20:19 [IST]
Other articles published on Oct 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X