ಭಾರತ 'ಎ', 'ಬಿ' ಮತ್ತು ಇತರೆ ಭಾರತ ತಂಡ ಪ್ರಕಟ

Posted By:
BCCI announced India 'A','B' and rest of India team

ನವ ದೆಹಲಿ, ಫೆಬ್ರವರಿ 28: 2018-19ನೇ ಸಾಲಿಗೆ ಭಾರತ 'ಎ', ಭಾರತ 'ಬಿ' ಮತ್ತು ಭಾರತ ಇತರೆ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಕರ್ನಾಟಕದ ಕರುಣ್ ನಾಯರ್‌ಗೆ ಭಾರತ ಇತರೆ ತಂಡವನ್ನು ಮುನ್ನಡೆಸುವ ಅದೃಷ್ಟ ಒಲಿದಿದೆ.

ಭಾರತ ಎ ತಂಡಕ್ಕೆ ರವಿಚಂದ್ರನ್ ಅಶ್ವಿನ್ ನಾಯಕರಾಗಿದ್ದು, ಭಾರತ ಬಿ ತಂಡಕ್ಕೆ ಶ್ರೇಯಸ್ ಐಯರ್‌ ನಾಯಕರಾಗಿದ್ದಾರೆ, ರವೀಂದ್ರ ಜಡೇಜಾ ಅವರನ್ನು ಒಳಗೊಂಡಿರುವ ಭಾರತ ಇತರೆ ತಂಡಕ್ಕೆ ಕರ್ನಾಟಕದ ಕರುಣ್ ನಾಯರ್ ನಾಯಕತ್ವ ವಹಿಸಿದ್ದಾರೆ.

ಭಾರತ ಎ ಮತ್ತು ಬಿ ತಂಡಗಳು ವಿಜಯ್ ಹಜಾರೆ ಟ್ರೋಫಿ ಜಯಿಸಿರುವ ಕರ್ನಾಟಕ ತಂಡದ ವಿರುದ್ಧ ದೇವ್‌ದರ್‌ ಟ್ರೋಫಿಗಾಗಿ ಪಂದ್ಯಗಳನ್ನು ಆಡಲಿದ್ದು, ಅದರಲ್ಲಿ ವಿಜೇತ ತಂಡಕ್ಕೆ ದೇವ್‌ದರ್ ಟ್ರೋಫಿ ಒಲಿಯಲಿದೆ. ಆ ನಂತರ ಮತ್ತೆ ಇರಾನಿ ಟ್ರೋಫಿ ನಡೆಯಲಿದ್ದು ಆ ಟ್ರೋಫಿಗಾಗಿ ಭಾರತ ಇತರೆ ತಂಡವಯ ವಿಜಯ್ ಹಜಾರೆ ವಿಜೇತ ತಂಡದ ಜೊತೆಗೆ ಹಣಾಹಣಿ ನಡೆಸಲಿದೆ.

ಮೂರೂ ತಂಡಗಳಲ್ಲಿ ಅನುಭವಿ ಮತ್ತು ಹೊಸಬರಿಗೆ ಸಮಾನ ಅವಕಾಶ ಕಲ್ಪಿಸಲಾಗಿದ್ದು, ವಿಶ್ವಕಪ್ ವಿಜೇತ ಅಂಡರ್ 19 ತಂಡಕ್ಕೆ ಆಡಿದ್ದ ಹಲವು ಆಟಗಾರರು ಅವಕಾಶ ಪಡೆದಿದ್ದಾರೆ. ಇವರ ಜೊತೆಗೆ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮನೋಜ್ ತಿವಾರಿ, ಉಮೇಶ್ ಯಾದವ್ ಇನ್ನೂ ಹಲವು ಹಿರಿಯ ಆಟಗಾರರು ಭಾರತ ಎ ಮತ್ತು ಬಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ಇತರೆ ತಂಡವನ್ನು ಕರ್ನಾಟಕದ ಕರುಣ್ ನಾಯರ್ ಮುನ್ನೆಡಸಲಿದ್ದು, ರವೀಂದ್ರ ಜಡೇಜಾ ಅಂತಹ ಅನುಭವಿ ಆಟಗಾರರು ತಂಡದಲ್ಲಿದ್ದಾರೆ, ರಾಜ್ಯದ ಮಯಾಂಕ್ ಅಗರ್ವಾಲ್ ಮತ್ತು ಆರ್.ಸಮರ್ಥ್ ಕೂಡ ಇತರೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ದೇವ್‌ದರ್ ಪಂದ್ಯಗಳು ಮಾರ್ಚ್‌ 4 ರಿಂದ 8ರವರೆಗೆ ಧರ್ಮಶಾಲಾದಲ್ಲಿ ನಡೆಯಲಿವೆ.ಆ ನಂತರ ಮತ್ತೆ ಮಾರ್ಚ್‌ 14 ರಿಂದ ಇರಾನಿ ಕಪ್ ಪಂದ್ಯಾವಳಿ ಪ್ರಾರಂಭವಾಗಲಿದ್ದು, ಆ ಟೂರ್ನಿಯಲ್ಲಿ ಭಾರತ ಇತರೆ ತಂಡವು ವಿದರ್ಭ ಮತ್ತು ವಿಜಯ್ ಹಜಾರೆ ಟ್ರೋಫಿ ವಿಜೇತ ತಂಡವನ್ನು ಎದುರಿಸಲಿದೆ.

