
ಫಾರ್ಮ್‌ಗೆ ಮರಳಿದರೆ ಮಾತ್ರ ಅವಕಾಶ
ಫಿಟ್‌ನೆಸ್ ಕಾಪಾಡಿಕೊಂಡು ಫಾರ್ಮ್ ಕಂಡುಕೊಳ್ಳುವವರೆಗೆ ಅವರುಗೆ ಏಕದಿನ ಮತ್ತು ಟಿ20 ತಂಡದಲ್ಲಿ ಸ್ಥಾನ ನೀಡುವುದಿಲ್ಲ ಎಂದು ಹೇಳಲಾಗಿದೆ. ರಿಷಬ್ ಪಂತ್‌ಗೆ ಸತತವಾಗಿ ಅವಕಾಶ ನೀಡಿದ ಕಾರಣ, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಬೆಂಚ್ ಕಾದರು.
ಬಾಂಗ್ಲಾದೇಶದ ವಿರುದ್ಧ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಇಶಾನ್ ಕಿಶನ್ ಈಗ ಏಕದಿನ ತಂಡದಲ್ಲಿ ಮೊದಲ ಆಯ್ಕೆಯಾಗಿರಲಿದ್ದಾರೆ. ಅಲ್ಲದೆ ಕೆಎಲ್ ರಾಹುಲ್ ಏಕದಿನ ಮಾದರಿಯಲ್ಲಿ ವಿಕೆಟ್ ಕೀಪರ್ ಆಗಿ ಜವಾಬ್ದಾರಿ ವಹಿಸಿಕೊಂಡಿರುವುದು ಪಂತ್‌ಗೆ ಮತ್ತೊಂದು ದೊಡ್ಡ ಅಡ್ಡಿಯಾಗಿದೆ.
IND vs SL : ಈ ಮೂವರು ಕ್ರಿಕೆಟಿಗರಿಗೆ ಶ್ರೀಲಂಕಾ ವಿರುದ್ಧದ ಸರಣಿ ಅಗ್ನಿಪರೀಕ್ಷೆ!

ಏಕದಿನ, ಟಿ20 ಮಾದರಿಯಲ್ಲಿ ಕಳಪೆ ಪ್ರದರ್ಶನ
2022ರಲ್ಲಿ ರಿಷಬ್ ಪಂತ್ ಒಟ್ಟು 7 ಟೆಸ್ಟ್ ಪಂದ್ಯಗಳನ್ನಾಡಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 7 ಪಂದ್ಯಗಳಲ್ಲಿ ಅವರು 61.81 ಸರಾಸರಿಯಲ್ಲಿ 680 ರನ್ ಗಳಿಸಿದ್ದಾರೆ. 12 ಏಕದಿನ ಪಂದ್ಯಗಳನ್ನಾಡಿದ್ದು 37.33 ಸರಾಸರಿಯಲ್ಲಿ 336 ರನ್ ಗಳಿಸಿದ್ದಾರೆ. 25 ಟಿ20 ಪಂದ್ಯಗಳಲ್ಲಿ ಪಂತ್ ಅವಕಾಶ ಪಡೆದರೂ, 21.41 ಸರಾಸರಿಯಲ್ಲಿ ಗಳಿಸಿದ್ದು ಮಾತ್ರ ಕೇವಲ 364 ರನ್.
ಟೆಸ್ಟ್ ಕ್ರಿಕೆಟ್‌ನಲ್ಲಿ ಪಂತ್ ಸ್ಥಾನ ಭದ್ರವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪಂತ್ ಅತ್ಯುತ್ತಮ ಫಾರ್ಮ್ ಹೊಂದಿದ್ದಾರೆ. ಆದರೆ, ಅದೇ ಆಟವನ್ನು ಏಕದಿನ ಮತ್ತು ಟಿ20 ಮಾದರಿಯಲ್ಲಿ ಮುಂದುವರೆಸುವಲ್ಲಿ ವಿಫಲರಾಗಿದ್ದಾರೆ.

ಟೆಸ್ಟ್ ಸರಣಿಗೆ ಪಂತ್ ಸಿದ್ದತೆ
ರಿಷಬ್ ಪಂತ್‌ಗೆ ಯಾವುದೇ ಗಂಭೀರವಾದ ಗಾಯವಾಗಿಲ್ಲ. ಆದರೂ ಅವರನ್ನು ಶ್ರೀಲಂಕಾ ವಿರುದ್ದದ ಸರಣಿಗೆ ಆಯ್ಕೆ ಮಾಡಿಲ್ಲ. 2023ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ.
ಸದ್ಯ ಪಂತ್‌ಗೆ ಎರಡು ವಾರಗಳ ಎನ್‌ಸಿಎಯಲ್ಲಿ ತರಬೇತಿ ಪಡೆಯಲು ಸೂಚಿಸಲಾಗಿದೆ. ಎರಡು ವಾರಗಳ ಅವರು ತಮ್ಮ ಫಿಟ್ನೆಸ್ ಮತ್ತು ಬ್ಯಾಟಿಂಗ್ ಮೇಲೆ ಕೆಲಸ ಮಾಡಲಿದ್ದಾರೆ.
ಏಕದಿನ ಮತ್ತು ಟಿ20 ಸರಣಿಯ ಬದಲಾಗಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯತ್ತ ಹೆಚ್ಚಿನ ಗಮನ ಹರಿಸಲು ಸೂಚನೆ ನೀಡಲಾಗಿದೆ. ಟೆಸ್ಟ್ ಮಾದರಿಯಲ್ಲಿ ಪಂತ್ ಭಾರತ ತಂಡದ ಪ್ರಮುಖ ಆಟಗಾರ. ಇದೇ ಕಾರಣಕ್ಕೆ ಅವರನ್ನು ಬಲಪಡಿಸುವ ಮತ್ತು ಕಂಡೀಷನಿಂಗ್ ಸೆಷನ್ ಅನ್ನು ಬಿಸಿಸಿಐ ವೈದ್ಯಕೀಯ ತಂಡ ಶಿಫಾರಸು ಮಾಡಿದೆ.