ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಗೂ ನಡುಕ ಹುಟ್ಟಿಸಿದ್ದ ಈ ಸ್ಪಿನ್ನರ್‌ನ ಅಗತ್ಯತೆ ಟಿಟ್ವೆಂಟಿ ವಿಶ್ವಕಪ್‌ನಲ್ಲಿ ಭಾರತಕ್ಕಿದೆ ಎಂದ ಹರ್ಭಜನ್ ಸಿಂಗ್

Harbhajan names India bowler who is T20 World Cup material

ಸದ್ಯ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಕುರಿತು ಈಗಾಗಲೇ ಚರ್ಚೆಗಳು ಆರಂಭವಾಗಿದ್ದು ಯಾವ ಆಟಗಾರರು ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಸದ್ಯ 2 ತಂಡಗಳಾಗಿ ವಿಂಗಡಣೆಗೊಂಡಿರುವ ಟೀಮ್ ಇಂಡಿಯಾದಲ್ಲಿ ಆಟಗಾರರ ದಂಡೇ ಇದೆ. ಹೀಗಾಗಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಯಾವ ಆಟಗಾರರಿಗೆ ಅವಕಾಶ ನೀಡಬೇಕು ಎಂಬುದು ದೊಡ್ಡ ತಲೆನೋವಾಗಿ ಪರಿಣಮಿಸುವುದಂತೂ ಸತ್ಯ.

ಭಾರತ vs ಶ್ರೀಲಂಕಾ: ವಿಶೇಷ ದಾಖಲೆ ಬರೆದ ದೇವದತ್ ಪಡಿಕ್ಕಲ್ಭಾರತ vs ಶ್ರೀಲಂಕಾ: ವಿಶೇಷ ದಾಖಲೆ ಬರೆದ ದೇವದತ್ ಪಡಿಕ್ಕಲ್

ಏಕಕಾಲಕ್ಕೆ ಎರಡೆರಡು ತಂಡಗಳನ್ನು ರಚಿಸುವಷ್ಟು ಆಟಗಾರರಿರುವಾಗ ಮುಂಬರುವ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ. ಈ ಕುರಿತು ಇದೀಗ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಾತನಾಡಿದ್ದು ವರುಣ್ ಚಕ್ರವರ್ತಿಯನ್ನು ಮುಂಬರುವ ಟಿ ಟ್ವೆಂಟಿ ವಿಶ್ವಕಪ್‌ಗೆ ಆಯ್ಕೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

3ನೇ ಟಿ20ಐ ಪಂದ್ಯದಿಂದ ನವದೀಪ್ ಸೈನಿ ಹೊರ ಬೀಳುವ ಸಾಧ್ಯತೆ3ನೇ ಟಿ20ಐ ಪಂದ್ಯದಿಂದ ನವದೀಪ್ ಸೈನಿ ಹೊರ ಬೀಳುವ ಸಾಧ್ಯತೆ

ಈಗಾಗಲೇ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಮತ್ತು ರಾಹುಲ್ ಚಹರ್ ಹೆಸರುಗಳು ಸಹ ಟಿ ಟ್ವೆಂಟಿ ವಿಶ್ವಕಪ್ ಆಯ್ಕೆಯ ಕುರಿತು ಕೇಳಿ ಬರುತ್ತಿದ್ದು ಇದೀಗ ಹರ್ಭಜನ್ ಸಿಂಗ್ ವರುಣ್ ಚಕ್ರವರ್ತಿಯ ಹೆಸರನ್ನು ಈ ಪಟ್ಟಿಗೆ ಸೇರಿಸಿದ್ದಾರೆ. ವರುಣ್ ಚಕ್ರವರ್ತಿಗೆ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಅವಕಾಶ ನೀಡಲೇಬೇಕು ಎಂದಿರುವ ಹರ್ಭಜನ್ ಸಿಂಗ್ ಈ ಕೆಳಕಂಡಂತೆ ವರುಣ್ ಚಕ್ರವರ್ತಿ ಕುರಿತು ಹೊಗಳಿದ್ದಾರೆ.

