ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾದ ರಾಹುಲ್ ದ್ರಾವಿಡ್

BCCI appoints Rahul Dravid as Head Cricket of National Cricket Academy

ಬೆಂಗಳೂರು, ಜುಲೈ 09: ಟೀಂ ಇಂಡಿಯಾದ ಮಾಜಿ ನಾಯಕ, ಜ್ಯೂನಿಯರ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಜವಾಬ್ದಾರಿ ನೀಡಲಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ಬೆಂಗಳೂರಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ರಾಹುಲ್ ದ್ರಾವಿಡ್ ಅವರು ಎರಡು ವರ್ಷಗಳ ಕಾಲ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಯುವ ಕ್ರಿಕೆಟರ್ ಗಳ ಭವಿಷ್ಯ ರೂಪಿಸ ಹೊಣೆ ಹೊತ್ತಿದ್ದಾರೆ. ಜೊತೆಗೆ ಮಹಿಳಾ ಕ್ರಿಕೆಟರ್ಸ್ ಬಗ್ಗೆ ಕೂಡಾ ಕಾಳಜಿ ವಹಿಸಲಿದ್ದಾರೆ.

ಗಾಯಗೊಂಡ ಕ್ರಿಕೆಟಿಗರ ಪುನಃಶ್ಚೇತನ ಶಿಬಿರಗಳ ಉಸ್ತುವಾರಿಯೂ ದ್ರಾವಿಡ್ ವಹಿಸಿಕೊಳ್ಳಲಿದ್ದಾರೆ. ಹೊಸ ಹುದ್ದೆ ವಹಿಸಿಕೊಡ ಬಳಿಕ ದ್ರಾವಿಡ್ ಅವರು ಭಾರತ ಎ ಹಾಗೂ 19 ವಯೋಮಿತಿ ತಂಡಗಳೊಂದಿಗೆ ಮುಂದುವರೆಯುವುದು ಕಷ್ಟವಾಗಲಿದೆ.

ಹೀಗಾಗಿ, ಮಾಜಿ ವೇಗಿ ಪರಾಸ್ ಮಾಂಬ್ರೆ ಹಾಗೂ ಅಭಯ್ ಶರ್ಮ ಅವರು ಸದ್ಯಕ್ಕೆ ಜೂನಿಯರ್ ತಂಡದ ನಿರ್ವಹಣೆ ಮಾಡಲಿದ್ದಾರೆ. ಎನ್​ಸಿಎಯಲ್ಲಿ ಅವರಿಗೆ ನೀಡಿರುವ ಹುದ್ದೆ ಬಹಳ ದೊಡ್ಡದಿದೆ' ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ನ್ಯಾ. ಲೋಧಾ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಬಿಸಿಸಿಐ ಆದ್ಯತೆ ನೀಡುತ್ತಿದ್ದು, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಸೇರಿದಂತೆ ಮಾಜಿ ಆಟಗಾರರ ಲಾಭದಾಯಕ ಹುದ್ದೆ ಆರೋಪದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಶಿಸ್ತು ಪಾಲನಾ ಸಮಿತಿ ಅಧಿಕಾರಿಗಳು ಹೇಳಿದರು.

Story first published: Tuesday, July 9, 2019, 13:23 [IST]
Other articles published on Jul 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X