ಆಸ್ಟ್ರೇಲಿಯಾ ವೀಸಾ ರದ್ದತಿ ವಿವಾದ: ಜೊಕೊವಿಕ್ ಮೇಲ್ಮನವಿ ಸೋಮವಾರಕ್ಕೆ ಮುಂದೂಡಿದ ನ್ಯಾಯಾಲಯ

ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಪ್ರವೇಶ ನಿರ್ಬಂದ ಹಾಗೂ ವೀಸಾ ರದ್ದತಿ ಕುರಿತಾಗಿ ನ್ಯಾಯಾಲಯ ಮೆಟ್ಟಿಲೇರಿದ್ದ ನೊವಾಕ್ ಜೊಕೊವಿಕ್ ಮೇಲ್ಮನವಿಯನ್ನು ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.

ಜನವರಿ 17ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾಗಿಯಾಗಲು ಕಾಂಗರೂ ನಾಡಿಗೆ ಕಾಲಿಟ್ಟಿದ್ದ ಜೊಕೊವಿಕ್ ತಮ್ಮ ವಿಶ್ವದಾಖಲೆಯ 21ನೇ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆಲ್ಲಲು ಗುರಿಯಿಟ್ಟಿಕೊಂಡಿದ್ದರು. ಆದ್ರೆ ಆಸ್ಟ್ರೇಲಿಯಾಗೆ ಕಾಲಿಡುತ್ತಿದ್ದಂತೆ ಶಾಕ್ ಕಾದಿತ್ತು. ಕೋವಿಡ್-19 ಲಸಿಕೆಯನ್ನ ಪಡೆಯದ ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ನಿರ್ಬಂಧವಿದ್ದು, ಸಂಪೂರ್ಣ ಲಸಿಕೆ ಪಡೆಯ ನೊವಾಕ್ ಜೊಕೊವಿಕ್‌ಗೆ ನಿರ್ಬಂಧ ಹೇರಲಾಗಿದೆ. ಸ್ವತಃ ಪ್ರಧಾನಿಯೇ ಘೋಷಿಸಿದಂತೆ ವೀಸಾ ರದ್ದು ಮಾಡಲಾಗಿದೆ.

ಸಚಿನ್ ತೆಂಡೂಲ್ಕರ್‌ರ ಆಲ್‌ ಟೈಂ ಬೆಸ್ಟ್‌ 11 ಆಟಗಾರರು: ಧೋನಿ, ಕೊಹ್ಲಿಗಿಲ್ಲ ಸ್ಥಾನ, ಮುರಳೀಧರನ್‌ನ ಲೆಕ್ಕಕ್ಕೆ ಇಟ್ಟಿಲ್ಲ!ಸಚಿನ್ ತೆಂಡೂಲ್ಕರ್‌ರ ಆಲ್‌ ಟೈಂ ಬೆಸ್ಟ್‌ 11 ಆಟಗಾರರು: ಧೋನಿ, ಕೊಹ್ಲಿಗಿಲ್ಲ ಸ್ಥಾನ, ಮುರಳೀಧರನ್‌ನ ಲೆಕ್ಕಕ್ಕೆ ಇಟ್ಟಿಲ್ಲ!

ವಿಶ್ವದ ನಂಬರ್ 1 ಟೆನಿಸ್ ಆಟಗಾರನಿಗೆ ಈ ರೀತಿಯ ಆದ ಅವಮಾನ ಕುರಿತಾಗಿ ಕ್ರೀಡಾ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ಆಸ್ಟ್ರೇಲಿಯಾ ನಿಯಮಗಳು ಎಲ್ಲರಿಗೂ ಒಂದೇ, ಗಡಿ ವಿಚಾರಕ್ಕೆ ಬಂದ್ರೆ ಎಲ್ಲರೂ ಒಂದೇ ಎನ್ನುವ ಮೂಲಕ ನೊವಾಕ್‌ಗೆ ಪ್ರವೇಶ ನಿರಾಕರಿಸಿತ್ತು.

