ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ರೀಡಾ ಇತಿಹಾಸದಲ್ಲಿ ಟಾಪ್ 11 ಇಂಜ್ಯುರಿಗಳು: 1955-2022

Sports injury

ಪ್ರತಿಷ್ಠಿತ ವಿಂಬಲ್ಡನ್ ಸೆಮಿಫೈನಲ್‌ನಿಂದ ಇತ್ತೀಚೆಗಷ್ಟೇ 22 ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ವಿಜೇತ ರಾಫೆಲ್ ನಡಾಲ್‌ ಹೊರೆನಡೆದಿದ್ದನ್ನು ನೀವು ಕೇಳಿದ್ದೀರಿ. ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ವಿರುದ್ಧದ ತನ್ನ ನಿಗದಿತ ಸೆಮಿಫೈನಲ್ ಪಂದ್ಯದ ಮೊದಲು ರಾಫೆಲ್ ನಡಾಲ್ ಹೊಟ್ಟೆಯ ಗಾಯಕ್ಕೆ ತುತ್ತಾದ ಪರಿಣಾಮ ಸೆಮಿಫೈನಲ್ ಆಡದೆ ಹೊರನಡೆದರು.

ಟೆನಿಸ್‌ನಲ್ಲಿ ಈ ರೀತಿಯಲ್ಲಿ ಆಟಗಾರರು ಹೊರನಡೆಯುವುದು ಸಾಮಾನ್ಯ. ಟೆನಿಸ್ ಅಷ್ಟೇ ಅಲ್ಲದೆ ಬಹುತೇಕ ಎಲ್ಲಾ ಕ್ರೀಡೆಗಳಲ್ಲೂ ಸ್ಟಾರ್ ಆಟಗಾರರು, ಮಹತ್ವದ ಟೂರ್ನಮೆಂಟ್‌ಗಳಲ್ಲಿ ಗಾಯಗೊಂಡು ಹೊರನಡೆದಿರುವ ಉದಾಹರಣೆಗಳು ಸಾಕಷ್ಟಿವೆ. ಕ್ರೀಡಾಪಟುಗಳಿಗೆ ಈ ಗಾಯದ ಸಮಸ್ಯೆ ಬಹಳ ಬೇಗನೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದು ಅವರ ವೃತ್ತಿಜೀವನದುದ್ದಕ್ಕೂ ಕಾಡುತ್ತದೆ. ಮತ್ತೆ ಕೆಲವರು ಬೇಗನೆ ಹುಷಾರಾಗಿದ್ದನ್ನ ಸಹ ನೋಡಬಹುದು.

ಹೀಗೆ ರಾಫೆಲ್ ನಡಾಲ್‌ ರೀತಿಯಲ್ಲಿ ಇತರೆ ಬೇರೆ ಬೇರೆ ಕ್ರೀಡಾಪಟುಗಳು, ಪ್ರಮುಖ ಟೂರ್ನಮೆಂಟ್‌ನಲ್ಲಿ ಯಾವ ಕಾರಣಕ್ಕಾಗಿ ಮೈದಾನದಿಂದ ಹೊರನಡೆಯಬೇಕಾಯಿತು ಎಂಬುದರ ಕುರಿತು ತಿಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಮುಂದೆ ಓದಿ

ಫುಟ್ಬಾಲ್‌

ಫುಟ್ಬಾಲ್‌

1. ನೇಮರ್ ವರ್ಸಸ್ ಕೊಲಂಬಿಯಾ 2014
ಬ್ರೆಜಿಲ್‌ನಲ್ಲಿ ನಡೆದ 2014 ಫುಟ್‌ಬಾಲ್ ವಿಶ್ವಕಪ್‌ನಲ್ಲಿ, ಕೊಲಂಬಿಯಾ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದ ವೇಳೆ ಆತಿಥೇಯ ತಂಡದ ಸೂಪರ್ ಸ್ಟಾರ್ ನೇಮರ್ ಗಾಯಗೊಂಡರು. ಕೊಲಂಬಿಯಾದ ಡಿಫೆಂಡರ್ ಕ್ಯಾಮಿಲಿಯೊ ಝುನಿಗಾ ಅವರು ನೇಮಾರ್ ಅವರ ಬೆನ್ನಿಗೆ ಮೊಣಕಾಲು ತಾಗಿಸಿದರು, ಇದು ಬೆನ್ನುಮೂಳೆಯ ಗಾಯಕ್ಕೆ ಕಾರಣವಾಯಿತು. ಈ ಮೂಲಕ ವಿಶ್ವಕಪ್ ಮಧ್ಯದಲ್ಲೇ ನೇಮರ್ ವಿಶ್ವಕಪ್ ಕೊನೆಗೊಂಡಿತು.

