ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs SA T20: ಟೀಂ ಇಂಡಿಯಾ ಬೌಲಿಂಗ್ ಸಮಸ್ಯೆಗೆ ಅಂತ್ಯ ಹಾಡುತ್ತಾರಾ ಅರ್ಶ್‌ದೀಪ್ ಸಿಂಗ್

Ind Vs SA T20: Arshdeep Singh Likely Be Included In India Playing XI For First T20

ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗೆಲುವಿನ ನಂತರ, ಟೀಂ ಇಂಡಿಯಾ ದಕ್ಷಿಣಾ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲು ಸಜ್ಜಾಗಿದೆ. ಸೆಪ್ಟೆಂಬರ್ 28ರಿಂದ ಸರಣಿ ಆರಂಭವಾಗಲಿದ್ದು, ಮೊದಲನೇ ಪಂದ್ಯ ತಿರುವನಂತಪುರದಲ್ಲಿ ನಡೆಯಲಿದೆ.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಭಾರತದ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್, ತಿರುವನಂತಪುರದಲ್ಲಿ ರೋಹಿತ್ ಶರ್ಮಾ ಪಡೆಯನ್ನು ಸೇರಲು ಸಿದ್ಧರಾಗಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಭಾರತ ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ.

Ind vs SA 1st T20: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11, ಸವಾಲುಗಳುInd vs SA 1st T20: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11, ಸವಾಲುಗಳು

ಕಂಡೀಷನಿಂಗ್ ಸಂಬಂಧಿತ ಕೆಲಸಕ್ಕಾಗಿ ಅರ್ಶ್‌ದೀಪ್ ಇತ್ತೀಚೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವರದಿ ಮಾಡಿರುವುದು ಗಮನಿಸಬೇಕಾದ ಅಂಶ. ಹೀಗಾಗಿ ಅರ್ಶ್‌ದೀಪ್ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡದಲ್ಲಿ ಸೇರ್ಪಡೆಯಾಗಿರಲಿಲ್ಲ. ಆದರೆ, ಅವರು ದಕ್ಷಿಣ ಆಫ್ರಿಕಾದ ಟಿ20 ಸರಣಿಯಲ್ಲಿದ್ದಾರೆ. ಆದಾಗ್ಯೂ, ಕೋವಿಡ್‌ನಿಂದಾಗಿ ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾಗವಹಿಸುವುದು ಇನ್ನೂ ಸ್ಪಷ್ಟವಾಗಿಲ್ಲ.

ಮುಂಬರುವ ಸರಣಿಗೆ ಸಂಬಂಧಿಸಿದಂತೆ, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಕಂಡೀಷನಿಂಗ್ ಸಂಬಂಧಿತ ಕೆಲಸಕ್ಕಾಗಿ ಬೆಂಗಳೂರಿನ ಎನ್‌ಸಿಎ ಮುಂದೆ ಹಾಜರಾಗಲಿದ್ದಾರೆ.

ಅರ್ಶ್‌ದೀಪ್‌ ಸ್ಥಾನ ಪಡೆಯುವ ಸಾಧ್ಯತೆ

ಅರ್ಶ್‌ದೀಪ್‌ ಸ್ಥಾನ ಪಡೆಯುವ ಸಾಧ್ಯತೆ

ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಇಬ್ಬರೂ ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವಿನ ಭಾಗವಾಗಿದ್ದರು. ಇಬ್ಬರೂ ಕೂಡ ಎನ್‌ಸಿಎಗೆ ಕಂಡಿಷನಿಂಗ್‌ಗಾಗಿ ಹಾಜರಾಗುತ್ತಿದ್ದು, ಅರ್ಶ್‌ದೀಪ್ ಭುವನೇಶ್ವರ್ ಬದಲಿಗೆ ತಂಡದಲ್ಲಿ ನೇರವಾಗಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಸರಣಿಯಲ್ಲಿ ಭಾರತೀಯ ಬೌಲರ್‌ಗಳ ಕಳಪೆ ಪ್ರದರ್ಶನದೊಂದಿಗೆ, ಇದು ಅರ್ಶ್‌ದೀಪ್‌ಗೆ ಮಿಂಚಲು ಅದ್ಭುತ ಅವಕಾಶವನ್ನು ನೀಡುತ್ತದೆ. ಡೆತ್ ಓವರ್‌ಗಳ ಬೌಲಿಂಗ್ ಭಾರತಕ್ಕೆ ಸಮಸ್ಯೆಯಾಗಿದೆ ಮತ್ತು ಆ ಸಮಯದಲ್ಲಿ ಅರ್ಶ್‌ದೀಪ್ ಉತ್ತಮ ಪ್ರದರ್ಶನ ನೀಡಿದರೆ ತಂಡದಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಳ್ಳಬಹುದಾಗಿದೆ.

