ಒಂದೇ ವರ್ಷದಲ್ಲಿ 4 ಸೀರಿಸ್ ವಿನ್ನರ್ ಶ್ರೀಕಾಂತ್‌ ಗೆ ಸೋಲುಣಿಸಿದ ಪ್ರಣಯ್

Posted By:

ನಾಗ್ಪುರ, ನವೆಂಬರ್ 8: ರಾಷ್ಟ್ರೀಯ ಸೀನಿಯರ್‌ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ಫೈನಲ್‌ ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಅವರನ್ನು ಮತ್ತೋರ್ವ ಭಾರತದ ಟೆನಿಸ್ ತಾರೆ ಪ್ರಣಯ್ ಮಣಿಸಿದರು.

ಬ್ಯಾಡ್ಮಿಂಟನ್ : ಫ್ರೆಂಚ್ ಓಪನ್ ಗೆದ್ದು, ಹೊಸ ದಾಖಲೆ ಬರೆದ ಶ್ರೀಕಾಂತ್

ಬುಧವಾರ ನಡೆದ ರಾಷ್ಟ್ರೀಯ ಸೀನಿಯರ್‌ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ಫೈನಲ್‌ ನಲ್ಲಿ ಭಾರತದ ಸ್ಟಾರ್ ಶೆಟ್ಲರ್ ಎಚ್.ಎಸ್ ಪ್ರಣಯ್ ಅವರು ವಿಶ್ವ 2ನೇ ಶ್ರೇಯಾಂಕಿತ ಮತ್ತೊಬ್ಬ ಭಾರತದ ಶೆಟ್ಲರ್ ಶ್ರೀಕಾಂತ್‌ ಅವರನ್ನು 21-15, 16-21, 21-7 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

Badminton National Championship: Prannoy Stuns Srikanth to Lift Maiden Title

ಭಾರತದ ಟೆನಿಸ್ ತಾರೆ ಕಿದಂಬಿ ಶ್ರೀಕಾಂತ್‌ ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸೀರಿಸ್ ಗೆದ್ದುಕೊಂಡಿದ್ದಾರೆ.

ಇಂಡೋನೇಷಿಯಾ ಓಪನ್, ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಗೆದ್ದುಕೊಂಡಿದ್ದ ಶ್ರೀಕಾಂತ್, ಸಿಂಗಪುರ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದರು. ನಂತರ ಡೆನ್ಮಾರ್ಕ್ ಓಪನ್ ಗೆದ್ದಿದ್ದಾರೆ.

ಇತ್ತೀಚೆಗೆ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಗೆಲ್ಲುವ ಮೂಲಕ ಕಿದಂಬಿ ಶ್ರೀಕಾಂತ್ ಹೊಸ ಭಾರತೀಯ ದಾಖಲೆ ಬರೆದಿದ್ದಾರೆ. ವಿಶ್ವದಲ್ಲಿ ನಾಲ್ವರು ಆಟಗಾರರು ಮಾತ್ರ ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸೀರಿಸ್ ಗೆದ್ದುಕೊಂಡಿದ್ದಾರೆ. ಅದರಲ್ಲಿ ಬಾರತದ ಕಿದಂಬಿ ಶ್ರೀಕಾಂತ್ ಒಬ್ಬರಾಗಿದ್ದಾರೆ.

Story first published: Wednesday, November 8, 2017, 18:24 [IST]
Other articles published on Nov 8, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