2 ಕ್ರಿಸ್ಟಿಯಾನೋ ರೊನಾಲ್ಡೊ ವರ್ಸಸ್ ಫ್ರಾನ್ಸ್,
2016 ಯುರೋ 2016 ರ ಫೈನಲ್‌ನಲ್ಲಿ ಪೋರ್ಚುಗಲ್ ಫ್ರಾನ್ಸ್ ಅನ್ನು ಎದುರಿಸಿತು ಮತ್ತು ಅವರ ದೊಡ್ಡ ಭರವಸೆ ರೊನಾಲ್ಡೊ ಮೇಲೆ ಇತ್ತು. ಆದರೆ ಡಿಮಿಟ್ರಿ ಪಯೆಟ್ ಅವರೊಂದಿಗಿನ ಘರ್ಷಣೆಯು ರೊನಾಲ್ಡೊ ಆಟವನ್ನೇ ಮುಗಿಸಿಬಿಟ್ಟಿತು. ಇಲ್ಲಿ ರೊನಾಲ್ಡೊ ಗಾಯಗೊಂಡರೂ ಸಹ ಪೋರ್ಚುಗಲ್ ಟ್ರೋಫಿ ಗೆದ್ದುಕೊಂಡಿತು.

3 ಲಿಯೋನೆಲ್ ಮೆಸ್ಸಿ ವರ್ಸಸ್ ಸೆವಿಲ್ಲಾ, 2018
ಬಾರ್ಸಿಲೋನಾ ತಂಡದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ತನ್ನ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದರೆ ಅವರು ಸೆವಿಲ್ಲಾ ವಿರುದ್ಧ ರೇಡಿಯಲ್ ಮೂಳೆ ಗಾಯವನ್ನು ಅನುಭವಿಸಿದರು. ಇದು ಕೆಲವು ವಾರಗಳ ಕಾಲ ಮೆಸ್ಸಿಯನ್ನು ಟೂರ್ನಿಯಿಂದ ಹೊರಗಿರುವಂತೆ ಮಾಡಿತು. ಆದರೆ ಬಾರ್ಸಿಲೋನಾ ಲಾ ಲಿಗಾ ಟ್ರೋಫಿಯನ್ನು ಗೆದ್ದುಕೊಂಡಿತು.

ಟೆನಿಸ್

ಟೆನಿಸ್

4 ಅಲೆಕ್ಸಾಂಡರ್ ಜ್ವೆರೆವ್, 2022
ಇದೇ ವರ್ಷದಲ್ಲಿ ನಡೆದ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಜರ್ಮನ್ ಟೆನಿಸ್ ಸ್ಟಾರ್‌ ತಾರೆ ಅಲೆಕ್ಸಾಂಡರ್ ಜ್ವೆರೆವ್ ಗಾಯಾಳುವಾಗಿ ಸೆಮಿಫೈನಲ್‌ನಿಂದ ಹೊರಬಿದ್ದರು. ಚಾಂಪಿಯನ್ ಆಫ್ ಚಾಂಪಿಯನ್ ರಾಫೆಲ್ ನಡಾಲ್ ಅವರು ಈ ಮೂಲಕ ಸುಲಭವಾಗಿ ಫೈನಲ್ ತಲುಪಿ ಪ್ರಶಸ್ತಿ ಗೆದ್ದರು. ಪಂದ್ಯದ ವೇಳೆ ಅಲೆಕ್ಸಾಂಡರ್ ಜ್ವೆರೆವ್ ತಮ್ಮ ಪಾದಕ್ಕೆ ತೀವ್ರವಾಗಿ ಗಾಯಗೊಂಡು ಪಂದ್ಯದಿಂದ ಹಿಂದೆ ಸರಿಯಬೇಕಾಯಿತು. ಅವರು ಕೆಲವು ವಾರಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆದರೆ ಈ ವರ್ಷ ಮತ್ತೆ ಟೆನಿಸ್ ಕೋರ್ಟ್‌ಗೆ ಹಿಂದಿರುಗುವುದು ಅಸಂಭವವಾಗಿದೆ.

