ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್‌ನ ಭವಿಷ್ಯದ ಕುರಿತು ದೊಡ್ಡ ಹೇಳಿಕೆ ನೀಡಿದ ಮಾಜಿ ನಾಯಕ ಕಪಿಲ್ ದೇವ್

Former Captain Kapil Dev Made A Big Statement About The Future of Indian Cricket

ಭಾರತ ಕ್ರಿಕೆಟ್ ತಂಡವು ಭವಿಷ್ಯದಲ್ಲಿ ಮೂರು ವಿಭಿನ್ನ ತಂಡಗಳನ್ನು ಹೊಂದುವುದನ್ನು ನೋಡಬಹುದು. ಟಿ20, ಏಕದಿನ ಮತ್ತು ಟೆಸ್ಟ್‌ ಪಂದ್ಯಗಳಿಗೆ ಪ್ರತ್ಯೇಕ ಭಾರತದ ತಂಡಗಳನ್ನು ಹೊಂದುವುದನ್ನು ನಾನು ನೋಡುತ್ತೇನೆ ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

ಭಾರತವು ಪ್ರಸ್ತುತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ. ಇನ್ನೂ ಒಂದು ಬಾಕಿ ಇರುವಂತೆಯೇ 2-0 ಅಂತರದಲ್ಲಿ ಮುನ್ನಡೆ ಸಾಧಿಸಿ ಸರಣಿ ಗೆಲುವು ಸಾಧಿಸಿದೆ. ಅಂತಿಮ ಏಕದಿನ ಪಂದ್ಯವು ಜನವರಿ 24ರಂದು ಇಂದೋರ್‌ನಲ್ಲಿ ನಡೆಯಲಿದೆ.

ಕೆಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆಗೆ ಬರುವ ಅತಿಥಿಗಳಿಗೆ ಈ ಷರತ್ತು ಕಡ್ಡಾಯಕೆಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆಗೆ ಬರುವ ಅತಿಥಿಗಳಿಗೆ ಈ ಷರತ್ತು ಕಡ್ಡಾಯ

ಗಲ್ಫ್ ಟೈಮ್ಸ್‌ನೊಂದಿಗೆ ಮಾತನಾಡಿದ ಭಾರತ ತಂಡದ ಮಾಜಿ ಕ್ರಿಕೆಟಿಗ ಕಪಿಲ್ ದೇವ್, "ಭಾರತವು ವಿಭಿನ್ನ ಸ್ವರೂಪದ ಟಿ20, ಏಕದಿನ ಮತ್ತು ಟೆಸ್ಟ್‌ ಪಂದ್ಯಗಳಿಗೆ ಮೂರು ವಿಭಿನ್ನ ತಂಡಗಳನ್ನು ಹೊಂದುವುದನ್ನು ನೋಡಬಹುದು. ಆಗಾಗ್ಗೆ ತಂಡಗಳನ್ನು ಬದಲಾಯಿಸುವುದರಿಂದ ಅನೇಕ ಇತರ ಯುವ ಕ್ರಿಕೆಟಿಗರು ರಾಷ್ಟ್ರೀಯ ತಂಡಕ್ಕಾಗಿ ಆಡುವ ಅವಕಾಶವನ್ನು ನೀಡುತ್ತದೆ," ಎಂದು ಹೇಳಿದರು.

Former Captain Kapil Dev Made A Big Statement About The Future of Indian Cricket

"ತಂಡದಲ್ಲಿನ ಬದಲಾವಣೆಗಳು ಆರೋಗ್ಯಕರವಾಗಿರಬೇಕು. ಮುಂಬರುವ ಪಂದ್ಯಕ್ಕೆ ಪಂದ್ಯಶ್ರೇಷ್ಠ ಆಟಗಾರರನ್ನು ಕೈಬಿಡುವುದು ಹಾನಿಕಾರಕವಾಗಿದೆ. ನೀವು ಕಳಪೆ ಆಟಗಾರನನ್ನು ಬದಲಾಯಿಸಬಹುದು, ನಾನು ಅದನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಮರುದಿನ ಪಂದ್ಯಶ್ರೇಷ್ಠರನ್ನು ಕೈಬಿಟ್ಟರೆ, ಕ್ರಿಕೆಟಿಗರಾದ ನಮಗೆ ಅದು ಅರ್ಥವಾಗುವುದಿಲ್ಲ," ಎಂದು ಕಪಿಲ್ ದೇವ್ ಒತ್ತಿ ಹೇಳಿದರು.

