ಭಾರತ vs ಇಂಗ್ಲೆಂಡ್ ಐದನೇ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎಂದ ಸೌರವ್ ಗಂಗೂಲಿ!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಲಂಡನ್ ನಗರದ ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 10ರ ಶುಕ್ರವಾರದಂದು ಆರಂಭವಾಗಬೇಕಿದೆ.

ಈ ತಂಡ ಇಟ್ಟುಕೊಂಡು ಟಿ20 ವಿಶ್ವಕಪ್‌ ಗೆಲ್ಲುತ್ತಾ ಇಂಗ್ಲೆಂಡ್?; 3 ಬಲಿಷ್ಠ ಆಟಗಾರರಿಗೆ ಇಲ್ಲ ಸ್ಥಾನ!ಈ ತಂಡ ಇಟ್ಟುಕೊಂಡು ಟಿ20 ವಿಶ್ವಕಪ್‌ ಗೆಲ್ಲುತ್ತಾ ಇಂಗ್ಲೆಂಡ್?; 3 ಬಲಿಷ್ಠ ಆಟಗಾರರಿಗೆ ಇಲ್ಲ ಸ್ಥಾನ!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಈಗಾಗಲೇ 4 ಪಂದ್ಯಗಳು ಮುಗಿದಿದ್ದು ಭಾರತ 2 ಪಂದ್ಯಗಳಲ್ಲಿ ಜಯವನ್ನು ಸಾಧಿಸುವುದರ ಮೂಲಕ ಸರಣಿಯಲ್ಲಿ ಮೇಲುಗೈ ಸಾಧಿಸಿದ್ದರೆ, ಇಂಗ್ಲೆಂಡ್ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯ ಗಳಿಸುವುದರ ಮೂಲಕ ಸರಣಿಯಲ್ಲಿ ಹಿನ್ನಡೆಯನ್ನು ಸಾಧಿಸಿದ್ದು ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿದೆ. ಹೀಗೆ ಸರಣಿಯ 4 ಪಂದ್ಯಗಳು ಮುಗಿದ ನಂತರ 2-1 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿರುವ ಟೀಮ್ ಇಂಡಿಯಾ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯವನ್ನು ಕೇವಲ ಡ್ರಾ ಮಾಡಿಕೊಂಡರೂ ಸಹ ಸರಣಿಯಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಲಿದೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯ ಭಾರತಕ್ಕಿಂತ ಇಂಗ್ಲೆಂಡ್ ತಂಡಕ್ಕೆ ಹೆಚ್ಚು ಅನಿವಾರ್ಯವಾಗಿದೆ ಎಂದರೆ ತಪ್ಪಾಗಲಾರದು.

ಧೋನಿ ಮೆಂಟರ್ ಆದರೆ ನಿಮ್ಮ ಬೆಂಬಲವಿರುತ್ತಾ?; ಕೊಹ್ಲಿ, ರೋಹಿತ್ ಕೊಟ್ಟ ನೇರ ಉತ್ತರಗಳಿವು!ಧೋನಿ ಮೆಂಟರ್ ಆದರೆ ನಿಮ್ಮ ಬೆಂಬಲವಿರುತ್ತಾ?; ಕೊಹ್ಲಿ, ರೋಹಿತ್ ಕೊಟ್ಟ ನೇರ ಉತ್ತರಗಳಿವು!

ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಕುರಿತು ಕ್ರಿಕೆಟ್ ವೀಕ್ಷಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮತ್ತು ಕುತೂಹಲಗಳು ಹುಟ್ಟಿಕೊಂಡಿವೆ. ಯಾವ ತಂಡ ಗೆಲುವನ್ನು ಸಾಧಿಸಲಿದೆ, ಯಾವ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ಊಹೆಗಳನ್ನು ಕ್ರಿಕೆಟ್ ಪಂಡಿತರು ಮಾಡುತ್ತಿದ್ದಾರೆ. ಆದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಬಿಸಿಸಿಐ ಗೌರವಾಧ್ಯಕ್ಷ ಸೌರವ್ ಗಂಗೂಲಿ ಅವರು ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಿಕೆ ನೀಡುವುದರ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರವನ್ನು ಉಂಟು ಮಾಡಿದ್ದಾರೆ. ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎಂದು ಬೇಸರವುಂಟಾಗುವ ರೀತಿಯ ಹೇಳಿಕೆಯನ್ನು ಸೌರವ್ ಗಂಗೂಲಿ ನೀಡಲು ಕಾರಣವೇನೆಂಬುದು ಮುಂದೆ ಇದೆ ಓದಿ..

ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್!

ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್!

ಬಿಸಿಸಿಐನ ಅಧ್ಯಕ್ಷರಾದ ಸೌರವ್ ಗಂಗೂಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲು ಕಾರಣ ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು. ಹೌದು, ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಯಾಗಿರುವ ಫಿಸಿಯೋ ಯೋಗೀಶ್ ಪಾರ್ಮರ್ ಅವರಿಗೆ ಕೊರೊನಾ ಸೊಂಕಿನ ಫಲಿತಾಂಶ ಪಾಸಿಟಿವ್ ಬಂದಿದೆ. ಈ ಕಾರಣದಿಂದಾಗಿಯೇ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎಂದು ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.

 ಗುರುವಾರ ನಡೆಯಬೇಕಿದ್ದ ಟೀಮ್ ಇಂಡಿಯಾ ಆಟಗಾರರ ತರಬೇತಿ ರದ್ದು

ಗುರುವಾರ ನಡೆಯಬೇಕಿದ್ದ ಟೀಮ್ ಇಂಡಿಯಾ ಆಟಗಾರರ ತರಬೇತಿ ರದ್ದು

ಇನ್ನು ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಯಾಗಿರುವ ಫಿಸಿಯೋ ಯೋಗೇಶ್ ಪಾರ್ಮರ್ ಅವರಿಗೆ ಕೊರೊನಾ ಸೋಂಕಿನ ಫಲಿತಾಂಶ ಪಾಸಿಟಿವ್ ಬಂದ ಕೂಡಲೇ ಎಚ್ಚೆತ್ತುಕೊಂಡ ಬಿಸಿಸಿಐ ಸೆಪ್ಟೆಂಬರ್ 9ರ ಗುರುವಾರದಂದು ನಡೆಯಬೇಕಿದ್ದ ಟೀಮ್ ಇಂಡಿಯಾ ಆಟಗಾರರ ತರಬೇತಿಯನ್ನು ರದ್ದುಪಡಿಸಿದೆ. ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಯಾಗಿರುವ ಫಿಸಿಯೋ ಯೋಗೇಶ್ ಪಾರ್ಮರ್ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿರುವ ಕಾರಣ ತಂಡದ ಆಟಗಾರರಿಗೂ ಸೋಂಕು ಹರಡಿರುವ ಸಾಧ್ಯತೆಗಳಿರಬಹುದು ಎಂಬ ಕಾರಣಕ್ಕೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಟೀಮ್ ಇಂಡಿಯಾದ ಕೋಚ್‌ಗಳಿಗೆಲ್ಲಾ ಕೊರೊನಾ ಕಂಟಕ

ಟೀಮ್ ಇಂಡಿಯಾದ ಕೋಚ್‌ಗಳಿಗೆಲ್ಲಾ ಕೊರೊನಾ ಕಂಟಕ

ಸದ್ಯ ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಯಾಗಿರುವ ಫಿಸಿಯೋ ಯೋಗೇಶ್ ಪಾರ್ಮರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಇದಕ್ಕೂ ಮುನ್ನ ಭಾರತದ ಹೆಡ್ ಕೋಚ್ ಆಗಿರುವ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆಗಿರುವ ಆರ್ ಶ್ರೀಧರ್ ಮತ್ತು ಫಿಸಿಯೋ ನಿತಿನ್ ಪಟೇಲ್ ಅವರಿಗೆ ಕೊರೋನಾ ಸೋಂಕು ತಗುಲಿದ್ದು ಐಸೋಲೇಶನ್ ನಿಯಮವನ್ನು ಅನುಸರಿಸುತ್ತಿದ್ದಾರೆ. ಇನ್ನು ಟೀಮ್ ಇಂಡಿಯಾದ ಸಿಬ್ಬಂದಿ ವರ್ಗದಲ್ಲಿ ಇಷ್ಟರಮಟ್ಟಿಗೆ ಕೊರೋನಾ ಸೋಂಕು ಹಬ್ಬಲು ಕಾರಣ ಇತ್ತೀಚೆಗಷ್ಟೇ ಲಂಡನ್ ನಗರದಲ್ಲಿ ಏರ್ಪಡಿಸಲಾಗಿದ್ದ ರವಿಶಾಸ್ತ್ರಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮವೇ ಕಾರಣ ಎಂಬ ಸುದ್ದಿಯೂ ಸಹ ಹೆಚ್ಚಾಗಿ ಹರಿದಾಡುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 21:30 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X