ತಂಡಗಳು ಇಂತಿವೆ...

ಭಾರತ 'ಎ' ತಂಡ
* ರವಿಚಂದ್ರನ್ ಅಶ್ವಿನ್ (ನಾಯಕ) * ಪೃಥ್ವಿ ಶಾ * ಉನ್ಮುಕ್ತ್ ಚಾಂದ್ * ಅಕ್ಷದೀಪ್ ನಾಥ್ * ಶುಬ್‌ಮನ್‌ ಗಿಲ್ * ರಿಕಿ ಭುಯ್ * ಸೂರ್ಯಕುಮಾರ್ ಯಾದವ್ * ಇಶಾನ್ ಕಿಶನ್ (ಕೀಪರ್) * ಕೃನಾಲ್ ಪಾಂಡ್ಯಾ
* ಮೊಹಮ್ಮದ್ ಶಮಿ * ನವದೀಪ್ ಸೈನಿ * ಬಸೀಸ್ ತಂಫಿ * ಕುಲ್ವಂತ್ ಕೆಜ್ರೊಲಿಯಾ * ಅಮನ್‌ದೀಪ್ ಖರೆ * ರೋಹಿತ್ ರಾಯ್ಡು

ಭಾರತ 'ಬಿ' ತಂಡ
*ಶ್ರೇಯಸ್ ಐಯರ್ (ನಾಯಕ), * ರಾತುರಾಜ್ ಗಾಯಕ್‌ವಾಡ್, * ಅಭಿಮನ್ಯು ಈಶ್ವರನ್, * ಅಂಕಿತ್ ಭಾವ್ನೆ, * ಮನೋಜ್ ತಿವಾರಿ, * ಸಿದ್ದೇಶ್ ಲಾಡ್, * ಕೆಎಸ್ ಭರತ್, * ಜಯಂತ್‌ ಯಾದವ್, * ಧರ್ಮೇಂದ್ರ ಸಿಂಗ್ ಜಡೇಜಾ, * ಹನುಮ ವಿಹಾರಿ (ಕೀಪರ್), * ಸಿದ್ದಾರ್ಥ ಕೌಲ್, * ಖಲೀಲ್ ಅಹ್ಮದ್, * ಹರ್ಷಲ್ ಪಟೇಲ್, * ಉಮೇಶ್ ಯಾದವ್, * ರಜತ್ ಪಾಟೀದಾರ್,

ಭಾರತ ಇತರೆ ತಂಡ
* ಕರುಣ್ ನಾಯರ್, * ಪೃಥ್ವಿ ಶಾ, * ಅಭಿಮನ್ಯು ಈಶ್ವರನ್, * ಆರ್.ಸಮರ್ಥ್, * ಮಯಾಂಕ್ ಅಗರ್ವಾಲ್, * ಹನುಮ ವಿಹಾರಿ, * ಕೆಎಸ್ ಭರತ್ (ಕೀಪರ್), * ರವೀಂದ್ರ ಜಡೇಜಾ, * ಜಯಂತ್ ಯಾದವ್,
* ಶಬಾಜ್ ನದೀಮ್, * ಅನ್ಮೋಲ್ ಪ್ರೀತ್ ಸಿಂಗ್, * ಸಿದ್ಧಾರ್ಥ್‌ ಕೌಲ್, * ಅಂಕಿತ್ ರಜಪೂತ್, * ನವದೀಪ್ ಸೈನಿ, * ಅಥೀತ್ ಸೇಠ್,

Story first published: Wednesday, February 28, 2018, 14:23 [IST]
Other articles published on Feb 28, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