ಆತ ಭಾರತ ಟಿ20 ತಂಡದ ನಾಯಕನಾದರೆ ನನಗೆ ಖುಷಿಯಾಗುತ್ತದೆ ಎಂದ ರಶೀದ್ ಖಾನ್

ರೋಹಿತ್ ಶರ್ಮಾ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ರೋಹಿತ್ ಶರ್ಮಾ ಬಳಿಕ ಭಾರತ ಟಿ20 ತಂಡಕ್ಕೆ ಹೊಸಬರನ್ನು ಖಾಯಂ ನಾಯಕರನ್ನಾಗಿ ನೇಮಿಸಲಾಗುತ್ತದೆ.

ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈಗಾಗಲೇ ಭಾರತ ತಂಡವನ್ನು ಯಶಸ್ವಿಯಾಗಿ ಮನ್ನಡೆಸಿರುವುದರಿಂದ ಅವರೇ ಟಿ20 ತಂಡಕ್ಕೆ ಖಾಯಂ ನಾಯಕ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಬಿಸಿಸಿಐ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.

ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್, ಭಾರತ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ಖಾಯಂ ನಾಯಕನಾದರೆ ನನಗೆ ತುಂಬಾ ಖುಷಿಯಾಗುತ್ತದೆ ಎಂದು ಹೇಳುವ ಮೂಲಕ, ಪಾಂಡ್ಯಗೆ ನಾಯಕತ್ವ ನೀಡುವ ವಿಚಾರಕ್ಕೆ ಬೆಂಬಲಿಸಿದ್ದಾರೆ.

IPL 2023: ಬೆನ್‌ ಸ್ಟೋಕ್ಸ್, ಸ್ಯಾಮ್ ಕರನ್ ಮೂಲ ಬೆಲೆ 2 ಕೋಟಿ ರುಪಾಯಿ, ಪಟ್ಟಿಯಲ್ಲಿ ಇರುವ ಇತರೆ ಕ್ರಿಕೆಟಿಗರು ಇವರುIPL 2023: ಬೆನ್‌ ಸ್ಟೋಕ್ಸ್, ಸ್ಯಾಮ್ ಕರನ್ ಮೂಲ ಬೆಲೆ 2 ಕೋಟಿ ರುಪಾಯಿ, ಪಟ್ಟಿಯಲ್ಲಿ ಇರುವ ಇತರೆ ಕ್ರಿಕೆಟಿಗರು ಇವರು

ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದು, ರಶೀದ್ ಖಾನ್ ಅವರ ನಾಯಕತ್ವದ ಅಡಿಯಲ್ಲಿ ಆಡಿದ್ದಾರೆ. ಗುಜರಾತ್ ಟೈಟಾನ್ಸ್ ಐಪಿಎಲ್‌ ಆಡಿದ ಮೊದಲ ಆವೃತ್ತಿಯಲ್ಲೇ ಪಾಂಡ್ಯ ನಾಯಕತ್ವದಲ್ಲಿ ಚಾಂಪಿಯನ್ ಆಗಿದೆ.

ಟೀಂ ಇಂಡಿಯಾದ ಟಿ20 ನಾಯಕನಾಗಿ ರೋಹಿತ್‌ ಶರ್ಮಾರಿಂದ ಅಧಿಕಾರ ವಹಿಸಿಕೊಳ್ಳಲು ಹಾರ್ದಿಕ್ ಪಾಂಡ್ಯ ಉತ್ತಮವಾದ ಆಯ್ಕೆಯಾಗಿದ್ದಾರೆ ಎಂದು ರಶೀದ್ ಖಾನ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಅತ್ಯುತ್ತಮ ನಾಯಕ

