ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ನಂಬರ್ 1 ಟಿ20 ಬೌಲರ್‌ ಆಗಿ ಹೊರಹೊಮ್ಮಿದ ವನಿಂದು ಹಸರಂಗ: ಭಾರತದ ಅರ್ಷ್‌ದೀಪ್, ಅಶ್ವಿನ್ ರ್ಯಾಂಕಿಂಗ್ ಏರಿಕೆ

wanindu hasaranga and ashwin

ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ನಂಬರ್ 1 ಟಿ20 ಅಂತರಾಷ್ಟ್ರೀಯ ಬೌಲರ್‌ ಆಗಿ ಮರಳಿ ಅಗ್ರಸ್ಥಾನಕ್ಕೇರಿದ್ದಾರೆ. ಐಸಿಸಿ ಪುರುಷರ ಟಿ20 ಅಂತರಾಷ್ಟ್ರೀಯ ಆಟಗಾರರ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ನಂಬರ್ 1 ಪಟ್ಟದಲ್ಲಿದ್ದು, ವಹಿಂದು ಹಸರಂಗ ನಂಬರ್ 1 ಬೌಲರ್‌ ಆಗಿ ಹಿಂದಿರುಗಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2022ರ ಅಂತಿಮ ಸೂಪರ್ 12 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹಸರಂಗ 23 ರನ್ ನೀಡಿ 2 ವಿಕೆಟ್ ಕಬಳಿಸಿದ್ದು, ಒಟ್ಟು 5 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಅಫ್ಘಾನಿಸ್ತಾನ ಮಿಸ್ಟರಿ ಸ್ಪಿನ್ನರ್ ರಶೀದ್ ಖಾನ್‌ರನ್ನು ಹಿಂದಿಕ್ಕಿದ್ದಾರೆ.

ಯುಎಇ ಮತ್ತು ಒಮನ್‌ನಲ್ಲಿ ನಡೆದ ಕಳೆದ ಟಿ20 ವಿಶ್ವಕಪ್‌ನಲ್ಲಿ ವನಿಂದು ಹಸರಂಗ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ ಆಗಿ ಗುರುತಿಸಿಕೊಂಡಿದ್ದರು.

ನಂಬರ್ 1 ಟಿ20 ಬ್ಯಾಟರ್‌ ಆಗಿರುವ ಸೂರ್ಯಕುಮಾರ್ ಯಾದವ್

ನಂಬರ್ 1 ಟಿ20 ಬ್ಯಾಟರ್‌ ಆಗಿರುವ ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ 225 ರನ್ ಕಲೆಹಾಕಿದ್ದಾರೆ. ಬಾಂಗ್ಲಾದೇಶ ವಿರುದ್ಧ 30 ರನ್ ಕಲೆಹಾಕಿದ್ದ ಸೂರ್ಯ, ಜಿಂಬಾಬ್ವೆ ವಿರುದ್ಧ 25 ಎಸೆತಗಳಲ್ಲಿ 61 ರನ್ ಸಿಡಿಸಿದ್ದರು. ಈ ಮೂಲಕ 6 ಪಾಯಿಂಟ್ಸ್‌ ಏರಿಕೆಗೊಂಡು ತನ್ನ ವೃತ್ತಿಜೀವನದ ಬೆಸ್ಟ್‌ 869 ಪಾಯಿಂಟ್ಸ್ ಕಲೆಹಾಕಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ಗಿಂತ 39 ಪಾಯಿಂಟ್ಸ್‌ ಹೆಚ್ಚು ಗಳಿಸಿದ್ದಾರೆ. ಸೂರ್ಯಕುಮಾರ್‌ಗಿಂತ 90 ಪಾಯಿಂಟ್ಸ್‌ ಕಡಿಮೆ ಇರುವ ನ್ಯೂಜಿಲೆಂಡ್ ಓಪನರ್ ಡೆವೊನ್ ಕಾನ್ವೆ ಮೂರನೇ ಸ್ಥಾನದಲ್ಲಿದ್ದು, ಈತನಿಗಿಂತ 7 ಪಾಯಿಂಟ್ಸ್ ಕಡಿಮೆ ಇರುವ ಪಾಕ್ ತಂಡದ ನಾಯಕ ಬಾಬರ್ ಅಜಮ್ 4ನೇ ಸ್ಥಾನ ಪಡೆದಿದ್ದಾರೆ.

