ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಗೆದ್ದ ಭಾರತದ ಶ್ರೀಕಾಂತ್

Posted By:

ಬೆಂಗಳೂರು, ಅಕ್ಟೋಬರ್ 22: ಭಾರತದ ಕಿದಾಂಬಿ ಶ್ರೀಕಾಂತ್ ಅವರು ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಗೆದ್ದುಕೊಂಡಿದ್ದಾರೆ. ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾದ ಎದುರಾಳಿಯನ್ನು ಸೋಲಿಸಿದರು.

ಈ ಗೆಲುವಿನ ಮೂಲಕ 2017ರಲ್ಲಿ ಶ್ರೀಕಾಂತ್ ಅವರು ಮೂರನೇ ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

Kidambi Srikanth wins Denmark open Super series title

ಇದಕ್ಕೂ ಮುನ್ನ ಇಂಡೋನೇಷಿಯಾ ಓಪನ್, ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಗೆದ್ದುಕೊಂಡಿದ್ದರು. ಸಿಂಗಪುರ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದರು.

ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಲೀ ಹ್ಯೂನ್ ಅವರ ವಿರುದ್ಧ 21-10, 21-5ರ ನೇರ ಸೆಟ್ ಗಳಲ್ಲಿ 25 ವರ್ಷ ವಯಸ್ಸಿನ ಶ್ರೀಕಾಂತ್ ಅವರು ಗೆಲುವಿನ ನಗೆ ಬೀರಿದರು.

Story first published: Sunday, October 22, 2017, 22:10 [IST]
Other articles published on Oct 22, 2017
Please Wait while comments are loading...