ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG: 4 ವಾರಗಳ ಹಿಂದೆ ಕೇಳಿದ್ರೆ ಭಾರತ ಗೆಲ್ಲುತ್ತೆ ಎನ್ನುತ್ತಿದ್ದೆ, ಈಗ ಹಾಗಿಲ್ಲ ಎಂದ ಇಂಗ್ಲೆಂಡ್ ಕ್ರಿಕೆಟಿಗ

IND vs ENG: Moeen Ali predicts the winner in India vs England Edgbaston test

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಆತಿಥೇಯ ಆಂಗ್ಲರ ವಿರುದ್ಧ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿರುವ 1 ಟೆಸ್ಟ್ ಪಂದ್ಯ, 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟವನ್ನು ನಡೆಸಲಿದೆ. ಈ ಪೈಕಿ ಇತ್ತಂಡಗಳ ನಡುವಿನ ಟೆಸ್ಟ್ ಪಂದ್ಯ ಜುಲೈ 1ರಿಂದ ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಈಗಾಗಲೇ ಅಭ್ಯಾಸ ಪಂದ್ಯವನ್ನಾಡಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ರೋಹಿತ್ ಬದಲು ಕೊಹ್ಲಿ ನಾಯಕನಾಗಲಿ, ಈತ ನಾಯಕನಾಗುವಷ್ಟು ದೊಡ್ಡವನಲ್ಲ ಎಂದ ಕನೇರಿಯಾರೋಹಿತ್ ಬದಲು ಕೊಹ್ಲಿ ನಾಯಕನಾಗಲಿ, ಈತ ನಾಯಕನಾಗುವಷ್ಟು ದೊಡ್ಡವನಲ್ಲ ಎಂದ ಕನೇರಿಯಾ

ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವೆ ಕಳೆದ ವರ್ಷ ಆಯೋಜನೆಯಾಗಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿತ್ತು. ಹೀಗೆ ಅಂದು ಮುಂದೂಡಲ್ಪಟ್ಟ ಪಂದ್ಯವೇ ಜುಲೈ 1ರಿಂದ ಆರಂಭವಾಗುತ್ತಿದ್ದು, ಈ ಪಂದ್ಯ ಸರಣಿಯಲ್ಲಿ ಯಾವ ತಂಡ ವಿಜೇತವಾಗಲಿದೆ ಎಂಬುದನ್ನು ನಿರ್ಣಯಿಸಲಿದೆ. ಹೌದು, ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ಭಾರತದ ಕೈವಶವಾಗಲಿದೆ ಅಥವಾ ಇಂಗ್ಲೆಂಡ್ ಗೆದ್ದರೆ ಸರಣಿ ಡ್ರಾ ನಲ್ಲಿ ಅಂತ್ಯಗೊಳ್ಳಲಿದೆ.

ಇಂಗ್ಲೆಂಡ್‌ನಲ್ಲಿ ಅತಿಹೆಚ್ಚು ಏಕದಿನ ರನ್ ಬಾರಿಸಿರುವ ಭಾರತೀಯ ಆಟಗಾರರ ಟಾಪ್ 5 ಪಟ್ಟಿ; ನಂ.1 ಯಾರು?ಇಂಗ್ಲೆಂಡ್‌ನಲ್ಲಿ ಅತಿಹೆಚ್ಚು ಏಕದಿನ ರನ್ ಬಾರಿಸಿರುವ ಭಾರತೀಯ ಆಟಗಾರರ ಟಾಪ್ 5 ಪಟ್ಟಿ; ನಂ.1 ಯಾರು?

ಹೀಗೆ ಈ ಸರಣಿಯಲ್ಲಿ ಯಾವ ತಂಡ ಗೆಲ್ಲಲಿದೆ ಹಾಗೂ ಸರಣಿಯ ಫಲಿತಾಂಶ ಏನಾಗಲಿದೆ ಎಂಬುದರ ಕುರಿತು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗಳು ಆರಂಭವಾಗಿದ್ದು, ಈ ಕುರಿತಾಗಿ ಇದೀಗ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಮೊಯಿನ್ ಅಲಿ ಪ್ರತಿಕ್ರಿಯೆ ನೀಡಿದ್ದು, ಈ ಕೆಳಕಂಡಂತೆ ಹೇಳಿಕೆ ಕೊಟ್ಟಿದ್ದಾರೆ.