ಆತ ಪಾಕಿಸ್ತಾನದ ವಿರಾಟ್ ಕೊಹ್ಲಿ! ಆತ ಆಡಿದರೆ ಮಾತ್ರ ಪಾಕಿಸ್ತಾನ ಗೆಲ್ಲಲಿದೆ ಎಂದ ರಿಕಿ ಪಾಂಟಿಂಗ್

ಟಾಪ್ 10 ಬೌಲರ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಹೇಜಲ್‌ವುಡ್‌, ಜಂಪಾ

ಟಾಪ್ 10 ಬೌಲರ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಹೇಜಲ್‌ವುಡ್‌, ಜಂಪಾ

ಅಪ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ತಲಾ 2 ವಿಕೆಟ್ ಪಡೆದ ಆಸ್ಟ್ರೇಲಿಯಾದ ಬೌಲರ್ಸ್ ಜೋಶ್ ಹೇಜಲ್‌ವುಡ್ ಮತ್ತು ಆ್ಯಡಂ ಜಂಪಾ ಟಾಪ್ 10 ರ್ಯಾಂಕಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೇಜಲ್‌ವುಡ್ ಒಂದು ಸ್ಥಾನ ಏರಿಕೆಗೊಂಡು 3ನೇ ರ್ಯಾಂಕಿಂಗ್ ಪಡೆದಿದ್ದು, ಜಂಪಾ 7ನೇ ಸ್ಥಾನದಿಂದ 5ಕ್ಕೆ ಬಡ್ತಿ ಪಡೆದಿದ್ದಾರೆ. ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಟಾಪ್‌ 10 ಒಳಗೆ ಸ್ಥಾನ ಪಡೆದಿದ್ದು, ಜಿಂಬಾಬ್ವೆ ವಿರುದ್ಧ 3 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ 5 ಸ್ಥಾನ ಏರಿಕೆಗೊಂಡು 13ನೇ ಸ್ಥಾನ ಪಡೆದಿದ್ದಾರೆ.

ಪಾಕಿಸ್ತಾನದ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿ ಮತ್ತು ಅರ್ಷ್‌ದೀಪ್ ಸಿಂಗ್ ಕೂಡ ರ್ಯಾಂಕಿಂಗ್‌ನಲ್ಲಿ ಗಮನಾರ್ಹವಾಗಿ ಏರಿಕೆಗೊಂಡಿದ್ದು, ಶಾಹೀನ್ ಅಫ್ರಿದಿ 20 ಸ್ಥಾನ ಜಿಗಿದು 22ನೇ ರ್ಯಾಂಕಿಂಗ್, ಅರ್ಷ್‌ದೀಪ್ ಸಿಂಗ್ ಶಾಹಿನ್ ಅಫ್ರಿದಿಗಿಂತ ಒಂದು ಸ್ಥಾನ ಹಿಂದಿದ್ದು 23ನೇ ರ್ಯಾಂಕಿಂಗ್ ಪಡೆದಿದ್ದಾರೆ.

ನನಗೆ ಯಾರ ಭಯವೂ ಇಲ್ಲ: ಭಾರತದ ಈ ಬೌಲರ್‌ನನ್ನು ಎದುರಿಸಲು ಸಿದ್ಧ ಎಂದ ಜೋಸ್ ಬಟ್ಲರ್

ವೃತ್ತಿ ಜೀವನದ ಬೆಸ್ಟ್‌ ರ್ಯಾಂಕಿಂಗ್‌ ಪಡೆದ ಸಿಕಂದರ್ ರಾಜಾ

ವೃತ್ತಿ ಜೀವನದ ಬೆಸ್ಟ್‌ ರ್ಯಾಂಕಿಂಗ್‌ ಪಡೆದ ಸಿಕಂದರ್ ರಾಜಾ

ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ವೃತ್ತಿ ಜೀವನದ ಬೆಸ್ಟ್ ರ್ಯಾಂಕಿಂಗ್ ತಲುಪಿದ್ದು, ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಸಿಕಂದರ್ ರಾಜಾ 10 ವಿಕೆಟ್ ಪಡೆದಿದ್ದಲ್ಲದೆ, 219 ರನ್ ಕಲೆಹಾಕಿದರು.

ಇನ್ನು ಬ್ಯಾಟರ್‌ಗಳ ರ್ಯಾಂಕಿಂಗ್‌ನಲ್ಲಿ ಶ್ರೀಲಂಕಾದ ಪಥುಮ್ ನಿಸ್ಸಾಂಕ 10ನೇ ಸ್ಥಾನ, ನ್ಯೂಜಿಲೆಂಡ್‌ನ ಫಿನ್ ಅಲೆನ್ 15ನೇ ಸ್ಥಾನ, ಭಾರತದ ಕೆ.ಎಲ್‌ ರಾಹುಲ್ 16ನೇ ಸ್ಥಾನ, ಬಾಂಗ್ಲಾದೇಶದ ಲಿಟ್ಟನ್ 31ನೇ ರ್ಯಾಂಕಿಂಗ್, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 33ನೇ ಸ್ಥಾನಕ್ಕೆ ಬಡ್ತಿ ಪಡೆದ ಪ್ರಮುಖ ಆಟಗಾರರಾಗಿದ್ದಾರೆ.

Story first published: Wednesday, November 9, 2022, 13:15 [IST]
Other articles published on Nov 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X