5 ರಾಫೆಲ್ ನಡಾಲ್, 2022
ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಎದುರಾಲಿ ಗಾಯದಿಂದಾಗಿ ಫೈನಲ್ ತಲುಪಿದ್ದ ನಡಾಲ್ ವಿಪರ್ಯಾಸ ಅಂದ್ರೆ, ವಿಂಬಲ್ಡನ್‌ನ ಸೆಮಿಫೈನಲ್‌ಗೂ ಮೊದಲೇ ಗಾಯಗೊಂಡು ಹೊರನಡೆದರು. ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ವಿರುದ್ಧದ ತನ್ನ ನಿಗದಿತ ಸೆಮಿಫೈನಲ್ ಪಂದ್ಯದ ಮೊದಲು ರಾಫೆಲ್ ನಡಾಲ್ ಹೊಟ್ಟೆಯ ಗಾಯಕ್ಕೆ ತುತ್ತಾದ ಪರಿಣಾಮ ಸೆಮಿಫೈನಲ್ ಆಡದೆ ನಿರಾಸೆಗೊಂಡರು.

6 ಆಂಡಿ ಮುರ್ರೆ, 2005
ಆ ಸಮಯದಲ್ಲಿ ಬ್ರಿಟಿಷ್ ನಂ 1 ಟೆನಿಸ್ ಆಟಗಾರ ಆಂಡಿ ಮುರ್ರೆ, ಥಾಮಸ್ ಜೋಹಾನ್ಸನ್ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಪತನವನ್ನು ಅನುಭವಿಸಿದರು. 3ನೇ ಸೆಟ್‌ನಲ್ಲಿ ಸ್ಕೋರ್ 5-5 ರಲ್ಲಿದ್ದಾಗ ಮರ್ರೆ ಗಾಯಗೊಂಡರು. ಅವರು ಉತ್ಸಾಹದಿಂದ ಮುಂದುವರಿದರೂ, ಸಹ ಮುರ್ರೆಗೆ ಕಷ್ಟಪಟ್ಟು ಓಡಲು ಸಾಧ್ಯವಾಗಲಿಲ್ಲ ಮತ್ತು ಅಂತಿಮವಾಗಿ ಎರಡು ಪಂದ್ಯಗಳ ನಂತರ ಪಂದ್ಯವನ್ನು ಕಳೆದುಕೊಂಡರು.