ಹಾರ್ದಿಕ್ ಪಾಂಡ್ಯ ಅತ್ಯುತ್ತಮ ನಾಯಕ

ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಮಾತನಾಡಿರುವ ರಶೀದ್ ಖಾನ್ "ಪಾಂಡ್ಯ ಅದ್ಭುತ ಆಟಗಾರ. ಅವರು ರಾಷ್ಟ್ರೀಯ ತಂಡದ ನಾಯಕರಾಗಲು ಅರ್ಹರು ಎಂದು ನಾನು ಭಾವಿಸುತ್ತೇನೆ. ಅವರ ನಾಯಕತ್ವದ ತಂಡದಲ್ಲಿ ಆಡಿದ್ದೇನೆ. ಅವರನ್ನು ಭಾರತ ಟಿ20 ತಂಡದ ಖಾಯಂ ನಾಯಕನನ್ನಾಗಿ ಮಾಡಿದರೆ ನನಗೆ ಹೆಚ್ಚು ಸಂತೋಷವಾಗುತ್ತದೆ. ಆಟಗಾರರನ್ನು ನಿರ್ವಹಿಸುವುದು ಕಷ್ಟ ಮತ್ತು ಅವರು ಅದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಐಪಿಎಲ್‌ನಲ್ಲಿ ತಮ್ಮ ಕೆಲಸವನ್ನು ಅದ್ಭುತವಾಗಿ ಮಾಡಿದ್ದಾರೆ." ಎಂದು ಹೇಳಿದ್ದಾರೆ.

"ಅವರಿಗೆ ಅವಕಾಶ ಸಿಕ್ಕರೆ ನಾನು ಹೆಚ್ಚು ಸಂತೋಷಪಡುತ್ತೇನೆ. 2023ರ ಐಪಿಎಲ್‌ನಲ್ಲಿ ಮತ್ತೆ ಗುಜರಾತ್ ಟೈಟಾನ್ಸ್‌ನ ಭಾಗವಾಗಲು ಮತ್ತು ಅವರ ನಾಯಕತ್ವದಲ್ಲಿ ಆಡಲು ಕಾಯುತ್ತಿದ್ದೇನೆ." ಎಂದು ಹೇಳಿದ್ದಾರೆ.

ನಾಯಕನಾಗಿ ಯಶಸ್ಸು ಕಂಡ ಪಾಂಡ್ಯ

ನಾಯಕನಾಗಿ ಯಶಸ್ಸು ಕಂಡ ಪಾಂಡ್ಯ

ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕನಾಗಿ ಕೂಡ ಯಶಸ್ಸು ಕಂಡಿದ್ದಾರೆ. 2022ರಲ್ಲಿ ಭಾರತ ಐರ್ಲೆಂಡ್ ಪ್ರವಾಸ ಮಾಡಿದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಭಾರತ ಟ20 ತಂಡದ ನಾಯಕನಾಗಿದ್ದರು. ಅವರ ನಾಯಕತ್ವದಲ್ಲಿ ಭಾರತ ಐರ್ಲೆಂಡ್ ವಿರುದ್ಧದ ಸರಣಿಯನ್ನು ಗೆದ್ದುಕೊಂಡಿತು.

ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಈ ಗೆಲುವಿನ ನಂತರ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯರನ್ನೇ ನಾಯಕರನ್ನಾಗಿ ಮುಂದುವರೆಸುವಂತೆ ಹಲವು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದರು.

2024ರ ಟಿ20 ವಿಶ್ವಕಪ್‌ಗೆ ಸಿದ್ಧತೆ

2024ರ ಟಿ20 ವಿಶ್ವಕಪ್‌ಗೆ ಸಿದ್ಧತೆ

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ ಬಳಿಕ ಬಿಸಿಸಿಐ ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. 2024ರ ಟಿ20 ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡಲು ನಿರ್ಧರಿಸಿದೆ.

2023ರಲ್ಲಿ ಏಕದಿನ ವಿಶ್ವಕಪ್ ಇರುವುದರಿಂದ ರೋಹಿತ್ ಶರ್ಮಾಗೆ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಕೇಳಿಕೊಂಡು, ಟಿ20 ಮಾದರಿಗೆ ಹಾರ್ದಿಕ್ ಪಾಂಡ್ಯರನ್ನು ಅಧಿಕೃತ ನಾಯಕನಾಗಿ ಘೋಷಣೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಬಿಸಿಸಿಐ ಸದ್ಯ ಆಯ್ಕೆದಾರರ ಸಮಿತಿಗಾಗಿ ಅರ್ಜಿ ಆಹ್ವಾನಿಸಿದ್ದು, ನೂತನ ಆಯ್ಕೆ ಸಮಿತಿ ಡಿಸೆಂಬರ್ ಮಧ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಭಾರತ 2023ರ ಆರಂಭದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದ್ದು, ಅದಕ್ಕೆ ತಂಡವನ್ನು ಘೋಷಣೆ ಮಾಡುವ ಸಂದರ್ಭದಲ್ಲಿ ಈ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

For Quick Alerts
ALLOW NOTIFICATIONS
For Daily Alerts
Story first published: Friday, December 2, 2022, 2:30 [IST]
Other articles published on Dec 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X