ಧೋನಿಯೂ ಈತನಿಗೆ ದೊಡ್ಡ ಹೊಡೆತ ಹೊಡೆಯುತ್ತಿರಲಿಲ್ಲ

ಧೋನಿಯೂ ಈತನಿಗೆ ದೊಡ್ಡ ಹೊಡೆತ ಹೊಡೆಯುತ್ತಿರಲಿಲ್ಲ

ಒಂದೊಮ್ಮೆ ನೆಟ್ ಪ್ರ್ಯಾಕ್ಟೀಸ್ ಸಂದರ್ಭದಲ್ಲಿ ಎಂಎಸ್ ಧೋನಿ ಉಳಿದ ಎಲ್ಲಾ ಬೌಲರ್‌ಗಳ ಎಸೆತಗಳಿಗೂ ಸರಾಗವಾಗಿ ದೊಡ್ಡ ಹೊಡೆತಗಳನ್ನು ಹೊಡೆಯುತ್ತಿದ್ದರು. ಆದರೆ ವರುಣ್ ಚಕ್ರವರ್ತಿ ಎಸೆತಗಳಿಗೆ ದೊಡ್ಡ ಹೊಡೆತಗಳನ್ನು ಬಾರಿಸುತ್ತಿರಲಿಲ್ಲ. ಹಾಗೂ ಹಲವಾರು ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ ಮಹೇಂದ್ರ ಸಿಂಗ್ ಧೋನಿ ವಿಕೆಟ್‌ನ್ನು ಪಡೆದುಕೊಂಡಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಯಾವ ಹಂತದಲ್ಲಿ ಬೇಕಾದರೂ ಬೌಲಿಂಗ್ ಮಾಡಬಲ್ಲ

ಯಾವ ಹಂತದಲ್ಲಿ ಬೇಕಾದರೂ ಬೌಲಿಂಗ್ ಮಾಡಬಲ್ಲ

ವರುಣ್ ಚಕ್ರವರ್ತಿಯನ್ನು ಯಾವ ಹಂತದಲ್ಲಿ ಬೇಕಾದರೂ ಬೌಲಿಂಗ್ ಮಾಡಲು ಕಳುಹಿಸಬಹುದು. ಪಂದ್ಯದ ಆರಂಭವಿರಲಿ, ಪವರ್ ಪ್ಲೇ ಸಮಯವಾಗಿರಲಿ ಅಥವಾ ಡೆತ್ ಓವರ್‌ಗಳಾಗಿರಲಿ ವರುಣ್ ಚಕ್ರವರ್ತಿ ಈ ಎಲ್ಲಾ ಹಂತಗಳಲ್ಲಿಯೂ ಬೌಲಿಂಗ್ ಮಾಡಬಲ್ಲ ಪ್ರತಿಭಾವಂತ ಬೌಲರ್ ಎಂದು ಹರ್ಭಜನ್ ಸಿಂಗ್ ಕೊಂಡಾಡಿದ್ದಾರೆ.

Rahul Chahar ಈ ರೀತಿ ನಡೆದುಕೊಂಡಿದ್ದೇಕೆ | Oneindia Kannada
ಟಿ ಟ್ವೆಂಟಿ ವಿಶ್ವಕಪ್ ಆಡುವ ಎಲ್ಲಾ ಅರ್ಹತೆ ಆತನಿಗಿದೆ

ಟಿ ಟ್ವೆಂಟಿ ವಿಶ್ವಕಪ್ ಆಡುವ ಎಲ್ಲಾ ಅರ್ಹತೆ ಆತನಿಗಿದೆ

ವರುಣ್ ಚಕ್ರವರ್ತಿ ವಿಕೆಟ್ ತೆಗೆಯಬಲ್ಲ, ರನ್ ಕೊಡದೆ ಉತ್ತಮ ಬೌಲಿಂಗ್ ಮಾಡಬಲ್ಲ, ಹೆಚ್ಚಾಗಿ ವಿಶ್ವಕಪ್‌ನಲ್ಲಿ ತಂಡವನ್ನು ಪ್ರತಿನಿಧಿಸುವಂತಹ ಆಟಗಾರನಿಗೆ ಇರಬೇಕಾದ ಎಲ್ಲ ಅರ್ಹತೆಗಳು ವರುಣ್ ಚಕ್ರವರ್ತಿಗಿದೆ. ಹೀಗಾಗಿ ಆತನಿಗೆ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಆಡಲು ಅವಕಾಶ ನೀಡಬೇಕು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

Story first published: Thursday, September 30, 2021, 18:51 [IST]
Other articles published on Sep 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X