ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದ ಭಾರತದ ವನಿತೆಯರು

Posted By:
All-round Indian eves seal T20 series in style against South Africa

ಕೇಪ್ ಟೌನ್, ಫೆಬ್ರವರಿ 24: ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ವನಿತೆಯರು ಡಬ್ಬಲ್ ಧಮಾಕ ಪ್ರದರ್ಶನ ನೀಡಿದ್ದಾರೆ. ಏಕದಿನ ಸರಣಿಯನ್ನು 2-1ರಲ್ಲಿ ಗೆದ್ದು ಬೀಗಿದ್ದ ಹರ್ಮನ್ ಪ್ರೀತ್ ಪಡೆ, ಈಗ ಟಿ20 ಸರಣಿಯನ್ನು 3-1ರಲ್ಲಿ ಗೆದ್ದುಕೊಂಡಿದೆ.

ಶನಿವಾರದಂದು ನಡೆದ ಐದನೇ ಟಿ20 ಪಂದ್ಯವನ್ನು ಭಾರತ ತಂಡವು 54ರನ್ ಗಳಿಂದ ಗೆದ್ದುಕೊಂಡು ಐದು ಪಂದ್ಯಗಳ ಟಿ20 ಸರಣಿಯನ್ನು 3-1ರ ಅಂತರದಲ್ಲಿ ಗೆದ್ದು, ಜಯಭೇರಿ ಬಾರಿಸಿದೆ.

ಭಾರತದ ವನಿತೆಯರು ನೀಡಿದ್ದ 167ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡವು 18 ಓವರ್ ಗಳಲ್ಲಿ 112 ಸ್ಕೋರಿಗೆ ಆಲೌಟ್ ಆಗಿ ಶರಣಾಯಿತು.

All-round Indian eves seal T20 series in style against South Africa

ದಕ್ಷಿಣ ಆಫ್ರಿಕಾ ಪರ ಮರಿಜಾನ್ ಕಾಪ್ 27, ಟ್ರಯಾನ್ 25ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಭಾರತದ ಪರ ಶಿಖಾ ಪಾಂಡೆ, ರುಮೇಲಿ ಧರ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ತಲಾ 3ವಿಕೆಟ್ ಕಬಳಿಸಿದರು, ಪೂನಮ್ ಯಾದವ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮತ್ತೊಮ್ಮೆ ಮಿಥಾಲಿ ರಾಜ್ ಆಸರೆಯಾದರು. 50 ಎಸೆತಗಳಲ್ಲಿ 62ರನ್ ಚೆಚ್ಚಿದರು. ಜೆಮಿಯಾ ರೋಡ್ರಿಗೇಸ್ 34 ಎಸೆತಗಳಲ್ಲಿ 44 ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ 17 ಎಸೆತಗಳಲ್ಲಿ 27ರನ್ ಗಳಿಸಿ ರನ್ ಗತಿ ಹೆಚ್ಚಿಸಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166ರನ್ ಸ್ಕೋರ್ ಗಳಿಸಿದರು.

Story first published: Saturday, February 24, 2018, 20:13 [IST]
Other articles published on Feb 24, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