ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಹೆಸರಿಸಿದ ಬ್ರಾಡ್ ಹಾಗ್: ಆರಂಭಿಕನಾಗಿ ವಿರಾಟ್ ಕೊಹ್ಲಿ

ಟಿ20 ವಿಶ್ವಕಪ್‌ನ ಆರಂಭಕ್ಕೆ ಇನ್ನು ಕೆಲವೇ ತಿಂಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಕೂಡ ಈ ಮಹತ್ವದ ಟೂರ್ನಿಗೆ ಬಲಿಷ್ಟ ತಂಡವನ್ನು ಆಯ್ಕೆ ಮಾಡಲು ಸಿದ್ಧತೆ ನಡೆಸುತ್ತಿವೆ. ಈ ಪ್ರತಿಷ್ಟಿತ ಟೂರ್ನಿಗ ಭಾರತ ತಂಡದ ಪರವಾಗಿಯೂ ಯಾವೆಕಲ್ಲಾ ಆಟಗಾರರು ಆಯ್ಕೆಯಾಗಲಿದ್ದಾರೆ ಎಂಬುದು ಮೂಡಿಸಿದೆ.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಕಣಕ್ಕಿಳಿಯುವ ತಮ್ಮ ನೆಚ್ಚಿನ ತಂಡವನ್ನು ಹೆಸರಿಸಿದ್ದಾರೆ. ಈ ತಂಡದಲ್ಲಿ ಆರಂಭಿಕ ಸ್ಥಾನದಿಂದ ಕೆಎಲ್ ರಾಹುಲ್‌ರನ್ನು ಕೈಬಿಡಲಾಗಿದೆ. ಮಧ್ಯಮ ಕ್ರಮಾಂಕದ ಜವಾಬ್ಧಾರಿಯ್ನನು ರಾಹುಲ್‌ಗೆ ನೀಡಲಾಗಿದೆ.

ಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ

ಹಾಗಾದರೆ ಬ್ರಾಡ್ ಹಾಗ್ ಹೆಸರಿಸಿದ ಟಿ20 ವಿಶ್ವಕಪ್‌ನ ಭಾರತದ ಆಡುವ ಬಳಗ ಹೇಗಿದೆ? ಮುಂದೆ ಓದಿ

ಆರಂಭಿಕನಾಗಿ ರೋಹಿತ್‌ಗೆ ಕೊಹ್ಲಿ ಸಾಥ್

ಆರಂಭಿಕನಾಗಿ ರೋಹಿತ್‌ಗೆ ಕೊಹ್ಲಿ ಸಾಥ್

ಬ್ರಾಡ್ ಹಾಗ್ ಹೆಸರಿಸಿದ ಈ ತಂಡದಲ್ಲಿ ಆರಂಭಿಕನಾಗಿ ರೋಹಿತ್ ಶರ್ಮಾಗೆ ಕೆಎಲ್ ರಾಹುಲ್ ಬದಲಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹೆಸರಿಸಿದ್ದಾರೆ. ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಬಗ್ಗೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಸೂರ್ಯಕುಮಾರ್-ಕೆಎಲ್ ರಾಹುಲ್- ರಿಷಭ್ ಪಂತ್

ಸೂರ್ಯಕುಮಾರ್-ಕೆಎಲ್ ರಾಹುಲ್- ರಿಷಭ್ ಪಂತ್

ಭಾರತದ ತಂಡದ ಮೂರನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಸೂಕ್ತ ಎಂದು ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್‌ನಲ್ಲಿರುವ ವಿಭಿನ್ನತೆ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಮತ್ತಷ್ಟು ರೋಚಕತೆಯನ್ನು ಮೂಡಿಸಲಿದೆ ಎಂದಿದ್ದಾರೆ ಬ್ರಾಡ್ ಹಾಗ್. ನಾಲ್ಕನೇ ಕ್ರಮಾಂಕಕ್ಕೆ ಕೆಎಲ್ ರಾಹುಲ್ ಅತ್ಯಂತ ಸೂಕ್ತ ಆಟಗಾರ ಎಂದಿದ್ದಾರೆ ಬ್ರಾಡ್ ಹಾಗ್.

ಕೆಳ ಮಧ್ಯಮ ಕ್ರಮಾಂಕ

ಕೆಳ ಮಧ್ಯಮ ಕ್ರಮಾಂಕ

ಇನ್ನು ಭಾರತದ ತಂಡದ ಕೆಳ ಮಧ್ಯಮ ಕ್ರಮಾಂಕದಲ್ಲಿ ಮತ್ತಷ್ಟು ಸ್ಪೋಟಕ ಆಟಗಾರರನ್ನು ಆಯ್ಕೆ ಮಾಡಿದ್ದಾರೆ ಬ್ರಾಡ್ ಹಾಗ್. ಐದನೇ ಕ್ರಮಾಂಕದಲ್ಲಿ ರಿಷಬ್ ಪಂತ್ ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಏಳನೇ ಕ್ರಮಾಂಕದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಹೆಸರಿಸಿದ್ದಾರೆ.

ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದ ಪೃಥ್ವಿ ಶಾ | Oneindia Kannada
ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಆಗಿ ಯುಜುವೇಂದ್ರ ಯಾದವ್ ಅವರನ್ನು ಹೆಸರಿಸಿದ್ದಾರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಹಾಗೂ ಜಸ್ಪ್ರೀತ್ ಬೂಮ್ರಾ ಅವರನ್ನು ಹೆಸರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, July 11, 2021, 13:05 [IST]
Other articles published on Jul 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X