ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Eng 3rd ODI: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ ಅಂಗಳದಲ್ಲಿ ಭಾರತದ ವನಿತೆಯರಿಗೆ ಐತಿಹಾಸಿಕ ಜಯ, ಸರಣಿ ಕ್ಲೀನ್ ಸ್ವೀಪ್

ಲಾರ್ಡ್ಸ್‌ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರು 16 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ, ಆಂಗ್ಲರ ನೆಲದಲ್ಲಿ ಭಾರತದ ವನಿತೆಯರು ಇದೇ ಮೊದಲ ಬಾರಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರು. ಈ ಮೂಲಕ ಭಾರತದ ವನಿತೆಯರು ಲೆಜೆಂಡರಿ ಕ್ರಿಕೆಟರ್ ಜೂಲನ್ ಗೋಸ್ವಾಮಿಗೆ ಗೆಲುವಿನ ವಿದಾಯ ನೀಡಿದರು.

2007ರ ಟಿ20 ವಿಶ್ವಕಪ್‌ ಫೈನಲ್‌ನ ಕೊನೆಯ ಓವರ್‌ನಲ್ಲಿ ಜೋಗಿಂದರ್‍‌ ಶರ್ಮಾಗೆ ಧೋನಿ ಹೇಳಿದ್ದೇನು ಗೊತ್ತಾ?2007ರ ಟಿ20 ವಿಶ್ವಕಪ್‌ ಫೈನಲ್‌ನ ಕೊನೆಯ ಓವರ್‌ನಲ್ಲಿ ಜೋಗಿಂದರ್‍‌ ಶರ್ಮಾಗೆ ಧೋನಿ ಹೇಳಿದ್ದೇನು ಗೊತ್ತಾ?

ಅಂತಿಮ ಹಂತದಲ್ಲಿ ಇಂಗ್ಲೆಂಡ್‌ಗೆ ಗೆಲುವಿಗಾಗಿ 17 ರನ್ ಬೇಕಾಗಿದ್ದಾಗ 44ನೇ ಓವರ್ ಬೌಲ್ ಮಾಡುತ್ತಿದ್ದ ದೀಪ್ತಿ ಶರ್ಮಾ ಬೌಲಿಂಗ್ ಎಂಡ್‌ನಲ್ಲಿದ್ದ ಚಾರ್ಲೊಟ್ ಡೀನ್ (47) ಅವರನ್ನು ರನ್‌ಔಟ್ (ಮಂಕಡಿಂಗ್) ಮಾಡುವ ಮೂಲಕ ಭಾರತದ ಮಹಿಳಾ ತಂಡಕ್ಕೆ 16 ರನ್‌ಗಳ ಜಯ ತಂದುಕೊಟ್ಟರು. ಐಸಿಸಿ ಹೊಸ ನಿಯಮಗಳ ಪ್ರಕಾರ ಮಂಕಡಿಂಗ್ ಅಕ್ರಮವಲ್ಲ ಎಂದು ಹೇಳಲಾಗಿದೆ. ಅದನ್ನು ಅಧಿಕೃತವಾಗಿ ರನೌಟ್ ಆಗಿ ಪರಿಗಣಿಸುವುದಾಗಿ ತಿಳಿಸಿತ್ತು. ಹೊಸ ನಿಯಮ ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.

ಟಾಸ್‌ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭದಲ್ಲಿ ಭಾರಿ ಆಘಾತ ಅನುಭವಿಸಿತು. ಇಂಗ್ಲೆಂಡ್ ಬೌಲರ್ ಕೇಟ್ ಕ್ರಾಸ್ ಭಾರತದ ಬ್ಯಾಟರ್ ಗಳನ್ನು ಎಡಬಿಡದೆ ಕಾಡಿದರು. ಭಾರತದ ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ ಮತ್ತು ಮೂರನೇ ಕ್ರಮಾಂಕದ ಯಾಸ್ತಿಕಾ ಭಾಟಿಯಾ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಭಾರತದ ವನಿತೆಯರಿಗೆ ಆರಂಭಿಕ ಆಘಾತ