IND vs NZ: ಭಾರತದ ಶುಭ್ಮನ್ ಗಿಲ್ ಬ್ಯಾಟಿಂಗ್‌ ಕುರಿತು ಪಿಸಿಬಿ ಮಾಜಿ ಅಧ್ಯಕ್ಷ ಹೇಳಿದ್ದೇನು?

ಸದ್ಯ ಭಾರತದಲ್ಲಿ ಉತ್ತಮ ತಂಡವಿದೆ ಮತ್ತು ಮುಂಬರುವ 50 ಓವರ್‌ಗಳ ವಿಶ್ವಕಪ್ ಟ್ರೋಫಿ ಗೆಲ್ಲುವ ಉತ್ತಮ ಅವಕಾಶವವೂ ಇದೆ ಎಂದ ಕಪಿಲ್ ದೇವ್, ಈ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿಹಿಡಿಯುವ ಸಾಮರ್ಥ್ಯವನ್ನು ಹೊಂದಿರುವ ಇತರ ತಂಡಗಳೂ ಇವೆ ಎಂದು ಹೇಳಿದರು.

ಕಪಿಲ್ ದೇವ್ ಅವರು 1983ರಲ್ಲಿ ಭಾರತ ತಂಡವನ್ನು ತಮ್ಮ ಮೊದಲ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಟ್ಟ ನಾಯಕರಾಗಿದ್ದರು.

Former Captain Kapil Dev Made A Big Statement About The Future of Indian Cricket

"ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಹೊಂದಿರುವ ಇತರ ತಂಡಗಳೂ ಇವೆ. ಟ್ರೋಫಿಯನ್ನು ಗೆಲ್ಲಲು ನಿಮಗೆ ಅದೃಷ್ಟ, ಸರಿಯಾದ ಸಂಯೋಜನೆ ಮತ್ತು ಪ್ರಮುಖ ಆಟಗಾರರು ಫಿಟ್ ಆಗಿ ಉಳಿಯಬೇಕು. ಅದು ಅತ್ಯಂತ ಮುಖ್ಯವಾದ ವಿಷಯ," ಎಂದು ಮಾಜಿ ನಾಯಕ ಕಪಿಲ್ ದೇವ್ ತಿಳಿಸಿದರು.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ, ಜನವರಿ 24ರಂದು ನಡೆಯಲಿರುವ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಗೆದ್ದರೆ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವ ಅವಕಾಶವಿದೆ.

ICC ODI Ranking: ಸತತ ಸೋಲಿನ ಬಳಿಕ ಅಗ್ರಸ್ಥಾನದಿಂದ ಕೆಳಗಿಳಿದ ಕಿವೀಸ್; ನಂ.1 ಸ್ಥಾನದ ಮೇಲೆ ಕಣ್ಣಿಟ್ಟ ಭಾರತ!ICC ODI Ranking: ಸತತ ಸೋಲಿನ ಬಳಿಕ ಅಗ್ರಸ್ಥಾನದಿಂದ ಕೆಳಗಿಳಿದ ಕಿವೀಸ್; ನಂ.1 ಸ್ಥಾನದ ಮೇಲೆ ಕಣ್ಣಿಟ್ಟ ಭಾರತ!

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಾಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ/ ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್, ಹೆನ್ರಿ ಶಿಪ್ಲೆರ್ಸನ್

Story first published: Sunday, January 22, 2023, 17:58 [IST]
Other articles published on Jan 22, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X