ಮೊದಲ ಟಿ20 : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಗೆಲುವು

Posted By:
India Vs South Africa 1st T20 : India manages an easy 28 run victory | Oneindia Kannada
1st T20I: Dhawan, Bhuvneshwar power India to comprehensive 28-run win over SA

ಜೋಹಾನ್ಸ್ ಬರ್ಗ್, ಫೆಬ್ರವರಿ 18: ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತ ತಂಡವು 28 ರನ್‌ ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 1-0ರಲ್ಲಿ ಮುನ್ನಡೆ ಗಳಿಸಿದೆ. ಭುವನೇಶ್ವರ್ ಕುಮಾರ್ ಅವರು 5 ವಿಕೆಟ್ ಹಾಗೂ ಶಿಖರ್ ಧವನ್ ಅವರು ಅರ್ಧ ಶತಕ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸರು.

ಇಲ್ಲಿನ ನ್ಯೂ ವಾಂಡರರ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 204ರನ್ ಗಳ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 175/9 ಮಾತ್ರ ಸ್ಕೋರ್ ಮಾಡಿ, ಸೋಲೋಪ್ಪಿಕೊಂಡಿತು.

ದಕ್ಷಿಣ ಆಫ್ರಿಕಾ ಪರ ಹೆನ್ರಿಕ್ಸ್ ಚೊಚ್ಚಲ ಅರ್ಧಶತಕ ಗಳಿಸಿ ಉತ್ತಮವಾಡಿ ಆಡಿದರು. ಆದರೆ 70 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಜೆ.ಪಿ.ಡುಮಿನಿ 3, ಮಿಲ್ಲರ್ 9 ಬೇಗನೇ ವಿಕೆಟ್ ನೀಡಿದರು. ಬೆಹಾರ್ಡಿನ್ 39 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಗುರಿ ಬೆನ್ನು ಹತ್ತುವ ಸಾಹಸ ಮಾಡಲಿಲ್ಲ.

ಭಾರತದ ಪರ ಭುವನೇಶ್ವರ್ ಕುಮಾರ್​​ಗೆ 5 ವಿಕೆಟ್​, ಹಾರ್ದಿಕ್, ಉನಾದ್ಕತ್, ಚಾಹಲ್​ ತಲಾ 1 ವಿಕೆಟ್​ ಗಳಿಸಿದರು.

Story first published: Sunday, February 18, 2018, 21:59 [IST]
Other articles published on Feb 18, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