ಭಾರತದ ವನಿತೆಯರಿಗೆ ಆರಂಭಿಕ ಆಘಾತ

ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 4 ರನ್ ಗಳಿಸಿ ಔಟಾದರು. ನಂತರ ಬಂದ ಹರ್ಲಿನ್ ಡಿಯೋಲ್ ಕೂಡ 3 ರನ್‌ಗೆ ಔಟಾದರು. 8.4 ಓವರ್ ಆಗುಷ್ಟರಲ್ಲಿ ಭಾರತದ ಮಹಿಳೆಯರು 29 ರನ್ ಗಳಿಸಿ ಪ್ರಮುಖ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಈ ಸಂದರ್ಭದಲ್ಲಿ ಭಾರತದ ಅನುಭವಿ ಬ್ಯಾಟರ್ ಸ್ಮೃತಿ ಮಂಧಾನ ಮತ್ತಿ ದೀಪ್ತಿ ಶರ್ಮಾ ತಾಳ್ಮೆಯಿಂದ ಬ್ಯಾಟಿಂಗ್ ಮಾಡುವ ಮೂಲಕ ರನ್ ಕಲೆ ಹಾಕಿದರು. 11 ಆಟಗಾರರ ಪೈಕಿ ಎಂಟು ಆಟಗಾರರು ಏಕ-ಅಂಕಿಯ ಸ್ಕೋರ್‌ಗೆ ಔಟಾದರು.

ದಿನೇಶ್ ಕಾರ್ತಿಕ್ ಧರಿಸುವ ಹೆಲ್ಮೆಟ್ ಹೇಗೆ ವಿಭಿನ್ನ, ಅದರ ವಿಶೇಷತೆಗಳೇನು ಗೊತ್ತಾ?

ಆಸರೆಯಾದ ದೀಪ್ತಿ ಶರ್ಮಾ, ಸ್ಮೃತಿ ಮಂಧಾನ

ಆಸರೆಯಾದ ದೀಪ್ತಿ ಶರ್ಮಾ, ಸ್ಮೃತಿ ಮಂಧಾನ

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 79 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಭಾರತಕ್ಕೆ ಆಸರೆಯಾದರು. ಇನ್ನಿಂಗ್ಸ್ ಅಂತ್ಯದವರೆಗೂ ಅಜೇಯರಾಗಿ ಉಳಿದ ದೀಪ್ತಿ ಶರ್ಮಾ 106 ಎಸೆತಗಳಲ್ಲಿ ತಾಳ್ಮೆಯ 68 ರನ್ ಕಲೆಹಾಕಿದರು. ನಂತರ ಬಂದ ಪೂಜಾ ವಸ್ತ್ರಾಕರ್ ಕೂಡ 22 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಈ ಮೂವರನ್ನು ಹೊರತು ಪಡಿಸಿದರೆ ಭಾರತದ ಇನ್ಯಾವ ಬ್ಯಾಟರ್ ಕೂಡ ಎರಡಂಕಿ ರನ್ ಕಲೆಹಾಕಲಿಲ್ಲ. 45.4 ಓವರ್ ಗಳಲ್ಲಿ ಭಾರತದ ವನಿತೆಯರು 169 ರನ್ ಗಳಿಸುವಷ್ಟರಲ್ಲಿ ಆಲೌಟ್ ಆದರು. ಇಂಗ್ಲೆಂಡ್ ಪರವಾಗಿ ಕೇಟ್ ಕ್ರಾಸ್ 10 ಓವರ್ ಗಳಲ್ಲಿ 26 ರನ್ ನೀಡಿ 4 ವಿಕೆಟ್ ಪಡೆದರು.

ದಿಢೀರ್ ಕುಸಿತ ಇಂಗ್ಲೆಂಡ್ ವನಿತೆಯರು

ದಿಢೀರ್ ಕುಸಿತ ಇಂಗ್ಲೆಂಡ್ ವನಿತೆಯರು

ರೇಣುಕಾ ಸಿಂಗ್‌ ಬೌಲಿಂಗ್‌ನಲ್ಲಿ ಎಮ್ಮಾ ಲ್ಯಾಂಬ್ ಅವರನ್ನು (21) ಯಾಸ್ತಿಕಾ ಭಟ್ ಸ್ಟಂಪ್ ಔಟ್ ಮಾಡಿದರು. ತನ್ನ 100ನೇ ಪಂದ್ಯದಲ್ಲಿ ಆಡುತ್ತಿರುವ ಟ್ಯಾಮಿ ಬ್ಯೂಮಾಂಟ್ (8) ರೇಣುಕಾ ಸಿಂಗ್ ಬೌಲಿಂಗ್‌ನಲ್ಲಿ ಔಟಾದರು. ಜೂಲನ್ ಗೋಸ್ವಾಮಿ ಆಲಿಸ್ ಕ್ಯಾಪ್ಸಿ (5) ಯನ್ನು ಔಟ್ ಮಾಡಿದರು.

