ದಕ್ಷಿಣ ಆಫ್ರಿಕಾ ಸರಣಿಗೂ ಶಮಿ ಅನುಮಾನ: ಬದಲಿ ಆಟಗಾರನಾಗಿ ಸಿದ್ಧವಿರುವಂತೆ ಯುವ ಆಟಗಾರನಿಗೆ ಸೂಚನೆ?

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿ ಅಂತ್ಯವಾಗುತ್ತಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಮತ್ತೊಂದು ಟಿ20 ಸರಣಿಗೆ ಸಿದ್ಧವಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದ್ದು ಟಿ20 ವಿಶ್ವಕಪ್‌ಗೂ ಮುನ್ನ ಭಾರತದ ಅಂತಿಮ ಟಿ20 ದ್ವಿಪಕ್ಷೀಯ ಸರಣಿ ಇದಾಗಿರಲಿದೆ. ಈ ಸರಣಿಗೆ ಭಾರತದ ತಂಡವನ್ನು ಈಗಾಗಲೇ ಘೋಷಣೆ ಮಾಡಿದ್ದು ಇದರಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆಗಳು ಈಗ ಕಂಡುಬರುತ್ತಿದೆ.

ಸದ್ಯ ಆಸ್ಟ್ರೇಲಿಯಾ ವಿರುದ್ಧ ಭಾರತ ಟಿ20 ಸರಣಿಯಲ್ಲಿ ಭಾಗಿಯಾಗಿದ್ದು ಈ ಸರಣಿಯಲ್ಲಿ ಭಾರತದ ಹಿರಿಯ ಆಟಗಾರ ಮೊಹಮ್ಮದ್ ಶಮಿ ಅಂತಿಮ ಕ್ಷಣದಲ್ಲಿ ಹೊರಬಿದ್ದಿದ್ದಾರೆ. ಕೊರೊನಾವೈರಸ್ ಕಾರಣದಿಂದಾಗಿ ಮೊಹಮ್ಮದ್ ಶಮಿ ಈ ಸರಣಿಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಶಮಿ ಲಭ್ಯತೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಗಳು ಬಂದಿಲ್ಲ ಎನ್ನಲಾಗುತ್ತಿದೆ.

ಲಾರ್ಡ್ಸ್‌ ಮೈದಾನದಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದ ಜೂಲನ್ ಗೋಸ್ವಾಮಿಲಾರ್ಡ್ಸ್‌ ಮೈದಾನದಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದ ಜೂಲನ್ ಗೋಸ್ವಾಮಿ

ಶಮಿ ಫಿಟ್‌ನೆಸ್ ಬಗ್ಗೆ ಸ್ಪಷ್ಟತೆಯಿಲ್ಲ!

ಶಮಿ ಫಿಟ್‌ನೆಸ್ ಬಗ್ಗೆ ಸ್ಪಷ್ಟತೆಯಿಲ್ಲ!

ಮೂಲಗಳ ಮಾಹಿತಿಯ ಪ್ರಕಾರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿಯೂ ಶಮಿ ಭಾಗಿಯಾಗಲಿರುವ ಬಗ್ಗೆ ಅನುಮಾನಗಳಿದೆ. ಹೀಗಾಗಿಯೇ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್‌ಗೆ ಮೀಸಲು ಆಟಗಾರನಾಗಿ ಸಿದ್ಧವಿರುವಂತೆ ಬಿಸಿಸಿಐ ಸೂಚಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಇನ್‌ಸೈಡ್‌ ಸ್ಪೋರ್ಟ್‌ಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ಅವರು "ಮೊಹಮ್ಮದ್ ಶಮಿ ಅವರ ಆರೋಗ್ಯ ಹಾಗೂ ಫಿಟ್‌ನೆಸ್ ವಿಚಾರವಾಗಿ ನನಗೆ ಖಚಿತ ಮಾಹಿತಿಯಿಲ್ಲ. ಈ ಬಗ್ಗೆ ವೈದ್ಯಕೀಯ ತಂಡ ಮಾಹಿತಿ ಪಡೆದುಕೊಳ್ಳಲಿದೆ" ಎಂದು ಹೇಳಿರುವುದನ್ನು ಉಲ್ಲೇಖಿಸಿದೆ.

