ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದೇ ಓವರ್‌ನಲ್ಲಿ 43 ರನ್!: ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ

43 runs in an over world record in list a cricket

ಹ್ಯಾಮಿಲ್ಟನ್, ನವೆಂಬರ್ 7: ಒಂದು ಓವರ್‌ನಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ರನ್ ಬಾರಿಸಬಹುದು? ಇರುವ ಆರು ಎಸೆತಕ್ಕೆ ಒಂದು ಸಿಕ್ಸರ್ ಬಾರಿಸಿದರೂ 36 ರನ್ ಆಗುತ್ತದೆ. ಇನ್ನು ವೈಡ್ ಅಥವಾ ನೋಬಾಲ್ ಕಾಣಿಕೆ ಸಿಕ್ಕರೆ ಒಂದೆರಡು ರನ್ ಹೆಚ್ಚು ಸಿಗಬಹುದು.

ಆದರೆ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಬರೋಬ್ಬರಿ 43 ರನ್ ಗಳಿಸುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಾಣವಾಗಿದೆ.

 ಟಿ20 ಶತಕಗಳಲ್ಲಿ ದಾಖಲೆ ನಿರ್ಮಿಸಿದ 'ಹಿಟ್ ಮ್ಯಾನ್' ರೋಹಿತ್ ಶರ್ಮಾ ಟಿ20 ಶತಕಗಳಲ್ಲಿ ದಾಖಲೆ ನಿರ್ಮಿಸಿದ 'ಹಿಟ್ ಮ್ಯಾನ್' ರೋಹಿತ್ ಶರ್ಮಾ

ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್‌ನಲ್ಲಿ ಬುಧವಾರ ನಡೆದ ಫೋರ್ಡ್ ಟ್ರೋಫಿಯ ಪಂದ್ಯದಲ್ಲಿ ಈ ದಾಖಲೆ ಸೃಷ್ಟಿಯಾಗಿದೆ.

ನಾರ್ದರ್ನ್ ಡಿಸ್ಟ್ರಿಕ್ಟ್ ತಂಡದ ಜೋ ಕಾರ್ಟರ್ ಮತ್ತು ಬ್ರೆಟ್ ಹ್ಯಾಂಪ್ಟನ್ ಜೋಡಿ ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡದ ಬೌಲರ್ ವಿಲಿಯಮ್ ಲುಡಿಕ್ ಅವರ ಬೌಲಿಂಗ್‌ನಲ್ಲಿ 43 ರನ್‌ಗಳನ್ನು ಚಚ್ಚಿದ್ದಾರೆ. ಇದು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿಯೇ ದಾಖಲೆಯಾಗಿದೆ.

ಬಾಂಗ್ಲಾದೇಶದ ಪ್ರಥಮ ದರ್ಜೆ ಕ್ರಿಕೆಟಿಗ ಅಲಾವುದ್ದಿನ್ ಬಾಬು ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ 2013ರಲ್ಲಿ 39 ರನ್ ಬಿಟ್ಟುಕೊಟ್ಟಿದ್ದು ಇದುವರೆಗಿನ ದಾಖಲೆಯಾಗಿತ್ತು.

ಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆ

ಇದರಲ್ಲಿ ಜಿಂಬಾಬ್ವೆ ತಂಡದ ಮಾಜಿ ನಾಯಕ ಎಲ್ಟನ್ ಚಿಗುಂಬರ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿದ್ದರು. ಒಂದು ಹೆಚ್ಚುವರಿ ಎಸೆತ ಅವರಿಗೆ ನೋಬಾಲ್ ರೂಪದಲ್ಲಿ ದೊರಕಿತ್ತು.

ಹ್ಯಾಮಿಲ್ಟನ್ ಪಂದ್ಯದಲ್ಲಿಯೂ ವಿಲಿಯಮ್ ಲುಡಿಕ್ ನೋಬಾಲ್‌ಗಳ ಕಾಣಿಕೆ ನೀಡಿದರು. ಈ ಓವರ್‌ನಲ್ಲಿ ಬಂದಿದ್ದು 4,6nb,6nb,6,1,6,6,6 ರನ್‌ಗಳು.

ಮೊದಲ ಎಸೆತವನ್ನು ಹ್ಯಾಂಪ್ಟನ್ ಬೌಂಡರಿಗಟ್ಟಿದರೆ, ಇನ್ನೆರಡು ಎಸತಗಳು ಸೊಂಟದ ಮಟ್ಟಕ್ಕಿಂತ ಎತ್ತರದಲ್ಲಿ ಇದ್ದಿದ್ದರಿಂದ ನೋಬಾಲ್ ಆದವು. ಈ ಎರಡೂ ಎಸೆತಗಳನ್ನು ಪ್ರೇಕ್ಷಕರ ಗ್ಯಾಲರಿ ಮಧ್ಯೆ ಕಳುಹಿಸಿದ ಹ್ಯಾಂಪ್ಟನ್, ಮತ್ತೊಂದು ಸಿಕ್ಸರ್ ಕೂಡ ಸಿಡಿಸಿದರು. ಬಳಿಕ ಒಂದು ರನ್ ತೆಗೆದುಕೊಂಡು ಕಾರ್ಟರ್‌ಗೆ ಸ್ಟ್ರೈಕ್ ನೀಡಿದರು. ಕಾರ್ಟರ್ ಕೊನೆಯ ಮೂರೂ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು.

ಕೊಹ್ಲಿ ಒಬ್ಬ ಅಸಾಮಾನ್ಯ ನಾಯಕ, ಅದ್ಭುತ ಬ್ಯಾಟ್ಸ್ಮನ್: ಮ್ಯಾಕ್ಸ್‌ವೆಲ್ಕೊಹ್ಲಿ ಒಬ್ಬ ಅಸಾಮಾನ್ಯ ನಾಯಕ, ಅದ್ಭುತ ಬ್ಯಾಟ್ಸ್ಮನ್: ಮ್ಯಾಕ್ಸ್‌ವೆಲ್

9 ಓವರ್‌ಗಳಿಗೆ ಒಂದು ವಿಕೆಟ್ ಪಡೆದು 42 ರನ್ ನೀಡಿದ್ದ ಲುಡಿಕ್, ಬೌಲಿಂಗ್ ಸಾಧನೆ 10-0-85-1ಕ್ಕೆ ನಿಂತಿತು.

ಜವಾಬ್ದಾರಿ ಹೊರುವುದನ್ನು ನಾನು ಆನಂದಿಸುತ್ತೇನೆ : ಖಲೀಲ್ ಅಹ್ಮದ್ಜವಾಬ್ದಾರಿ ಹೊರುವುದನ್ನು ನಾನು ಆನಂದಿಸುತ್ತೇನೆ : ಖಲೀಲ್ ಅಹ್ಮದ್

95 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಜೋಡಿ ಆರನೇ ವಿಕೆಟ್‌ಗೆ 178 ರನ್‌ಗಳನ್ನು ಸೇರಿಸಿತು. ಹ್ಯಾಂಪ್ಟನ್ ತಮ್ಮ ಚೊಚ್ಚಲ ಶತಕ ತಪ್ಪಿಸಿಕೊಂಡರೆ, ಕಾರ್ಟರ್ ಶತಕ ಸಂಭ್ರಮಾಚರಣೆ ಮಾಡಿದರು.

Story first published: Thursday, November 8, 2018, 16:07 [IST]
Other articles published on Nov 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X