ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರದ್ದಾಗಿದ್ದ ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್‌ ದಿನಾಂಕ ಪ್ರಕಟ; ಟಿ20, ಏಕದಿನ ಸರಣಿ ವೇಳಾಪಟ್ಟಿ ಕೂಡ ಫಿಕ್ಸ್

ECB announced the rescheduled date of India vs England 5th test

ಕೊರೊನಾ ವೈರಸ್ ಕಾರಣದಿಂದ ಈ ವರ್ಷ ಕೆಲವೊಂದಷ್ಟು ಕ್ರಿಕೆಟ್ ಟೂರ್ನಿಗಳು ಮತ್ತು ಪಂದ್ಯಗಳು ರದ್ದಾಗಿದ್ದವು. ಮೊದಲಿಗೆ ಭಾರತದಲ್ಲಿ ಆರಂಭವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಮಧ್ಯದಲ್ಲಿಯೇ ಸ್ಥಗಿತಗೊಂಡು ನಂತರ ಯುಎಇಗೆ ಸ್ಥಳಾಂತರಿಸಲ್ಪಟ್ಟಿತ್ತು. ಇನ್ನು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜನೆಗೊಂಡಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೂಡ ಭಾರತ ತಂಡದಲ್ಲಿ ಕೊರೋನಾವೈರಸ್ ಕಾಣಿಸಿಕೊಂಡ ಕಾರಣದಿಂದಾಗಿ ರದ್ದಾಗಿತ್ತು.

ಅಖ್ತರ್ ಸವಾಲು ಹಾಕಿದ್ದು ಭಾರತಕ್ಕೆ ಆದರೆ ಆ ಸವಾಲನ್ನು ಸುಲಭವಾಗಿ ಮುರಿದದ್ದು ಸೌತ್ಆಫ್ರಿಕಾ!ಅಖ್ತರ್ ಸವಾಲು ಹಾಕಿದ್ದು ಭಾರತಕ್ಕೆ ಆದರೆ ಆ ಸವಾಲನ್ನು ಸುಲಭವಾಗಿ ಮುರಿದದ್ದು ಸೌತ್ಆಫ್ರಿಕಾ!

ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ 4 ಟೆಸ್ಟ್ ಪಂದ್ಯಗಳು ಯಾವುದೇ ಅಡಚಣೆಯಿಲ್ಲದೆ ಸರಾಗವಾಗಿ ನಡೆದಿದ್ದವು. ಆದರೆ ಅಂತಿಮ ಹಾಗೂ ಐದನೇ ಟೆಸ್ಟ್ ಪಂದ್ಯ ಮಾತ್ರ ಕೊರೊನಾ ಸೋಂಕಿನ ಭೀತಿಯಿಂದ ರದ್ದಾಗಿ ಕೆಲ ಗೊಂದಲಗಳನ್ನು ಉಂಟು ಮಾಡಿತ್ತು. ಸೆಪ್ಟೆಂಬರ್ 10ರಿಂದ ಸೆಪ್ಟೆಂಬರ್ 14ರವರೆಗೆ ಮ್ಯಾಂಚೆಸ್ಟರ್ ನಗರದ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಇದಕ್ಕೂ ಮುನ್ನ ನಡೆದಿದ್ದ 4 ಟೆಸ್ಟ್ ಪಂದ್ಯಗಳ ಪೈಕಿ ಭಾರತ 2 - 1 ಅಂತರದಿಂದ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿತ್ತು. ಹೀಗಾಗಿ ಐದನೇ ಟೆಸ್ಟ್ ಪಂದ್ಯ ನಡೆದರೆ ಮಾತ್ರ ಸರಣಿಯಲ್ಲಿ ಭಾರತ ವಿಜೇತ ತಂಡವಾಗಿ ಹೊರಹೊಮ್ಮುತ್ತಾ ಅಥವಾ ಡ್ರಾ ಆಗಲಿದೆಯಾ ಎಂಬ ಸ್ಪಷ್ಟ ಫಲಿತಾಂಶ ಸಿಗಲಿದೆ.