ಈ ಕುರಿತು ನ್ಯಾಯಾಲಯ ಮೆಟ್ಟಿಲೇರಿದ್ದ ನೊವಾಕ್ ಮೇಲ್ಮನವಿಯನ್ನ ಸೋಮವಾರ (ಜನವರಿ 10) ಬೆಳಿಗ್ಗೆ 10 ಗಂಟೆಗೆ ಮುಂದೂಡಲಾಗಿದೆ. ಈ ಮೂಲಕ ಕೋವಿಡ್ -19 ಲಸಿಕೆಗೆ ವೈದ್ಯಕೀಯ ವಿನಾಯಿತಿಗಾಗಿ ಪುರಾವೆಗಳ ಹೊಂದಿರದ ಜೊಕೊವಿಕ್ ಸೋಮವಾರದವರೆಗೂ ಮೆಲ್ಬೋರ್ನ್‌ನಲ್ಲಿರುವ ವಲಸೆ ಬಂಧನ ಸೌಲಭ್ಯದಲ್ಲಿ ಉಳಿಯಲಿದ್ದಾರೆ.

ಫೆಡರಲ್ ಸರ್ಕ್ಯೂಟ್ ಕೋರ್ಟ್ ನ್ಯಾಯಾಧೀಶ ಆಂಥೋನಿ ಕೆಲ್ಲಿ ಅವರು ವೀಸಾ ನಿರ್ಧಾರಗಳ ಮರುಪರಿಶೀಲನೆಗಾಗಿ ಅರ್ಜಿಯನ್ನು ಸ್ವೀಕರಿಸುವಲ್ಲಿ ವಿಳಂಬವಾಗಿದೆ. ಹೀಗಾಗಿ ಜೊಕೊವಿಕ್ ಅವರ ಗಡೀಪಾರು ಮೇಲಿನ ತಾತ್ಕಾಲಿಕ ನಿಷೇಧವನ್ನು ತಿಳಿಸಿದ್ದು, ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಟೆನಿಸ್ ತಾರೆಯನ್ನು ಶುಕ್ರವಾರದವರೆಗೆ ಗಡೀಪಾರು ಮಾಡಬಾರದು ಎಂದು ಸರ್ಕಾರದ ವಕೀಲರು ಒಪ್ಪಿಕೊಂಡರು.

ಗುರುವಾರ ಬೆಳಗ್ಗೆ ಜೊಕೊವಿಕ್ ಪರ ವಕೀಲರು ಫೆಡರಲ್ ಸರ್ಕ್ಯೂಟ್ ಕೋರ್ಟ್‌ನಲ್ಲಿಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಜೊಕೊವಿಕ್‌ರನ್ನ ಗಡೀಪಾರು ಮಾಡುವುದನ್ನು ತಡೆಯಲು ಪ್ರಯತ್ನಿಸಿದರು. ಆದರೆ, ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದ ನ್ಯಾಯಾಲಯ, ಮತ್ತೆ ಸೋಮವಾರಕ್ಕೆ ಮುಂದೂಡಿದೆ.

ಆಸ್ಟ್ರೇಲಿಯನ್ ಓಪನ್‌ನಲ್ಲಿ ದಾಖಲೆ ಮುರಿಯುವ 21ನೇ ಗ್ರ್ಯಾಂಡ್‌ಸ್ಲಾಮ್‌ ಗೆಲುವನ್ನು ಬಯಸುತ್ತಿದ್ದ ಜೊಕೊವಿಕ್‌ ಬುಧವಾರ ರಾತ್ರಿ 11:30ರ ಸುಮಾರಿಗೆ ಮೆಲ್ಬೋರ್ನ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ದುಬೈನಿಂದ 14 ಗಂಟೆಗಳ ಪ್ರಯಾಣದ ನಂತರ ಮೆಲ್ಬರ್ನ್‌ಗೆ ಆಗಮಿಸಿದ ಬಳಿಕ ಈ ತೊಂದರೆ ಅನುಭವಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, January 6, 2022, 17:02 [IST]
Other articles published on Jan 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X