ಅಶ್ವಿನ್‌ರನ್ನೇ ತಂಡದಿಂದ ಕೈ ಬಿಟ್ಟ ಮೇಲೆ ಕೊಹ್ಲಿಯನ್ನ ಏಕೆ ಬಿಡಬಾರದು? ಕಪಿಲ್ ದೇವ್ ಪ್ರಶ್ನೆ

ಮೋಟಾರ್‌ಸ್ಪೋರ್ಟ್‌

ಮೋಟಾರ್‌ಸ್ಪೋರ್ಟ್‌

7 ಐರ್ಟನ್ ಸೆನ್ನಾ, 1994
ಲೆಜೆಂಡರಿ ಐರ್ಟನ್ ಸೆನ್ನಾ ಬ್ರೆಜಿಲಿಯನ್ 1994 ರ ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿನ ಅಪಘಾತಕ್ಕಾಗಿ ಭಾರಿ ಹಣವನ್ನು ಪಾವತಿಸಿದರು. ರ್ಯಾಲಿಯ ಸಮಯದಲ್ಲಿ ಸೆನ್ನಾ ವಾಹನ ಅಪ್ಪಳಿಸಿತು ಮತ್ತು ವೈದ್ಯರಿಗೆ ಅವನ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಹಿಂದಿನ ದಿನ ಇನ್ನೊಬ್ಬ ಚಾಲಕ ರೋಲ್ಯಾಂಡ್ ರಾಟ್ಜೆನ್ಬರ್ಗರ್ ತನ್ನ ಪ್ರಾಣವನ್ನು ಕಳೆದುಕೊಂಡಿದ್ದರಿಂದ ಮತ್ತು ರೂಬೆನ್ಸ್ ಬ್ಯಾರಿಚೆಲ್ಲೋ ಕೂಡ ಅಪಘಾತವನ್ನು ಅನುಭವಿಸಿದ ಕಾರಣ ಇದು ಮತ್ತಷ್ಟು ಘೋರವಾಗಿತ್ತು. ಆದರೆ ಅಧಿಕಾರಿಗಳು ಮರುದಿನವೇ ಓಟಕ್ಕೆ ಹಸಿರು ನಿಶಾನೆ ತೋರಿದರು.

8 ಲೆ ಮ್ಯಾನ್ಸ್ 1955
ಪಿಯರೆ ಲೆವೆಗ್ ಅವರು ಮರ್ಸಿಡಿಸ್ ಬೆಂಜ್ ಅನ್ನು ಓಡಿಸುತ್ತಿದ್ದರು ಮತ್ತು ಆಸ್ಟಿನ್-ಹೀಲಿಯೊಂದಿಗೆ ಡಿಕ್ಕಿ ಹೊಡೆದ ನಂತರ ಅವರ ಕಾರು ಪ್ರೇಕ್ಷಕರಿರುವತ್ತ ಅಪ್ಪಳಿಸಿತು. ಭಾರೀ ಸ್ಫೋಟ ಸಂಭವಿಸಿತು. ಇದರಿಂದಾಗಿ ನೆರೆದಿದ್ದ 81 ಜನರು ಪ್ರಾಣ ಕಳೆದುಕೊಂಡರು. ಅಲ್ಲದೆ ಈ ಅಪಘಾತದಿಂದಾಗಿ 100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಅದರ ನಂತರ, ಮರ್ಸಿಡಿಸ್ ಸುಮಾರು 30 ವರ್ಷಗಳ ಕಾಲ ರೇಸಿಂಗ್‌ನಿಂದ ದೂರವಿತ್ತು.

Ind vs Eng 2nd T20I: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಪ್ಲೇಯಿಂಗ್ 11, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್‌

ಕ್ರಿಕೆಟ್

ಕ್ರಿಕೆಟ್

9 ಯುವರಾಜ್ ಸಿಂಗ್, 2006
2006 ರ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಮೊಹಾಲಿಯಲ್ಲಿ ಅಭ್ಯಾಸ ಸೆಷನ್‌ನಲ್ಲಿ ಖೋ-ಖೋ ಆಡುವಾಗ ಯುವರಾಜ್ ಸಿಂಗ್ ಮೊಣಕಾಲಿನ ಗಾಯವನ್ನು ಅನುಭವಿಸಿದನು. ಆದ್ರೆ ಅದೃಷ್ಟವಶಾತ್ ಅವರು ಚೇತರಿಸಿಕೊಂಡು ಭಾರತಕ್ಕಾಗಿ ಆಡುವುದನ್ನು ಮುಂದುವರೆಸಿದರು. 2007 ಮತ್ತು 2011 ರಲ್ಲಿ ವಿಶ್ವಕಪ್‌ ವಿಜೇತರಾದರು. ಈ ಗಾಯದಿಂದಾಗಿ ಯುವರಾಜ್‌ ಸಿಂಗ್‌ ಫೀಲ್ಡಿಂಗ್‌ನಲ್ಲಿ ಹೆಚ್ಚು ಡೈವ್ ಮಾಡುವುದನ್ನ ತಗ್ಗಿಸಿದರು, ಇದು ಅವರನ್ನು ಫೀಲ್ಡರ್ ಆಗಿ ಪರಿಣಾಮಕಾರಿಯಾಗಿ ಕಡಿಮೆಗೊಳಿಸಿತು.