ಈ ಕಾರಣದಿಂದಾಗಿಯೇ ಆ ಟೆಸ್ಟ್ ಪಂದ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಮುಂದಿನ ವರ್ಷ ಟೀಮ್ ಇಂಡಿಯಾ ಮತ್ತೆ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಾಗ ಮುಂದುವರೆಸುವುದಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಮಾಹಿತಿಯನ್ನು ನೀಡಿತ್ತು. ಹೌದು, 2022ರಲ್ಲಿ ಭಾರತ ಏಕದಿನ ಮತ್ತು ಟಿ ಟ್ವೆಂಟಿ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದ್ದು ಅದೇ ಸಮಯದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಟೆಸ್ಟ್ ಪಂದ್ಯವನ್ನು ನಡೆಸಲು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಇದೀಗ ಆ ಪಂದ್ಯದ ದಿನಾಂಕ ಮತ್ತು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಗಳ ದಿನಾಂಕವನ್ನು ಪ್ರಕಟಿಸಲಾಗಿದ್ದು, ಅದರ ವಿವರ ಮುಂದೆ ಇದೆ ಓದಿ..

ಐದನೇ ಟೆಸ್ಟ್ ಯಾವಾಗ?

ಐದನೇ ಟೆಸ್ಟ್ ಯಾವಾಗ?

ಈ ವರ್ಷ ರದ್ದಾಗಿ ಮುಂದೂಡಲ್ಪಟ್ಟಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಜುಲೈ 1ರಿಂದ ಜುಲೈ 5ರವರೆಗೆ ನಡೆಸಲು ತೀರ್ಮಾನಿಸಲಾಗಿದ್ದು ಈ ಪಂದ್ಯ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ವೇಳಾಪಟ್ಟಿ

3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ವೇಳಾಪಟ್ಟಿ

ರದ್ದಾಗಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಮುಗಿದ ನಂತರ 3 ಟಿ ಟ್ವೆಂಟಿ ಮತ್ತು 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ 3 ಟಿ ಟ್ವೆಂಟಿ ಪಂದ್ಯಗಳ ಸರಣಿಯ ವೇಳಾ ಪಟ್ಟಿ ಈ ಕೆಳಕಂಡಂತಿದೆ.


* ಮೊದಲ ಟಿ ಟ್ವೆಂಟಿ ಪಂದ್ಯ ಜುಲೈ 7ಕ್ಕೆ ಏಜೀಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿದೆ

* ದ್ವಿತೀಯ ಟಿ ಟ್ವೆಂಟಿ ಪಂದ್ಯ ಜುಲೈ 9ಕ್ಕೆ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ

* ತೃತೀಯ ಟಿ ಟ್ವೆಂಟಿ ಪಂದ್ಯ ಜುಲೈ 10ಕ್ಕೆ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಲಿದೆ

Virat Kohliಗೆ‌ ಒಂದು ಕಿವಿಮಾತು ಹೇಳಿದ Sunil Gavaskar | Oneindia Kannada
ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಏಕದಿನ ಪಂದ್ಯಗಳ ಸರಣಿಯ ವೇಳಾಪಟ್ಟಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಏಕದಿನ ಪಂದ್ಯಗಳ ಸರಣಿಯ ವೇಳಾಪಟ್ಟಿ

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯ ವೇಳಾಪಟ್ಟಿ ಈ ಕೆಳಕಂಡಂತಿದೆ.


* ಮೊದಲ ಏಕದಿನ ಪಂದ್ಯ ಜುಲೈ 12ರಂದು ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

* ದ್ವಿತೀಯ ಏಕದಿನ ಪಂದ್ಯ ಜುಲೈ 14ರಂದು ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

* ತೃತೀಯ ಏಕದಿನ ಪಂದ್ಯ ಜುಲೈ 17ರಂದು ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Story first published: Friday, October 22, 2021, 20:28 [IST]
Other articles published on Oct 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X