
ಡಿಆರ್‌ಎಸ್ ಬಣ್ಣ ಬಯಲಾಗಿದೆ, ಇನ್ನೇನಿದ್ರು ರೆಫರಿಗೆ ಬಿಟ್ಟಿದ್ದು ಎಂದ ಕೋಚ್
ಡೀನ್ ಎಲ್ಗರ್ ಘಟನೆಯ ಬಗ್ಗೆ ಭಾರತದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅಸಮಾಧಾನ ವ್ಯಕ್ತಪಡಿಸಿದ್ದು, ಅಲ್ಲಿ ಏನಾಯಿತು ಎಂಬುದನ್ನ ಎಲ್ಲರೂ ನೋಡಿದ್ದಾರೆ ಎಂದು ಮಾಂಬ್ರೆ ಉತ್ತರಿಸಿದರು. ಜೊತೆಗೆ ಮ್ಯಾಚ್ ರೆಫರಿಗೆ ಅಂತಿಮ ತೀರ್ಮಾನವನ್ನ ಬಿಟ್ಟುಕೊಡುವುದಾಗಿ ಹಾಗೂ ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೇಲೆ ಗಮನವನ್ನ ಕೇಂದ್ರೀಕರಿಸಲು ಬಯಸುವುದಾಗಿ ಮಾಂಬ್ರೆ ಸೇರಿಸಿದ್ದಾರೆ.
"ನಾವು ಅದನ್ನು ನೋಡಿದ್ದೇವೆ, ನೀವು ಅದನ್ನು ನೋಡಿದ್ದೀರಿ, ಎಲ್ಲರೂ LBW ನಿರ್ಧಾರವನ್ನು ನೋಡಿದ್ದಾರೆ, ತೀರ್ಮಾನವನ್ನ ನಾನು ಮ್ಯಾಚ್ ರೆಫರಿಗೆ ಬಿಡುತ್ತೇನೆ. ಈಗ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸುವ ಸಮಯ" ಎಂದು ದಿನದ ಆಟದ ಕೊನೆಯಲ್ಲಿ ಭಾರತೀಯ ಬೌಲಿಂಗ್ ಕೋಚ್ ಹೇಳಿದರು.
ಇನ್ನು ಈ ಘಟನೆ ಕುರಿತಾಗಿ ಭಾರತೀಯ ಆಟಗಾರರು ಪ್ರತಿಕ್ರಿಯಿಸಿದ ರೀತಿಯ ಕುರಿತಾಗಿ ಕೇಳಿದ ಪ್ರಶ್ನೆಗೆ ''ಕೆಲವೊಮ್ಮೆ ಆಟದ ಮೈದಾನದಲ್ಲಿ ಭಾವನೆಗಳ ಜೊತೆ ಸಹ ಆಡುತ್ತಾರೆ'' ಎಂದು ವ್ಯಂಗ್ಯವಾಡಿದರು.

ದಿನದ ಕೊನೆಯ ಎಸೆತದಲ್ಲಿ ಔಟಾದ ಡೀನ್ ಎಲ್ಗರ್
ಆದಾಗ್ಯೂ ಡೀನ್ ಎಲ್ಗರ್ ನಾಟೌಟ್ ಎಂದು ಡಿಆರ್‌ಎಸ್ ತೀರ್ಪು ನೀಡಿತಾದ್ರೂ, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ 30ರನ್‌ಗಳಿಸಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ವಿಕೆಟ್ ಒಪ್ಪಿಸಿದ್ರು. ದಿನದ ಕೊನೆಯವರೆಗೂ ತಾಳ್ಮೆಯ ಆಟವಾಡಿದ ಎಲ್ಗರ್ 96 ಎಸೆತಗಳನ್ನ ಎದುರಿಸಿದ್ರು. ಆದ್ರೆ ದಿನದ ಕೊನೆಯ ಎಸೆತದಲ್ಲಿ ವಿಕೆಟ್ ಕೈ ಚೆಲ್ಲಿ ನಿರಾಸೆಯಿಂದ ಪೆವಿಲಿಯನ್ ಸೇರಿಕೊಂಡ್ರು.
ಸದ್ಯ ಜಸ್ಪ್ರೀತ್ ಬುಮ್ರಾಗೆ ಸರಿಯಾಟಿಯೇ ಇಲ್ಲ: ಆತನೇ ವಿಶ್ವದ ಬೆಸ್ಟ್ ಬೌಲರ್ ಎಂದ ಮೈಕಲ್ ವಾನ್

ದಕ್ಷಿಣ ಆಫ್ರಿಕಾ ಗೆಲುವಿಗೆ ಬೇಕಿದೆ 111 ರನ್
ನಾಲ್ಕನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ ಇನ್ನು 111 ರನ್‌ಗಳು ಬಾಕಿ ಉಳಿದಿವೆ. ಅದೇ ಭಾರತದ ಗೆಲುವಿಗೆ 8 ವಿಕೆಟ್‌ಗಳ ಅವಶ್ಯಕತೆಯಿದ್ದು, ಪಂದ್ಯ ಜಯಿಸಿದ ತಂಡ ಮೂರು ಪಂದ್ಯಗಳ ಸರಣಿಯನ್ನ ಗೆದ್ದು ಬೀಗಲಿದೆ. ಸದ್ಯ ಕ್ರೀಸ್‌ನಲ್ಲಿ ಉತ್ತಮ ಆಟವಾಡಿದ್ದ ಕೀಗನ್ ಪೀಟರ್ಸನ್ ಅಜೇಯ 48 ರನ್‌ಗಳಿಸಿ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು, ರಾಸ್ಸಿ ವ್ಯಾನ್ ಡರ್ ಡುಸ್ಸೆನ್ ಪೀಟರ್ಸನ್ ಜೊತೆಗೆ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಅಂತಿಮ ದಿನದಾಟದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಲಿವೆ.
"ವಿದೇಶದಲ್ಲಿ ಭಾರತೀಯರ ಅತ್ಯುತ್ತಮ ಶತಕಗಳ ಪೈಕಿ ಒಂದು"

20 ಕ್ಯಾಚ್‌ಗಳನ್ನ ಕಂಡ ಮೊದಲ ಟೆಸ್ಟ್ ಪಂದ್ಯವಿದು!
ಕೇಪ್‌ಟೌನ್ ಟೆಸ್ಟ್ ಪಂದ್ಯ ಕ್ರಿಕೆಟ್ ವಲಯದಲ್ಲಿ ಹೊಸ ದಾಖಲೆಗೆ ಸಾಕ್ಷಿಯಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ತಂಡಗಳು ಆಲೌಟ್ ಆದ ಬಳಿಕ 20 ವಿಕೆಟ್‌ಗಳು ಸಹ ಕ್ಯಾಚ್‌ನಿಂದಲೇ ಔಟಾಗಿರುವುದು ಹೊಸ ದಾಖಲೆಯಾಗಿದೆ. ಈ ಮೊದಲು ಐದು ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ 19 ವಿಕೆಟ್ ಕ್ಯಾಚ್ ಆಗಿದ್ದೇ ಹೆಚ್ಚು. ಆದ್ರೆ ಇದೇ ಮೊದಲ ಬಾರಿಗೆ 20 ಆಟಗಾರರು ಕ್ಯಾಚ್ ನೀಡಿರುವುದು ಆಶ್ಚರ್ಯ ಮೂಡಿಸಿದೆ.


Click it and Unblock the Notifications
