ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಿನ್ ವಿರುದ್ಧ ಭಾರತೀಯ ಆಟಗಾರರ ತಿಣುಕಾಟ: ಕಾರಣ ವಿವರಿಸಿದ ವಾಸಿಂ ಜಾಫರ್

Former Indian cricieter Wasim Jaffer explains the reason for Indian batters do not play spin bowling well

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಅಗ್ ಕ್ರಮಾಂಕದ ಆಟಗಾರರು ಸ್ಪಿನ್ ಬೌಲಿಂಗ್ ಎದುರಿಸಲು ಪ್ರಯಾಸ ಪಡುತ್ತಿರುವುದು ಸ್ಪಷ್ಟವಾಗಿದೆ. ಈ ಸರಣಿಯಲ್ಲಿ ಮಾತ್ರವಲ್ಲ ಈ ಹಿಂದಿನ ಕೆಲ ಸರಣಿಗಳಲ್ಲಿಯೂ ಭಾರತದ ದಾಂಡಿಗರು ಸ್ಪಿನ್ ವಿರುದ್ಧ ತಿಣುಕಾಡಿದ್ದಾರೆ. ಯುವ ಆಟಗಾರರಾದ ಶುಬ್ಮನ್ ಗಿಲ್, ಇಶಾನ್ ಕಿಶನ್ ಹಾಗೂ ಪೃಥ್ವಿ ಶಾ ಅವರಂತಾ ಆಟಗಾರರು ವೇಗದ ಬೌಲಿಂಗ್ ಎದುರಿಸುವಷ್ಟು ಹೊಂದಿರುವ ಚಾಕಚಕ್ಯತೆಯನ್ನು ಸ್ಪಿನ್ ವಿರುದ್ಧ ಹೊಂದಿಲ್ಲ .

ಭಾರತದ ಯುವ ಆಟಗಾರರ ಈ ಸಮಸ್ಯೆಯ ಬಗ್ಗೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಪ್ರತಿಕ್ರಿಯೆ ನೀಡಿದ್ದು ಇದು ನಿಜಕ್ಕೂ ಕಳವಳಕಾರಿ ಅಂಶ ಎಂದಿದ್ದಾರೆ. ಇದರಿಂದಾಗಿ ಭಾರತ ತಂಡ ಗುಣಮಟ್ಟದ ಸ್ಪಿನ್ ಬೌಲಿಂಗ್ ಹೊಂದಿರುವ ತಂಡದ ವಿರುದ್ದ ಕುಸಿತ ಕಾಣುವ ಸಾಧ್ಯತೆಯಿದೆ ಎಂದಿದ್ದಾರೆ.

U-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾU-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ

"ಇತ್ತೀಚಿನ ದಿನಗಳಲ್ಲಿ ಬ್ಯಾಟರ್‌ಗಳು ಸಾಮಾನ್ಯವಾಗಿ ಬೌಲರ್‌ಗಳಿಂದಾಗುವ ಅಪಾಯದಿಂದ ಹೊರಬರಲು ಆಕ್ರಮಣಕಾರಿಯಾಗಿ ಆಡಲು ಮುಂದಾಗುತ್ತಾರೆ. ಆದರೆ ನಮ್ಮ ಕಾಲದಲ್ಲಿ ಅಂಥಾ ಸಂದರ್ಭದಲ್ಲಿ ಈ ರೀತಿ ಆಡಲು ತರಬೇತಿ ನೀಡುತ್ತಿರಲಿಲ್ಲ ಅಥವಾ ಹೇಳುತ್ತಿರಲಿಲ್ಲ" ಎಂದಿದ್ದಾರೆ ವಾಸಿಂ ಜಾಫರ್.

"ಸೀಮಿಂಗ್ ಪರಿಸ್ಥಿತಿಗಳಲ್ಲಿಯೂ ಕೂಡ ಇತ್ತೀಚಿನ ದಿನಗಳಲ್ಲಿ ಬ್ಯಾಟರ್‌ಗಳು ಆಕ್ರಮಣಕಾರಿಯಾಗಿಯೇ ಆಡುವ ಮೂಲಕ ಎದುರಿಸಲು ಬಯಸುತ್ತಾರೆ. ಇಂಥಾ ಸಂದರ್ಭದಲ್ಲಿ ಬ್ಯಾಟರ್ ಹೆಚ್ಚು ಆಕ್ರಮಣಕಾರಿ ಅಥವಾ ಹೆಚ್ಚು ಪೂರ್ವನಿರ್ಧರಿತವಾಗಿರುತ್ತಾನೆ" ಎಂದಿದ್ದಾರೆ ವಾಸಿಂ ಜಾಫರ್.

ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿ

"ನಮ್ಮ ಕಾಲದಲ್ಲಿ ಸ್ಪೆಲ್ ಮುಗಿಯುವವರೆಗೆ ಆಡುವಂತೆ ಹೇಳುತ್ತಿದ್ದೆವು. ಆದರೆ ಟಿ20 ಕ್ರಿಕೆಟ್ ಅದಕ್ಕೆ ಅವಕಾಶ ನೀಡುವುದಿಲ್ಲ. ಭಾರತದ ಆಟಗಾರರು ಕೂಡ ನಮ್ಮ ಕಾಲದಲ್ಲಿ ಆಡುತ್ತಿದ್ದಂತೆ ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುತ್ತಿಲ್ಲ. ಇದು ಖಂಡಿತವಾಗಿಯೂ ಕಳವಳಕಾರಿ ಅಂಶ. ಆದರೆ ಇದನ್ನು ಸರಿಪಡಿಸಲು ಸಾಧ್ಯವಿದೆ. ಈಗ ಎಲಲ್ರ ಗಮನ ಕೂಡ ವೇಗದ ಬೌಲಿಂಗ್ ಕಡೆಗೆ ನೆಟ್ಟಿದೆ. ದೇಶೀಯ ಕ್ರಿಕೆಟ್‌ನಲ್ಲಿ ಕೂಡ ಸ್ಪಿನ್ ವಿರುದ್ಧ ಆಡಲು ಹೆಚ್ಚಿನ ಅವಕಾಶ ದೊರೆಯುವುದಿಲ್ಲ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್.

Story first published: Monday, January 30, 2023, 20:54 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X