ಕಳೆದ ವರ್ಷವೇ ಸರಣಿ ಮುಗಿದಿದ್ದರೆ ಭಾರತ ಗೆಲ್ಲುತ್ತಿತ್ತು, ಆದರೆ...

ಕಳೆದ ವರ್ಷವೇ ಸರಣಿ ಮುಗಿದಿದ್ದರೆ ಭಾರತ ಗೆಲ್ಲುತ್ತಿತ್ತು, ಆದರೆ...

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಮೊಯಿನ್ ಅಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಸರಣಿ ಕಳೆದ ವರ್ಷವೇ ಮುಕ್ತಾಯಗೊಂಡಿದ್ದರೆ ಟೀಮ್ ಇಂಡಿಯಾ ಸರಣಿಯನ್ನು ಸುಲಭವಾಗಿ ಗೆಲ್ಲುತ್ತಿತ್ತು, ಆದರೆ ಈಗ ಸಮಯ ಬದಲಾಗಿದೆ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಬಲಿಷ್ಠವಾಗಿದೆ ಹಾಗೂ ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.

4 ವಾರಗಳ ಹಿಂದೆ ಕೇಳಿದ್ದರೂ ಭಾರತವೇ ಗೆಲ್ಲುತ್ತಿತ್ತು ಎನ್ನುತ್ತಿದ್ದೆ

4 ವಾರಗಳ ಹಿಂದೆ ಕೇಳಿದ್ದರೂ ಭಾರತವೇ ಗೆಲ್ಲುತ್ತಿತ್ತು ಎನ್ನುತ್ತಿದ್ದೆ

ಇನ್ನೂ ಮುಂದುವರೆದು ಮಾತನಾಡಿರುವ ಮೊಯಿನ್ ಅಲಿ ನಾಲ್ಕೈದು ವಾರಗಳ ಹಿಂದೆ ಕೇಳಿದ್ದರೂ ಸಹ ಟೀಮ್ ಇಂಡಿಯಾವೇ ಪಂದ್ಯವನ್ನು ಗೆಲ್ಲುತ್ತಿತ್ತು ಎನ್ನುತ್ತಿದ್ದೆ, ಆದರೆ ಈಗ ಇಂಗ್ಲೆಂಡ್ ಗೆಲ್ಲುವ ತಂಡವಾಗಿ ರೂಪುಗೊಂಡಿದೆ ಹಾಗೂ ಟೀಮ್ ಇಂಡಿಯಾ ಅರ್ಧಬೆಂದ ತಂಡವಾಗಿದೆ ಎಂದು ಮೊಯಿನ್ ಅಲಿ ತಮ್ಮ ತವರಿನ ತಂಡದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ನಾಯಕತ್ವದಲ್ಲಿ ಬದಲಾವಣೆ

ಟೀಮ್ ಇಂಡಿಯಾ ನಾಯಕತ್ವದಲ್ಲಿ ಬದಲಾವಣೆ

ಒಂದೆಡೆ ಮೊಯಿನ್ ಅಲಿ ಟೀಮ್ ಇಂಡಿಯಾಗೆ ಗೆಲ್ಲುವ ಅವಕಾಶ ಕಡಿಮೆ ಇದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕೊರೊನಾ ಸೋಂಕಿಗೆ ಒಳಗಾಗಿರುವ ಕಾರಣ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಹಾಗೂ ನಾಯಕತ್ವ ಜಸ್ ಪ್ರೀತ್ ಬೂಮ್ರಾ ಹೆಗಲಿಗೆ ಬಿದ್ದಿದೆ.

ಬುಮ್ರಾ ನಾಯಕತ್ವದ ಟೀಮ್ ಇಂಡಿಯಾ ಸ್ಕ್ವ್ಯಾಡ್ ಹೀಗಿದೆ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ( ನಾಯಕ ), ಪ್ರಸಿದ್ಧ ಕೃಷ್ಣ

Story first published: Thursday, June 30, 2022, 9:34 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X