T20 World cup 2022: ತಂಡದಲ್ಲಿ ಬದಲಾವಣೆ ಮಾಡಲು ಕೊನೆ ದಿನಾಂಕ ಯಾವಾಗ? ಈ ತಂಡಗಳಲ್ಲಿ ಬದಲಾವಣೆ?

ಉತ್ತಮ ಬೌಲಿಂಗ್ ಮಾಡಿದ್ದ ಅರ್ಶ್‌ದೀಪ್

ಉತ್ತಮ ಬೌಲಿಂಗ್ ಮಾಡಿದ್ದ ಅರ್ಶ್‌ದೀಪ್

ತಂಡದ ಮ್ಯಾನೇಜ್‌ಮೆಂಟ್ ಸರಣಿಯಲ್ಲಿ ಅರ್ಶ್‌ದೀಪ್ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಏಷ್ಯಾಕಪ್‌ನಲ್ಲಿ ಭಾರತದ ಬೌಲರ್‌ಗಳನ್ನು ಟೀಕೆ ಮಾಡಿರಬಹುದು, ಆದರೆ ಡೆತ್ ಓವರ್‌ಗಳಲ್ಲಿ ಅರ್ಶ್‌ದೀಪ್ ತಮ್ಮ ಕ್ಲಾಸ್ ತೋರಿಸಿದರು. ಅವರ ಯಾರ್ಕರ್‌ಗಳು ಗಮನ ಸೆಳೆದವು.

ಅರ್ಶ್‌ದೀಪ್ ಸಿಂಗ್ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅದೇ ರೀತಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾದರೆ, ತಂಡದ ಆಡಳಿತವು ಮುಂದಿನ ತಿಂಗಳು ಪ್ರಾರಂಭವಾಗುವ ವಿಶ್ವಕಪ್‌ಗೆ ಅವರನ್ನು ಪರಿಗಣಿಸಬಹುದು.

ತಂಡವನ್ನು ಕಾಡುತ್ತಿದೆ ಬೌಲಿಂಗ್ ವೈಫಲ್ಯ

ತಂಡವನ್ನು ಕಾಡುತ್ತಿದೆ ಬೌಲಿಂಗ್ ವೈಫಲ್ಯ

ಸದ್ಯಕ್ಕೆ ಭಾರತದ ಬೌಲಿಂಗ್ ಅಷ್ಟೇನೂ ಉತ್ತಮವಾಗಿಲ್ಲ, ಏಷ್ಯಾಕಪ್‌ನಲ್ಲಿ ಕಳಪೆ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡ ಸೂಪರ್ 4 ಹಂತದಲ್ಲಿ ಹೊರಬಿದ್ದಿತ್ತು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬುಮ್ರಾ, ಹರ್ಷಲ್ ಪಟೇಲ್ ವಾಪಸಾದರೂ ಕೂಡ ಇಬ್ಬರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ, ಆದರೆ ಡೆತ್ ಓವರ್ ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಡುತ್ತಿರುವ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಇಬ್ಬರು ಆಡುವ ಬಳಗದಲ್ಲಿ ಸ್ಥಾನ ಪಡೆಯಬೇಕೆಂದರೆ ಉತ್ತಮ ಪ್ರದರ್ಶನ ನೀಡಲೇಬೇಕಿದೆ.

ಟೀಂ ಇಂಡಿಯಾದ ಅಂತಿಮ ಹಂತದ ತಯಾರಿ

ಟೀಂ ಇಂಡಿಯಾದ ಅಂತಿಮ ಹಂತದ ತಯಾರಿ

ದಕ್ಷಿಣ ಆಫ್ರಿಕಾ ಸರಣಿಯು ಟಿ20 ವಿಶ್ವಕಪ್‌ಗಾಗಿ ಭಾರತದ ಅಂತಿಮ ಹಂತದ ತಯಾರಿಯನ್ನು ಸೂಚಿಸುತ್ತದೆ. ಮೂರು ಪಂದ್ಯಗಳ ಸರಣಿಯು ಮ್ಯಾನೇಜ್‌ಮೆಂಟ್‌ಗೆ ಆಸ್ಟ್ರೇಲಿಯಾಕ್ಕೆ ಹೊರಡುವ ಮೊದಲು ಅಂತಿಮ ಬಾರಿಗೆ ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸಲು ಅನುವು ಮಾಡಿಕೊಡುತ್ತದೆ.

ನಾಯಕ ರೋಹಿತ್ ಶರ್ಮಾ ಈ ಮೂರು ಪಂದ್ಯಗಳಲ್ಲಿ ಹಲವು ಪ್ರಯೋಗಗಳನ್ನು ಮಾಡುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

Story first published: Monday, September 26, 2022, 16:03 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X