ಭಾರತ vs ಆಸ್ಟ್ರೇಲಿಯಾ: ರೋಹಿತ್ ಅಮೋಘ ಆಟಕ್ಕೆ ಕಾರಣವಾಗಿದ್ದೇನು? ವಿವರಿಸಿದ ಸುನಿಲ್ ಗವಾಸ್ಕರ್

ವಿಶ್ವಕಪ್ ತಂಡದಲಿ ಶಮಿ ಮೀಸಲು ಆಟಗಾರ

ವಿಶ್ವಕಪ್ ತಂಡದಲಿ ಶಮಿ ಮೀಸಲು ಆಟಗಾರ

ಗಮನಾರ್ಹ ವಿಷಯವೆಂದರೆ ಟೀಮ್ ಇಂಡಿಯಾದ ಅನುಭವಿ ಆಟಗಾರನಾಗಿರುವ ಮೊಹಮ್ಮದ್ ಶಮಿ ಈ ಬಾರಿಯ ವಿಶ್ವಕಪ್‌ನ ಪ್ರಾಥಮಿಕ ತಂಡಕ್ಕೆ ಆಯ್ಕೆಯಾಗದಿದ್ದರು ಕೂಡ ಅನುಭವಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಈ ಸರಣಿಯಲ್ಲಿ ಶಮಿ ಭಾಗಿಯಾಗಲು ಸಾರ್ಧಯವಾಗಿರಲಿಲ್ಲ.

Ind vs Eng 3rd ODI: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ ಅಂಗಳದಲ್ಲಿ ಭಾರತದ ವನಿತೆಯರಿಗೆ ಐತಿಹಾಸಿಕ ಜಯ, ಸರಣಿ ಕ್ಲೀನ್ ಸ್ವೀಪ್

ದ. ಆಫ್ರಿಕಾ ವಿರುದ್ಧ ನಡೆಯಲಿದೆ ಮೂರು ಪಂದ್ಯಗಳ ಸರಣಿ

ದ. ಆಫ್ರಿಕಾ ವಿರುದ್ಧ ನಡೆಯಲಿದೆ ಮೂರು ಪಂದ್ಯಗಳ ಸರಣಿ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾದ ಅಂತಿಮ ಸರಣಿ ದಕ್ಷಿಣ ಆಪ್ರಿಕಾ ವಿರುದ್ಧ ನಡೆಯಲಿದೆ. ಈ ಸರಣಿಯಲ್ಲಿ ಭಾರತ ತಂಡ ಮೂರು ಪಂದ್ಯಗಳನ್ನು ಆಡಲಿದೆ. ಸೆಪ್ಟೆಂಬರ್ 28ರಂದು ಮೊದಲ ಪಂದ್ಯ ನಡೆದರೆ ಅಕ್ಟೋಬರ್ 2ರಂದು 2ನೇ ಪಂದ್ಯ ಹಾಗೂ ಅಕ್ಟೋಬರ್ 4ರಂದು ಮೂರನೇ ಪಂದ್ಯ ನಡೆಯಲಿದೆ. ಈ ಪಂದ್ಯಗಳು ಕ್ರಮವಾಗಿ ತಿರುವನಂತಪುರಂ, ಗುವಾಹಟಿ ಹಾಗೂ ಇಂದೋರ್‌ನಲ್ಲಿ ನಡೆಯಲಿದೆ. ಈ ಸರಣಿಯ ಬಳಿಕ ವಿಶ್ವಕಪ್‌ನಲ್ಲಿ ಭಾಗವಹಿಸುವ ಆಟಗಾರರ ಪಡೆ ಆಸ್ಟ್ರೇಲಿಯಾಗೆ ಹಾರಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ

For Quick Alerts
ALLOW NOTIFICATIONS
For Daily Alerts
Story first published: Sunday, September 25, 2022, 17:30 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X