ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಪಿಚ್‌ನಲ್ಲಿ ಈ ಬೌಲರ್ ನಮಗೆ ಟ್ರಂಪ್ ಕಾರ್ಡ್‌ ಆಗಬಹುದು: ಹರ್ಭಜನ್ ಸಿಂಗ್

Harbhajan Singh Backs Fast Bowler Umran Malik For Indias T20 World Cup Squad

ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸೆಪ್ಟೆಂಬರ್ 12ರಂದು ಹಿರಿಯ ಆಯ್ಕೆದಾರರ ಸಮಿತಿ ಸಭೆ ನಡೆಯುತ್ತಿದ್ದು, ಶೀಘ್ರದಲ್ಲೇ ಭಾರತ ತಂಡದ ಆಟಗಾರರ ಪಟ್ಟಿ ಘೋಷಣೆಯಾಗಲಿದೆ.

ಟಿ20 ವಿಶ್ವಕಪ್‌ ತಂಡದಲ್ಲಿ ರಿಷಬ್‌ ಪಂತ್ ಯಾಕಿರಬೇಕು?: ಇಲ್ಲಿದೆ ಕಾರಣಟಿ20 ವಿಶ್ವಕಪ್‌ ತಂಡದಲ್ಲಿ ರಿಷಬ್‌ ಪಂತ್ ಯಾಕಿರಬೇಕು?: ಇಲ್ಲಿದೆ ಕಾರಣ

ಹಲವು ಹಿರಿಯ ಕ್ರಿಕೆಟಿಗರು, ತಜ್ಞರು ವಿಶ್ವಕಪ್‌ಗಾಗಿ ತಮ್ಮ ನೆಚ್ಚಿನ ಆಟಗಾರರ, ನೆಚ್ಚಿನ ತಂಡವನ್ನು ಹೆಸರಿಸುತ್ತಲೇ ಇದ್ದಾರೆ. ಈಗ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಯುವ ವೇಗಿ ಉಮ್ರಾನ್ ಮಲಿಕ್‌ರನ್ನು ಬೆಂಬಲಿಸಿದ್ದು, ಆತ ವಿಶ್ವಕಪ್ ತಂಡದಲ್ಲಿ ಇದ್ದರೆ ಉತ್ತಮ ಎಂದು ಹೇಳಿದ್ದಾರೆ. ಈ ಬಾರಿ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ, ಅಲ್ಲಿನ ವೇಗದ, ಬೌನ್ಸಿ ಪಿಚ್‌ಗಳಲ್ಲಿ ಉಮ್ರಾನ್ ಮಲಿಕ್ ಉತ್ತಮ ಪ್ರದರ್ಶನ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Harbhajan Singh Backs Fast Bowler Umran Malik For Indias T20 World Cup Squad

2022ರ ಐಪಿಎಲ್‌ ಪಂದ್ಯಾವಳಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದ್ದ ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್‌ನಿಂದ ಗಮನ ಸೆಳೆದಿದ್ದರು. ಜಮ್ಮು ಮತ್ತು ಕಾಶ್ಮೀರದ ವೇಗಿ 14 ಪಂದ್ಯಗಳಲ್ಲಿ ಐದು ವಿಕೆಟ್ ಗಳಿಕೆ ಸೇರಿದಂತೆ 22 ವಿಕೆಟ್‌ ಪಡೆದು ಮಿಂಚಿದ್ದರು. ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಪಾಕಿಸ್ತಾನಕ್ಕೆ ಸೋಲಿನ ಬೆನ್ನಲ್ಲೇ ಶೋಯೆಬ್ ಮಲಿಕ್ ನಿಗೂಢ ಟ್ವೀಟ್: ಕಿಡಿಕಾರಿದ ಪಾಕ್ ಅಭಿಮಾನಿಗಳುಪಾಕಿಸ್ತಾನಕ್ಕೆ ಸೋಲಿನ ಬೆನ್ನಲ್ಲೇ ಶೋಯೆಬ್ ಮಲಿಕ್ ನಿಗೂಢ ಟ್ವೀಟ್: ಕಿಡಿಕಾರಿದ ಪಾಕ್ ಅಭಿಮಾನಿಗಳು