10 ಮಾರ್ಕ್ ಬೌಚರ್ 2012
ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಮಾರ್ಕ್ ಬೌಚರ್ ಸೋಮರ್‌ಸೆಟ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಇಮ್ರಾನ್ ತಾಹಿರ್ ಎಸೆತದಲ್ಲಿ ಬೆಲ್ಸ್ ತಗುಲಿ ಅವರ ಕಣ್ಣುಗಳಿಗೆ ಬಡಿದಿದ್ದರಿಂದ ಅವರ ಕಣ್ಣುಗಳಿಗೆ ಗಾಯವಾಯಿತು. ಬೌಚರ್ ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಗಾದರು. ಆದ್ರೆ ಅವರ ದೃಷ್ಟಿ ಭಾಗಶಃ ಕಳೆದುಕೊಂಡಿದ್ದರಿಂದ ಮತ್ತೊಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ, ಬೌಚರ್ 147 ಟೆಸ್ಟ್‌ಗಳನ್ನು ಆಡಿದ್ದರು ಮತ್ತು 998 ವಿಕೆಟ್ ಹಿಂಬದಿ ಔಟ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ, ಅವುಗಳಲ್ಲಿ 555 ಟೆಸ್ಟ್ ಕ್ರಿಕೆಟ್‌ನಲ್ಲಿ ಬಂದಿವೆ.

11 ಫಿಲಿಪ್ ಹ್ಯೂಸ್, 2014
ನವೆಂಬರ್ 27, 2014 ರಂದು ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಶೆಫಿಲ್ಡ್ ಶೀಲ್ಡ್ ದೇಶೀಯ ಟೂರ್ನಿಯಲ್ಲಿ ಸಂಭವಿಸಿದ ಆಕಸ್ಮಿಕ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದನ್ನು ಇನ್ನೂ ಕ್ರಿಕೆಟ್ ಲೋಕ ಮರೆತಿಲ್ಲ. ಅದಾಗಲೇ ಈ ದುರಂತ ನಡೆದು ಎಂಟು ವರ್ಷಗಳೇ ಕಳೆದಿವೆ.

ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿದ್ದ ಸೌತ್ ಆಸ್ಟ್ರೇಲಿಯಾ ಮತ್ತು ನ್ಯೂಸೌತ್ ವೇಲ್ಸ್‌ ನಡುವಿನ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ಪರ ಆಡುತ್ತಿದ್ದ ಫಿಲಿಪ್ ಹ್ಯೂಸ್ 63ರನ್‌ಗಳಿಸಿ ಉತ್ತಮವಾಗೇ ಆಡುತ್ತಿದ್ರು. ನ್ಯೂ ಸೌತ್‌ ವೇಲ್ಸ್‌ ವೇಗಿ ಸೀನ್ ಅಬೋಟ್ ಅವರ ಬೌನ್ಸರ್‌ ಅನ್ನು ಹುಕ್ ಮಾಡುವಲ್ಲಿ ಎಡವಿದ ಫಿಲಿಪ್ ಹ್ಯೂಸ್ ತಲೆಗೆ ಚೆಂಡು ಬಡಿದಿತ್ತು. ಇದಾದ ಕೆಲ ಸೆಕೆಂಡ್‌ಗಳಲ್ಲೇ ಫಿಲಿಫ್ ಹ್ಯೂಸ್ ಕುಸಿದು ಬಿದ್ದರು.

ಆತನನ್ನ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದಾದ್ರೂ , ಎರಡು ದಿನಗಳ ಕಾಲ ಜೀವನ್ಮರಣಗಳ ಹೋರಾಟದ ಬಳಿಕ ಸಿಡ್ನಿಯ ಸೈಂಟ್ ವಿನ್ಸೆಂಟ್‌ ಹಾಸ್ಪೆಟ್‌ನಲ್ಲಿ ನವೆಂಬರ್ 27, 2014ರಂದು ಕೊನೆಯುಸಿರೆಳೆದರು.

Story first published: Saturday, July 9, 2022, 16:51 [IST]
Other articles published on Jul 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X