ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಡಿಲೇಡ್‌ ಟೆಸ್ಟ್‌ನ ಅಂತ್ಯದಲ್ಲಿ ಅಡಿಗೆ ಬಿದ್ದ ಭಾರತ

By Kiran B Hegde

ಅಡಿಲೇಡ್, ಡಿ. 13: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಆರಂಭದಿಂದ ಗೆಲವಿನ ವಿಶ್ವಾಸದೊಂದಿಗೆ ಆಡಿದ ಭಾರತ ನಾಯಕ ವಿರಾಟ್ ಕೊಯ್ಲಿಯ ಅಮೋಘ ಶತಕದ ಬೆಂಬಲವಿದ್ದರೂ ಕೊನೆಯ ಹಂತದಲ್ಲಿ ಆತಿಥೇಯ ಆಸ್ಟ್ರೇಲಿಯಾಕ್ಕೆ ಶರಣಾಗಿದೆ.

ಸ್ಪರ್ಧಾತ್ಮಕ ಎನ್ನಬಹುದಾದ 364 ರನ್‌ ಗಳಿಸುವ ಗುರಿಯೊಂದಿಗೆ ಮೈದಾನಕ್ಕಿಳಿದ ಭಾರತೀಯ ದಾಂಡಿಗರು ಉತ್ತಮವಾಗಿಯೇ ಆಡಿದರು. 242 ರನ್‌ಗಳಿಗೆ ಕೇವಲ 2 ವಿಕೆಟ್ ಮಾತ್ರ ಕಳೆದುಕೊಂಡು ಗೆಲುವಿನ ವಿಶ್ವಾಸದಲ್ಲಿದ್ದರು. [ಸ್ಕೋರ್ ಬೋರ್ಡ್ ಗೆ ಇಲ್ಲಿ ಕ್ಲಿಕ್ ಮಾಡಿ]

virat

ಆದರೆ, ನಂತರ ಕೇವಲ 73 ರನ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 48 ರನ್‌ಗಳಿಂದ ಸೋಲನುಭವಿಸಿತು. ಭಾರತ ತಂಡದ ವಿರಾಟ್ ಕೊಯ್ಲಿ (141) ಹಾಗೂ ಮುರಳಿ ವಿಜಯ (99) ರನ್ ಗಳಿಸಿದ್ದು ಬಿಟ್ಟರೆ ಬೇರಾರೂ ರನ್ ಗಳಿಕೆಯಲ್ಲಿ ಎರಡಂಕಿಯನ್ನು ಮುಟ್ಟಲಿಲ್ಲ. [ಪಂದ್ಯಗಳು ನಡೆಯುವ ದಿನಾಂಕ]

ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿದ ವಿರಾಟ್ ಕೊಯ್ಲಿ ನಾಯಕನಾಗಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಆದರೆ, ಈ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ತಂಡದ ಉಳಿದ ಸದಸ್ಯರು ಬೆರಳೆಣಿಕೆಯಷ್ಟು ರನ್‌ಗಳಿಗೆ ವಿಕೆಟ್ ಒಪ್ಪಿಸಿ ತಂಡವನ್ನು ಸೋಲಿನ ದವಡೆಗೆ ನೂಕಿದರು.

ಇತ್ತ ವಿರಾಟ್ ಕೊಯ್ಲಿ ಟೆಸ್ಟ್ ಕ್ರಿಕೆಟ್ ಜೀವನದ ಎಂಟನೇ ಶತಕವನ್ನು ದಾಖಲಿಸಿದ್ದರೂ ತಂಡದ ಸೋಲಿನಿಂದ ಸಂತಸ ಅನುಭವಿಸಲಾಗದೆ ವಂಚಿತರಾದರು. ಮುರಳಿ ವಿಜಯ್ ತನ್ನ ನಾಯಕನಿಗೆ ಉತ್ತಮ ಸಾಥ್ ಒದಗಿಸಿದರು. ಆದರೆ, ತಮ್ಮ 5ನೇ ಟೆಸ್ಟ್ ಶತಕ ಗಳಿಸುವಲ್ಲಿ ವಿಫಲರಾದರು. [ಗವಾಸ್ತರ್ ಸಾಲಿಗೆ ಸೇರಿದ ಕೊಯ್ಲಿ]

aus

ಪಂದ್ಯ ಗೆಲ್ಲಿಸಿದ ನಾಥನ್ ಲ್ಯೋನ್: ಆಸ್ಟ್ರೇಲಿಯಾ ಪರ ಬೌಲರ್ ನಾಥನ್ ಲ್ಯೋನ್ 152 ರನ್‌‌ಗಳಿಗೆ 7 ವಿಕೆಟ್ ಕಿತ್ತು ತಂಡಕ್ಕೆ ಗೆಲುವಿನ ರೂವಾರಿ ಎನ್ನಿಸಿ 'ಪಂದ್ಯಪುರುಷೋತ್ತಮ' ಬಹುಮಾನ ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಸರಣಿಯ ದ್ವಿತೀಯ ಪಂದ್ಯವು ಬ್ರಿಸ್ಬೇನ್ ನಗರದಲ್ಲಿ ಡಿಸೆಂಬರ್ 17ರಿಂದ ಆರಂಭವಾಗಲಿದೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X