ಉಮ್ರಾನ್ ಮಲಿಕ್ ಟ್ರಂಪ್ ಕಾರ್ಡ್ ಆಗಬಹುದು

ಏಷ್ಯಾ ಕಪ್ 2022 ರ ತಂಡದಿಂದ ಹೊರಗುಳಿದಿದ್ದ ಉಮ್ರಾನ್ ಮಲಿಕ್, ಬೌನ್ಸಿ ಆಸ್ಟ್ರೇಲಿಯನ್ ವಿಕೆಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಹರ್ಭಜನ್ ಭಾವಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ, "ಭಾರತದ ವಿಶ್ವಕಪ್ ತಂಡದಲ್ಲಿ ಇಂದು ಮಿಸ್ಟರ್ 150 ಉಮ್ರಾನ್ ಮಲಿಕ್ ಅವರನ್ನು ಯಾರು ನೋಡಲು ಬಯಸುತ್ತೀರಿ? ಆಸ್ಟ್ರೇಲಿಯಾದ ಆ ಬೌನ್ಸಿ ಪಿಚ್‌ಗಳಲ್ಲಿ ಉಮ್ರಾನ್ ಮಲಿಕ್ ನಮ್ಮ ಟ್ರಂಪ್ ಕಾರ್ಡ್ ಆಗಬಹುಹುದೇ. ?" ಎಂದು ಪ್ರಶ್ನಿಸಿದ್ದಾರೆ.

ಉಮ್ರಾನ್ ಇದುವರೆಗೆ ಮೂರು ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಎರಡು ವಿಕೆಟ್ ಪಡೆದಿದ್ದಾರೆ. ಬೌಲಿಂಗ್‌ನಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟರು, ಆತನ ವೇಗದ ಬೌಲಿಂಗ್‌ ಉಳಿದ ಬೌಲರ್ ಗಳಿಗಿಂತ ಆತನನ್ನು ಪ್ರತ್ಯೇಕಿಸುತ್ತದೆ.

Harbhajan Singh Backs Fast Bowler Umran Malik For Indias T20 World Cup Squad

ಉಮ್ರಾನ್ ಮಲಿಕ್‌ಗೆ ಆಕಾಶ ಚೋಪ್ರಾ ಬೆಂಬಲ

ಏಷ್ಯಾಕಪ್ ತಂಡದಿಂದ ಯುವ ವೇಗದ ಬೌಲರ್ ಕೈಬಿಟ್ಟಿರುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿರುವ ಆಕಾಶ್ ಚೋಪ್ರಾ, ಉಮ್ರಾನ್ ಮಲಿಕ್‌ರನ್ನು ಭಾರತ ತಂಡದಲ್ಲಿ ಅಕಾಲಿಕವಾಗಿ ಆಯ್ಕೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಉಮ್ರಾನ್ ಮಲಿಕ್ ಒಂದೆರಡು ಪಂದ್ಯಗಳನ್ನು ಆಡಿದ ಮತ್ತು ನಂತರ ಆತನನ್ನು ತಂಡದಿಂದ ಕೈಬಿಡಲಾಯಿತು. ಆದರೆ ನನಗೆ ಆತನ ಸಾಮರ್ಥ್ಯದ ಮೇಲೆ ನಂಬಿಕೆ ಇದೆ, ಆತನಿಗೆ ಇನ್ನು ಅವಕಾಶ ನೀಡಬೇಕಾಗಿತ್ತು ಇಲ್ಲವೆಂದರೆ ಆತನನ್ನು ಆಗಲೆ ತಂಡಕ್ಕೆ ಆಯ್ಕೆ ಮಾಡಬಾರದಿತ್ತು" ಎಂದು ಹೇಳಿದ್ದಾರೆ.

Story first published: Monday, September 12, 2022, 17:34 [IST]
Other articles published on Sep 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X