ನಾನು ಕಂಡ ಅತ್ಯಂತ ಕಠಿಣ ಬ್ಯಾಟ್ಸ್‌ಮನ್: ಭಾರತೀಯ ದಿಗ್ಗಜನ ಬಗ್ಗೆ ಕ್ಲಾರ್ಕ್ ಮಾತು

ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ವಿಶ್ವ ಕ್ರಿಕೆಟ್‌ನ ಕಠಿಣ ಆಟಗಾರ ಯಾರು ಎಂಬ ವಿಚಾರವನ್ನು ಹೇಳಿದ್ದಾರೆ. ರೇಡಿಯೋ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕ್ಲಾರ್ಕ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಅಚ್ಚರಿಯೇನೆಂದರೆ ಕ್ಲಾರ್ಕ್ ಆಡಿದ ಆಸ್ಟ್ರೇಲಿಯಾ ತಂಡದಲ್ಲಿ ರಿಕಿ ಪಾಂಟಿಂಗ್, ಹೇಡನ್, ಗಿಲ್‌ಕ್ರಿಸ್ಟ್‌ರಂತಾ ಆಟಗಾರರಿದ್ದರೂ ಆ ಯಾವ ಯಾಟಗಾರನ ಹೆಸರನ್ನೂ ಕ್ಲಾರ್ಕ್ ತೆಗೆದುಕೊಂಡಿಲ್ಲ.ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್, ಲಾರಾ, ಸಂಗಕ್ಕರ, ದ್ರಾವಿಡ್ ಜ್ಯಾಕ್ ಕ್ಯಾಲೀಸ್ ರಂತಾ ಬಲಾಢ್ಯ ಆಟಗಾರರಲ್ಲಿ ಕ್ಲಾರ್ಕ್ ಆಯ್ದುಕೊಂಡಿದ್ದು ಭಾರತೀಯ ದಿಗ್ಗಜ ಆಟಗಾರನ ಹೆಸರನ್ನು.

ಹಾಗಾದರೆ ಕ್ಲಾರ್ಕ್ ಪ್ರಕಾರ ವಿಶ್ವದ ಬಲಿಷ್ಠ ಬ್ಯಾಟ್ಸ್‌ಮನ್ ಯಾರು ಎಂಬುದನ್ನು ಮುಂದೆ ಓದಿ..

ಆತನನ್ನು ಔಟ್ ಮಾಡುವುದು ಕಠಿಣ

ಆತನನ್ನು ಔಟ್ ಮಾಡುವುದು ಕಠಿಣ

ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ತಾನು ಎದುರಿಸಿದ ಅತ್ಯಂತ ಕಠಿಣ ಆಟಗಾರ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆತನನ್ನು ಔಟ್ ಮಾಡುವುದು ಅತ್ಯಂತ ಕಠಿಣ ಎಂದು 2015ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಹೇಳಿದ್ದು ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬಗ್ಗೆ. ಸಚಿನ್ ತಂಡುಲ್ಕರ್ ಅವರನ್ನು ಔಟ್ ಮಾಡುವುದು ಅತ್ಯಂತ ಪ್ರಯಾಸದ ವಿಷಯ ಎಂದಿದ್ದಾರೆ ಮೈಕಲ್ ಕ್ಲಾರ್ಕ್.

ತಾಂತ್ರಿಕವಾಗಿ ಬಲಿಷ್ಠ

ತಾಂತ್ರಿಕವಾಗಿ ಬಲಿಷ್ಠ

'ನಾನು ಕಂಡಂತೆ ಸಚಿನ್ ತೆಂಡೂಲ್ಕರ್ ತಾಂತ್ರಿಕವಾಗಿ ಸಾಕಷ್ಟು ಬಲಿಷ್ಟವಾಗಿದ್ದ ಆಟಗಾರ. ಆತನನ್ನು ಔಟ್ ಮಾಡುವುದು ಸುಲಭವಲ್ಲ. ತಾಂತ್ರಿಕವಾಗಿ ಸಚಿನ್ ತೆಂಡೂಲ್ಕರ್ ಯಾವುದೇ ದೋಷಗಳನ್ನು ಹೊಂದಿರಲಿಲ್ಲ' ಎಂದು ಮೈಕಲ್ ಕ್ಲಾರ್ಕ್ ಸಚಿನ್ ತೆಂಡೂಲ್ಕರ್ ಬಗ್ಗೆ ಮಾತುಗಳನ್ನಾಡಿದ್ದಾರೆ.

.

ಪ್ರಸಕ್ತ ಬೆಸ್ಟ್ ಬ್ಯಾಟ್ಸ್‌ಮನ್ ಕೊಹ್ಲಿ

ಪ್ರಸಕ್ತ ಬೆಸ್ಟ್ ಬ್ಯಾಟ್ಸ್‌ಮನ್ ಕೊಹ್ಲಿ

ಇದೇ ಸಂದರ್ಭದಲ್ಲಿ ಪ್ರಸಕ್ತ ಕಾಲದಲ್ಲಿ ಯಾರು ಬೆಸ್ಟ್ ಬ್ಯಾಟ್ಸ್‌ಮನ್ ಎಂಬ ಪ್ರಶ್ನೆಗೂ ಕ್ಲಾರ್ಕ್ ಉತ್ತರವನ್ನು ನೀಡಿದ್ದು, ಅದಕ್ಕೂ ಭಾರತೀಯನನ್ನೇ ಆಯ್ಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಪ್ರಸಕ್ತ ಬಲಿಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ. ಎಲ್ಲಾ ಮಾದರಿಗಳಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಕ್ಲಾರ್ಕ್ ಹೇಳಿದ್ದಾರೆ.

ಸಚಿನ್ ಕೊಹ್ಲಿಯ ಸಾಮ್ಯತೆ

ಸಚಿನ್ ಕೊಹ್ಲಿಯ ಸಾಮ್ಯತೆ

ಸಚಿನ್ ಮತ್ತು ಕೊಹ್ಲಿ ಮಧ್ಯೆಯ ಸಾಮ್ಯತೆಯನ್ನೂ ಕ್ಲಾರ್ಕ್ ತಿಳಿಸಿದ್ದಾರೆ. ಇಬ್ಬರೂ ಆಟಗಾರರು ದೊಡ್ಡ ಶತಕಗಳನ್ನು ಬಾರಿಸಲು ಇಷ್ಟಪಡುತ್ತಾರೆ ಎಂದು ಕ್ಲಾರ್ಕ್ ಹೇಳಿದ್ದಾರೆ. ಬಿಗ್‌ಸ್ಪೋರ್ಟ್ಸ್ ಪ್ರೇಕ್‌ಫಾಸ್ಟ್‌ ಶೋ ಎಂಬ ರೇಡಿಯೋ ಕಾರ್ಯಕ್ರಮದಲ್ಲಿ ಕ್ಲಾರ್ಕ್ ಭಾಗವಹಿಸಿ ಈ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ

For Quick Alerts
ALLOW NOTIFICATIONS
For Daily Alerts
Story first published: Friday, April 10, 2020, 17:33 [IST]
Other articles published on Apr 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X