ಸೋಫಿಯಾ ಡಂಕ್ಲಿ (7) ಕೂಡ ರೇಣುಕಾ ಬೌಲಿಂಗ್‌ನಲ್ಲಿ ಔಟಾದರು. ಇಂಗ್ಲೆಂಡ್ 12 ನೇ ಓವರ್‌ನಲ್ಲಿ ನಾಲ್ಕು ವಿಕೆಟ್‌ಗೆ 43 ರನ್‌ ಗಳಿಸಿತು. ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಡ್ಯಾನಿ ವ್ಯಾಟ್ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ 53 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ನಂತರ 16ನೇ ಓವರ್ ನಲ್ಲಿ ಸೋಫಿ ಎಕ್ಲೆಸ್ಟೋನ್ 3 ರನ್ ಗಳಿಸಿ ರಾಜೇಶ್ವರಿ ಗಾಯಕ್ವಾಡ್ ಬೌಲಿಂಗ್‌ನಲ್ಲಿ ಔಟಾದರು.

ಮಂಕಡಿಂಗ್‌ಗೆ ಔಟಾದ ಚಾರ್ಲೊಟ್ ಡೀನ್

ಮಂಕಡಿಂಗ್‌ಗೆ ಔಟಾದ ಚಾರ್ಲೊಟ್ ಡೀನ್

65 ರನ್ ಆಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಚಾರ್ಲೊಟ್ ಡೀನ್ (47) ಮತ್ತು ನಾಯಕಿ ಆಮಿ ಜೋನ್ಸ್ (28) ಆಸರೆಯಾದರು. ಇವರಿಬ್ಬರೂ 38 ರನ್‌ಗಳ ಜೊತೆಯಾಟ ಆಡಿದರು. ನಂತರ ಆಮಿ ಜೋನ್ಸ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೇಟ್ ಕ್ರಾಸ್ 10 ರನ್ ಗಳಿಸಿ ಔಟ್ ಆದರು. 118 ರನ್ ಆಗುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಸೋಲು ಖಚಿತವಾಗಿತ್ತು.

ಆದರೆ, ಚಾರ್ಲೊಟ್ ಡೀನ್ ಜೊತೆಯಾದ ಫ್ರೇಯಾ ಡೇವಿಸ್ ದಿಟ್ಟ ಹೋರಾಟ ನೀಡಿದರು. 35 ರನ್‌ಗಳ ಜೊತೆಯಾಟದಲ್ಲಿ ಇಂಗ್ಲೆಂಡ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು, ಇಂಗ್ಲೆಂಡ್ ಗೆಲುವಿಗೆ ಇನ್ನು 17 ರನ್ ಮಾತ್ರ ಬೇಕಿದ್ದಾಗ, ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಚಾರ್ಲೋಟ್ ಡೀನ್ ಮಂಕಡಿಂಗ್ ಮೂಲಕ ಔಟ್ ಆದರು. ಈ ಮೂಲಕ ಭಾರತ 16ರನ್‌ಗಳ ಗೆಲುವು ಸಾಧಿಸಿ ಸಂಭ್ರಮಿಸಿತು.

ಇಂಗ್ಲೆಂಡ್ ಮಹಿಳೆಯರು (ಪ್ಲೇಯಿಂಗ್ 11): ಎಮ್ಮಾ ಲ್ಯಾಂಬ್, ಟಮ್ಮಿ ಬ್ಯೂಮಾಂಟ್, ಸೋಫಿಯಾ ಡಂಕ್ಲಿ, ಆಲಿಸ್ ಕ್ಯಾಪ್ಸೆ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ನಾಯಕಿ ಮತ್ತು ವಿಕೆಟ್ ಕೀಪರ್), ಫ್ರೇಯಾ ಕೆಂಪ್, ಸೋಫಿ ಎಕ್ಲೆಸ್ಟೋನ್, ಷಾರ್ಲೆಟ್ ಡೀನ್, ಕೇಟ್ ಕ್ರಾಸ್, ಫ್ರೇಯಾ ಡೇವಿಸ್

ಭಾರತ ಮಹಿಳೆಯರು (ಪ್ಲೇಯಿಂಗ್ 11): ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್.

Story first published: Sunday, September 25, 2022, 0:54 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X