ದ್ರಾವಿಡ್‌ಗಿಂತ ನೆಹ್ರಾ ರೀತಿಯ ವ್ಯಕ್ತಿಗಳು ಟಿ20 ತಂಡಕ್ಕೆ ಕೋಚ್ ಆಗಿ ಹೆಚ್ಚು ಸೂಕ್ತ: ಹರ್ಭಜನ್ ಸಿಂಗ್

ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ತಂಡದ ವಿಚಾರವಾಗಿ ಇನ್ನೂ ಚರ್ಚೆಗಳು ನಡೆಯುತ್ತಲೇ ಇದೆ. ಆಟಗಾರರ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗಿದ್ದು ಇದೀಗ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಟೀಮ್ ಇಂಡಿಯಾ ಕೋಚ್ ಸ್ಥಾನದ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರಂಥಾ ವ್ಯಕ್ತಿಗಳಿಗಿಂತ ಟಿ20 ಮಾದರಿಗೆ ನೆಹ್ರಾ ರೀತಿಯ ವ್ಯಕ್ತಿಗಳು ಹೆಚ್ಚು ಸೂಕ್ತವಾಗುತ್ತಾರೆ ಎಂದಿದ್ದಾರೆ ಹರ್ಭಜನ್ ಸಿಂಗ್.

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾದ ಗುಜರಾತ್ ಟೈಟನ್ಸ್ ತಂಡಕ್ಕೆ ಕೋಚ್ ಆಗಿ ನೇಮಕಗೊಂಡ ಆಶಿಶ್ ನೆಹ್ರಾ ಮೊದಲ ಅವೃತ್ತಿಯಲ್ಲಿಯೇ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

ವಿಭಿನ್ನ ಮಾದರಿಯಲ್ಲಿ ಮುಂದಿನ ಪುರುಷರ ಟಿ20 ವಿಶ್ವಕಪ್; ಅದರ ಸ್ವರೂಪ ಇಲ್ಲಿದೆವಿಭಿನ್ನ ಮಾದರಿಯಲ್ಲಿ ಮುಂದಿನ ಪುರುಷರ ಟಿ20 ವಿಶ್ವಕಪ್; ಅದರ ಸ್ವರೂಪ ಇಲ್ಲಿದೆ

"ಟಿ20 ಕ್ರಿಕೆಟ್‌ಗೆ ಇತ್ತೀಚೆಗೆ ನಿವೃತ್ತಿಯಾಗಿರುವ ಆಶಿಶ್ ನೆಹ್ರಾ ರೀತಿಯ ವ್ಯಕ್ತಿಗಳು ಹೆಚ್ಚು ಸೂಕ್ತವಾಗುತ್ತಾರೆ. ರಾಹುಲ್ ದ್ರಾವಿಡ್ ಅವರ ಮೇಲಿನ ಗೌರವದೊಂದಿಗೆ ಹೇಳುತ್ತಿದ್ದೇನೆ, ಈ ಮಾದರಿಯ ಬಗ್ಗೆ ಆಶಿಶ್ ನೆಹ್ರಾ ಅವರಿಗೆ ಹೆಚ್ಚು ಜ್ಞಾನವಿದೆ. ನಾವೆಲ್ಲಾ ಜೊತೆಯಾಗಿ ಬಹಳಷ್ಟು ವರ್ಷಗಳ ಕಾಲ ಆಡಿದ ಅನುಭವ ಹೊಂದಿದ್ದೇವೆ. ದ್ರಾವಿಡ್ ಅವರಿಗೆ ಅಪಾರ ಜ್ಞಾನವಿದೆ. ಆದರೆ ಟಿ20 ಕಠಿಣವಾದ ಮಾದರಿಯಾಗಿದೆ" ಎಂದಿದ್ದಾರೆ ಹರ್ಭಜನ್ ಸಿಂಗ್.

"ಟಿ20 ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಆಡಿರುವ ಆಟಗಾರರು ಕೋಚಿಂಗ್ ಸ್ಥಾನಕ್ಕೆ ಹೆಚ್ಚು ಸೂಕ್ತವಾಗುತ್ತಾರೆ. ರಾಹುಲ್ ದ್ರಾವಿಡ್ ಅವರನ್ನು ಟಿ20ಯಿಂದ ತೆಗೆಯಿರಿ ಎಂದು ನಾನು ಹೇಳುತ್ತಿಲ್ಲ. 2024ರ ಟಿ20 ವಿಶ್ವಕಪ್‌ಗೆ ರಾಹುಲ್ ದ್ರಾವಿಡ್ ಹಾಗೂ ಆಶಿಶ್ ನೆಹ್ರಾ ಜೊತೆಯಾಗಿ ಸೇರಿಕೊಂಡು ತಂಡವನ್ನು ಕಟ್ಟಬಹುದು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್.

IND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆIND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆ

ಇನ್ನು ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಭಿನ್ನ ಮಾದರಿಗೆ ಭಿನ್ನ ಆಟಗಾರರ ಬಳಗವನ್ನು ಬಳಸಿಕೊಳ್ಳುವ ವಿಚಾರವಾಗಿಯೂ ಮಾತನಾಡಿದ್ದಾರೆ. "ನನ್ನ ಪ್ರಕಾರ ಅದು ಉತ್ತಮ. ಅದು ಉಪಯುಕ್ತವಾಗಬಹುದು. ಟಿ20 ಕ್ರಿಕೆಟ್ ಆಡುವ ಶೈಲಿ ಬದಲಾಗಬೇಕು. ಮೊದಲ ಆರು ಓವರ್‌ಗಳು ಬಹಳ ಮುಖ್ಯವಾಗುತ್ತದೆ. ಅದು ಸಾಧ್ಯವಾಗದಿದ್ದರೆ ನೀವು ಸೂರ್ಯಕುಮಾರ್ ಅಥವಾ ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ 50 ರನ್‌ಗಳಿಸುವುದನ್ನು ನಿರೀಕ್ಷಿಸಬೇಕಾಗುತ್ತದೆ. ಅವರಿಂದ ಸಿಡಿಯಲು ಸಾಧ್ಯವಾಗದಿದ್ದರೆ ತಂಡ ಸವಾಲಿನ ಮೊತ್ತ ನಿಗದಿಪಡಿಸಲು ವಿಫಲವಾಗುತ್ತದೆ" ಎಂದಿದ್ದಾರೆ ಹರ್ಭಜನ್ ಸಿಂಗ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, November 24, 2022, 2:35 [IST]
Other articles published on Nov 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X