ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ 2021ರ ವೇಳಾಪಟ್ಟಿ ಪ್ರಕಟ; ಭಾರತ vs ಪಾಕ್ ಪಂದ್ಯ ಯಾವಾಗ ಗೊತ್ತಾ?

Mohammed Shami ವಿಶೇಷ ದಾಖಲೆ ನೋಡಿ ಬೆರಗಾದ ಕ್ರೀಡಾಭಿಮಾನಿಗಳು | Oneindia Kannada

ಭಾರತದಲ್ಲಿ ನಡೆಯಬೇಕಾಗಿದ್ದ ಟಿ ಟ್ವೆಂಟಿ ವಿಶ್ವಕಪ್ 2021ನ್ನು ಕೊರೊನಾ ವೈರಸ್ ಕಾರಣದಿಂದಾಗಿ ಯುಎಇ ಈಕೆ ಸ್ಥಳಾಂತರಿಸಲಾಗಿದೆ. ಹೀಗೆ ಸ್ಥಳಾಂತರಿಸಲಾಗಿರುವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಯುಎಇಯಲ್ಲಿ ಅಕ್ಟೋಬರ್ 17ರಂದು ಆರಂಭವಾಗಿ ನವೆಂಬರ್ 14 ರಂದು ಕೊನೆಗೊಳ್ಳಲಿದೆ.

ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ನಲ್ಲಿ 39 ವರ್ಷಗಳಿಂದ ಯಾರೂ ಮುಟ್ಟದ ದಾಖಲೆಯನ್ನು ಮಾಡಿದ ಸಿರಾಜ್!ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ನಲ್ಲಿ 39 ವರ್ಷಗಳಿಂದ ಯಾರೂ ಮುಟ್ಟದ ದಾಖಲೆಯನ್ನು ಮಾಡಿದ ಸಿರಾಜ್!

ಈ ಬಾರಿಯ ವಿಶ್ವಕಪ್ ಟೂರ್ನಿಯ ಆಡುವ ತಂಡಗಳು, ಪಂದ್ಯಗಳ ಮಾಹಿತಿ, ವೇಳಾಪಟ್ಟಿ ಮತ್ತು ಪಂದ್ಯಗಳು ನಡೆಯುವ ಸ್ಥಳವನ್ನು ಆಗಸ್ಟ್ 17ರ ಮಂಗಳವಾರದಂದು ಐಸಿಸಿ ಪ್ರಕಟಿಸಿದ್ದು, ಈ ಪಂದ್ಯಗಳ ಮಾಹಿತಿ ಮತ್ತು ವೇಳಾಪಟ್ಟಿ ಈ ಕೆಳಕಂಡಂತಿವೆ ನೋಡಿ..

ಅಕ್ಟೋಬರ್ 17ರಂದು ಆರಂಭವಾಗಲಿರುವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ರೌಂಡ್ ಒಂದರ ಪಂದ್ಯ ಒಮನ್ ಮತ್ತು ಪಿಎನ್‌ಜಿ ತಂಡಗಳ ನಡುವೆ ನಡೆಯಲಿದೆ. ಈ ರೌಂಡ್ 1 ಸುತ್ತಿನಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಅಡಿಯಲ್ಲಿ ತಲಾ 4 ತಂಡಗಳು ಸೆಣಸಾಡಲಿದ್ದು, ರೌಂಡ್ 1ನ ಗ್ರೂಪ್ ಎ ಮತ್ತು ಗ್ರೂಪ್ ಬಿ ತಂಡಗಳಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದ ತಂಡಗಳಿಗೆ ಸೂಪರ್ 12 ಸುತ್ತಿನಲ್ಲಿ ಜಾಗ ಸಿಗಲಿದೆ.

ತುಟಿ ಮೇಲೆ ಬೆರಳಿಟ್ಟು ಸಂಭ್ರಮಿಸುವುದು ಯಾರ ವಿರುದ್ಧ ಎಂಬುದನ್ನು ಬಹಿರಂಗಪಡಿಸಿದ ಸಿರಾಜ್ತುಟಿ ಮೇಲೆ ಬೆರಳಿಟ್ಟು ಸಂಭ್ರಮಿಸುವುದು ಯಾರ ವಿರುದ್ಧ ಎಂಬುದನ್ನು ಬಹಿರಂಗಪಡಿಸಿದ ಸಿರಾಜ್

ಹೀಗೆ ರೌಂಡ್ 1 ಹಣಾಹಣಿಗಳು ಮುಗಿದ ನಂತರ ಅಕ್ಟೋಬರ್ 23ರಂದು ಸೂಪರ್ 12 ಗುಂಪುಗಳ ಹಣಾಹಣಿ ಆರಂಭವಾಗಲಿದ್ದು ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಡಲಿವೆ. ಈ ಬಾರಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 12ನ ಗ್ರೂಪ್ ಬಿಯಲ್ಲಿ ಸ್ಥಾನಗಳನ್ನು ಪಡೆದುಕೊಂಡಿದ್ದು ಅಕ್ಟೋಬರ್ 24ರಂದು ಸೆಣಸಾಡಲಿವೆ.

