ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Aus vs SL 1st Test: ಮೊದಲ ದಿನವೇ 13 ವಿಕೆಟ್‌ ಪತನ, ಶ್ರೀಲಂಕಾ 214ರನ್‌ಗೆ ಆಲೌಟ್

Australia vs Srilanka 1st Test

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 212ರನ್‌ಗಳಿಗೆ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡಿದೆ.

ಆಸ್ಟ್ರೇಲಿಯಾ ಸ್ಪಿನ್ನರ್‌ಗಳ ಮಂತ್ರಕ್ಕೆ ಒಬ್ಬರ ಹಿಂದೆ ಮತ್ತೊಬ್ಬರಂತೆ ಲಂಕಾದ ಬ್ಯಾಟರ್‌ಗಳು ಪೆವಿಲಿಯನ್‌ಗೆ ಸೇರಿಕೊಂಡರು. ಪರಿಣಾಮ ಶ್ರೀಲಂಕಾ ಕೇವಲ 59 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಶ್ರೀಲಂಕಾ 212ರನ್‌ಗಳಿಗೆ ಆಲೌಟ್

ಶ್ರೀಲಂಕಾ 212ರನ್‌ಗಳಿಗೆ ಆಲೌಟ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ದೊಡ್ಡ ಮೊತ್ತ ಕಲೆಹಾಕುವ ಯೋಚನೆಯಲ್ಲಿ ಕಣಕ್ಕಿಳಿಯಿತು. ಆದ್ರೆ ಹಾಕಿದ್ದ ಲೆಕ್ಕಾಚಾರಗಳೆಲ್ಲಾ ಬುಡಮೇಲು ಆಗಿದೆ. ಓಪನಿಂಗ್ ಜೋಡಿ ಬೇರ್ಪಟ್ಟ ಬೆನ್ನಲ್ಲೇ ಒಂದರ ಹಿಂದೆ ಮತ್ತೊಂದು ವಿಕೆಟ್‌ಗಳು ಉರುಳಿವೆ. ತಂಡದ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿರೋಷನ್ ಡಿಕ್ವೆಲ್ಲಾ ಅರ್ಧಶತಕ ಗಳಿಸಿದ್ದೇ ಹೆಚ್ಚು.

ಶ್ರೀಲಂಕಾ ಪರ ನಿಸ್ಸಾಂಕ 23, ನಾಯಕ ಕರುಣರತ್ನೆ 28, ಕುಸಾಲ್ ಮೆಂಡೀಸ್ 3, ಏಂಜೆಲೊ ಮ್ಯಾಥ್ಯೂಸ್ 39, ಧನಂಜಯ ಡಿ ಸಿಲ್ವಾ 14, ಚಂಡೀಮಲ್ 0, ಡಿಕ್ವೆಲ್ಲಾ 58, ಆರ್‌. ಮೆಂಡೀಸ್ 22, ವಾಂಡೆರ್ಸೆ 6, ಎಂಬುದೆಲ್ನಿಯಾ 6, ಫರ್ನಾಂಡೊ ಅಜೇಯ 2 ರನ್‌ಗಳಿಸಿದರು.

ಇನ್ನು ಆಸ್ಟ್ರೇಲಿಯಾ ಪರ ಲೆಜೆಂಡರಿ ಸ್ಪಿನ್ನರ್ ನೇಥನ್ ಲ್ಯಾನ್ 25 ಓವರ್‌ಗಳಲ್ಲಿ 2 ಮೇಡನ್ ಸಹಿತ 90ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರು. ಬಲಗೈ ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ 13 ಓವರ್‌ಗಳಲ್ಲಿ 55ರನ್ ನೀಡಿ 3 ವಿಕೆಟ್ ಕಬಳಿಸಿದ್ರು. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್‌ ತಲಾ ಒಂದು ವಿಕೆಟ್ ಪಡೆದರು.

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್‌: ಎಡ್ಜ್‌ಬಾಸ್ಟನ್‌ ಪಿಚ್‌ ವರದಿ, ಸ್ಕ್ವಾಡ್

ಆಸ್ಟ್ರೇಲಿಯಾ ಮೂರು ವಿಕೆಟ್ ಕಳೆದುಕೊಂಡಿದೆ

ಆಸ್ಟ್ರೇಲಿಯಾ ಮೂರು ವಿಕೆಟ್ ಕಳೆದುಕೊಂಡಿದೆ

ಇನ್ನು ಲಂಕಾದ 212ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿದೆ. ಡೇವಿಡ್ ವಾರ್ನರ್ 25, ಮಾರ್ನಸ್ ಲ್ಯಾಬುಸ್ಚಾಗ್ನೆ 13, ಸ್ಟೀವನ್ ಸ್ಮಿತ್ 6 ರನ್‌ಗಳಿಸಿ ಔಟಾದ್ರು. ಓಪನರ್ ಉಸ್ಮಾನ್ ಖವಾಜ ಅಜೇಯ 47, ಟ್ರಾವಿಸ್ ಹೆಡ್ ಅಜೇಯ 6 ರನ್ ಕಲೆಹಾಕಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಲಂಕಾದ ಟಾರ್ಗೆಟ್ ಬೆನ್ನತ್ತಲು ಇನ್ನೂ 114ರನ್‌ಗಳ ಹಿನ್ನಡೆಯಲ್ಲಿದೆ. ಲಂಕಾದ ಪರ ಬಲಗೈ ಆಫ್‌ ಸ್ಪಿನ್ನರ್ ರಮೇಶ್ ಮೆಂಡೀಸ್ ಎರಡು ವಿಕೆಟ್ ಪಡೆದಿದ್ದಾರೆ.

IND vs ENG: 4 ವಾರಗಳ ಹಿಂದೆ ಕೇಳಿದ್ರೆ ಭಾರತ ಗೆಲ್ಲುತ್ತೆ ಎನ್ನುತ್ತಿದ್ದೆ, ಈಗ ಹಾಗಿಲ್ಲ ಎಂದ ಇಂಗ್ಲೆಂಡ್ ಕ್ರಿಕೆಟಿಗ

ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ಆಸ್ಟ್ರೇಲಿಯಾ
ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್

ಬೆಂಚ್: ಮಿಚೆಲ್ ಮಾರ್ಷ್, ಜೋಶ್ ಹೇಜಲ್‌ವುಡ್, ಗ್ಲೆನ್ ಮ್ಯಾಕ್ಸ್‌ವೆಲ್, ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಜೋಶ್ ಇಂಗ್ಲಿಸ್

ಶ್ರೀಲಂಕಾ
ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಜೆಫ್ರಿ ವಾಂಡರ್ಸೆ, ಲಸಿತ್ ಎಂಬುಲ್ಡೆನಿಯ, ಅಸಿತ ಫೆರ್ನಾಂಡೋ

ಬೆಂಚ್ : ವಿಶ್ವ ಫೆರ್ನಾಂಡೋ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತ, ಕಾಮಿಂದು ಮೆಂಡಿಸ್, ಓಷಾದ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ, ದಿಲ್ಶನ್ ಮಧುಶಂಕ

Story first published: Wednesday, June 29, 2022, 20:35 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X