ರೌಂಡ್ 1 ( ಅರ್ಹತಾ ಸುತ್ತಿನಲ್ಲಿರುವ ತಂಡಗಳು )

ರೌಂಡ್ 1 ( ಅರ್ಹತಾ ಸುತ್ತಿನಲ್ಲಿರುವ ತಂಡಗಳು )

ಟೂರ್ನಿಯ ಆರಂಭದ ಮೊದಲ 6 ದಿನಗಳ ಕಾಲ ಈ ರೌಂಡ್ 1 ಗ್ರೂಪ್ ಎ ಮತ್ತು ಗ್ರೂಪ್ ಬಿ ತಂಡಗಳ ನಡುವೆ ಹಣಾಹಣಿ ನಡೆಯಲಿದ್ದು ಎರಡೂ ಗುಂಪಿನಲ್ಲಿ ಟಾಪ್ 2 ಸ್ಥಾನ ಪಡೆದುಕೊಳ್ಳಲಿರುವ ತಂಡಗಳು ಸೂಪರ್ 12 ಸುತ್ತಿಗೆ ಪ್ರವೇಶಿಸಲಿವೆ.

ಗ್ರೂಪ್ ಎ: ಐರ್ಲೆಂಡ್, ನೆದರ್ಲೆಂಡ್, ಶ್ರೀಲಂಕಾ ಮತ್ತು ನಮೀಬಿಯಾ

ಗ್ರೂಪ್ ಬಿ: ಒಮನ್, ಪಪುವಾ ನ್ಯೂ ಜಿನಿಯಾ, ಬಾಂಗ್ಲಾದೇಶ ಮತ್ತು ಸ್ಕಾಟ್ ಲ್ಯಾಂಡ್.

ಭಾರತ ತಂಡದ ಹಣಾಹಣಿಗಳು

ಭಾರತ ತಂಡದ ಹಣಾಹಣಿಗಳು

ಸೂಪರ್ 12 ಗ್ರೂಪ್ 2ರಲ್ಲಿ ಸ್ಥಾನ ಪಡೆದುಕೊಂಡಿರುವ ಟೀಮ್ ಇಂಡಿಯಾ ಈ ಪರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 24ರಂದು ಸಂಜೆ 6 ಗಂಟೆಗೆ ದುಬೈನಲ್ಲಿ ಸೆಣಸಾಡಲಿದೆ.

ಭಾರತದ ಪಂದ್ಯಗಳು:

* ಭಾರತ vs ಪಾಕಿಸ್ತಾನ - ಅಕ್ಟೋಬರ್ 24, ದುಬೈನಲ್ಲಿ ಸಂಜೆ 6 ಗಂಟೆಗೆ

* ಭಾರತ vs ನ್ಯೂಜಿಲೆಂಡ್‌ - ಅಕ್ಟೋಬರ್ 31, ದುಬೈನಲ್ಲಿ ಸಂಜೆ 6 ಗಂಟೆಗೆ

* ಭಾರತ vs ಅಫ್ಘಾನಿಸ್ತಾನ - ನವೆಂಬರ್‌ 3, ಅಬುಧಾಬಿಯಲ್ಲಿ ಸಂಜೆ 6 ಗಂಟೆಗೆ

* ಭಾರತ vs ಅರ್ಹತಾ ಸುತ್ತಿನ ಬಿ ಗುಂಪಿನ ಟಾಪ್ 1 ತಂಡ - ನವೆಂಬರ್‌ 5, ದುಬೈನಲ್ಲಿ ಸಂಜೆ 6 ಗಂಟೆಗೆ

* ಭಾರತ vs ಅರ್ಹತಾ ಸುತ್ತಿನ ಎ ಗುಂಪಿನ ಟಾಪ್ 2 ತಂಡ - ನವೆಂಬರ್‌ 8, ದುಬೈನಲ್ಲಿ ಸಂಜೆ 6 ಗಂಟೆಗೆ

ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು

ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಸುತ್ತಿನ 2 ಪಂದ್ಯಗಳು ಪ್ರತ್ಯೇಕ ದಿನಗಳಂದು ನಡೆಯಲಿವೆ. ಮೊದಲನೇ ಸೆಮಿಫೈನಲ್ ಪಂದ್ಯ ಅಬುಧಾಬಿಯಲ್ಲಿ ನವೆಂಬರ್‌ 10ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಹಾಗೂ ಎರಡನೇ ಸೆಮಿಫೈನಲ್ ಪಂದ್ಯ ನವೆಂಬರ್‌ 11ರಂದು ಸಂಜೆ 6 ಗಂಟೆಗೆ ದುಬೈನಲ್ಲಿ ನಡೆಯಲಿದೆ.

ಇನ್ನು ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ 2021ರ ಫೈನಲ್ ಪಂದ್ಯ ನವೆಂಬರ್ 14ರ ಭಾನುವಾರದಂದು ಸಂಜೆ 6 ಗಂಟೆಗೆ ದುಬೈನಲ್ಲಿ ನಡೆಯಲಿದೆ ಮತ್ತು ನವೆಂಬರ್‌ 15ರ ಸೋಮವಾರವನ್ನು ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನಾಗಿ ಇಡಲಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 17, 2021, 11:40 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X