ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ವಿರುದ್ಧ ಪಂದ್ಯ: ಭಾರತ ತಂಡದಲ್ಲಿ ಆಗಬಹುದಾದ ಬದಲಾವಣೆಗಳು

India may do several changes in team for match against Pakistan

ದುಬೈ, ಸೆಪ್ಟೆಂಬರ್ 19: ಭಾರತ-ಪಾಕಿಸ್ತಾನ ತಂಡಗಳು ಇಂದು ಏಷ್ಯಾಕಪ್‌ನಲ್ಲಿ ಮುಖಾ-ಮುಖಿ ಆಗಲಿವೆ. ಎರಡೂ ತಂಡಗಳಿಗೆ ಇದು ಅತ್ಯಂತ ಮಹತ್ವದ ಪಂದ್ಯ.

ಭಾರತವು ನಿನ್ನೆ ನಡೆದ ಪಂದ್ಯದಲ್ಲಿ ಹಾಂಕಾಂಗ್ ಅನ್ನು ಪ್ರಯಾಸಪಟ್ಟು ಮಣಿಸಿದೆ. ಹಾಗಾಗಿ ಈ ಪಂದ್ಯದಲ್ಲಿ ಅಲ್ಪ ಒತ್ತಡಕ್ಕೆ ಸಿಲುಕಿದೆ. ಹಾಗಾಗಿ 'ದಿ ಬೆಸ್ಟ್‌' ತಂಡವನ್ನು ಭಾರತವು ಈ ಪಂದ್ಯದಲ್ಲಿ ಕಣಕ್ಕಿಳಿಸಲಿದೆ. ಆದರೆ ತಂಡದ ಆಯ್ಕೆಯಲ್ಲಿ ಗೊಂದಲಗಳು ಉಂಟಾಗಲಿವೆ.

ಅಂಕಿ-ಅಂಶ: ಭಾರತ-ಪಾಕಿಸ್ತಾನ, ಯಾರು ಹೆಚ್ಚು ಪಂದ್ಯ ಗೆದ್ದಿದ್ದಾರೆ? ಅಂಕಿ-ಅಂಶ: ಭಾರತ-ಪಾಕಿಸ್ತಾನ, ಯಾರು ಹೆಚ್ಚು ಪಂದ್ಯ ಗೆದ್ದಿದ್ದಾರೆ?

ಮೊದಲ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಬದಲಿಗೆ ಅಂಬಟಿ ರಾಯುಡುಗೆ ಪ್ರಯೋಗಕ್ಕಾಗಿ ನೀಡಿದ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡಿದ್ದಾರೆ. ಹಾಗಾಗಿ ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ಅಂಬಡಿ ರಾಯುಡು ಅವರನ್ನೇ ಉಳಿಸಿಕೊಳ್ಳುತ್ತಾರೆಯೋ ಅಥವಾ ಇಂಗ್ಲೆಂಡ್‌ನಲ್ಲಿ ಕೊನೆಯ ಟೆಸ್ಟ್‌ನಲ್ಲಿ ಶತಕ ಗಳಿಸಿ ಮಿಂಚಿರುವ ಕೆ.ಎಲ್.ರಾಹುಲ್‌ಗೆ ಅವರನ್ನು ಕಣಕ್ಕಿಳಿಸುತ್ತಾರೆಯೋ ನೋಡಬೇಕಿದೆ.

ಭಾರತ ತಂಡ ಇಂದು ಆಡುವ ಹನ್ನೊಂದು ಆಟಗಾರರನ್ನು ಯಾವ ಅಂಶಗಳ ಮೇಲೆ ಆಯ್ಕೆ ಮಾಡಬಹುದು ಎಂಬ ವಿಶ್ಲೇಷಣೆ ಇಲ್ಲಿದೆ. ಇಂದು ಪಾಕಿಸ್ತಾನದ ವಿರುದ್ಧ ಯಾವ ಆಟಗಾರರು ಕಣಕ್ಕಿಳಿಯಬೇಕು ಎಂಬುದು ನಿಮ್ಮ ಅಭಿಪ್ರಾಯ. ಕಮೆಂಟ್‌ನಲ್ಲಿ ಬರೆಯಿರಿ.

ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಯಾರು ಬರುತ್ತಾರೆ?

ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಯಾರು ಬರುತ್ತಾರೆ?

ಸತತ ವೈಫಲ್ಯದಿಂದ ಕೊರಗತ್ತಿರುವ ದಿನೇಶ್ ಕಾರ್ತಿಕ್ ಈ ಪಂದ್ಯದಿಂದ ಹೊರ ಹೋಗುವುದು ಬಹುತೇಕ ಖಾಯಂ. ಆದರೆ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆ. ಅಂಬಟಿ ರಾಯುಡು ಅವರನ್ನು ದಿನೇಶ್ ಸ್ಥಾನದಲ್ಲಿ ಆಡಿಸಿ, ಕೆ.ಎಲ್.ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಇದು ಉತ್ತಮ ಆಯ್ಕೆಯೂ ಆಗಬಲ್ಲದು. ಹೀಗೆ ಮಾಡಿದಲ್ಲಿ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಅಥವಾ ಕೇದರ್ ಜಾದವ್‌ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಇಲ್ಲದಂತಾಗುತ್ತದೆ.

ಶಾರ್ದೂಲ್ ಠಾಕೂರ್ ಹೊರಕ್ಕೆ ಬುಮ್ರಾ ಒಳಕ್ಕೆ

ಶಾರ್ದೂಲ್ ಠಾಕೂರ್ ಹೊರಕ್ಕೆ ಬುಮ್ರಾ ಒಳಕ್ಕೆ

ಮೊದಲ ಪಂದ್ಯದಲ್ಲಿ ಗಮನ ಸೆಳೆಯಲು ವಿಫಲರಾಗಿರುವ ವೇಗಿ ಶಾರ್ದೂಲ್ ಠಾಕೂರ್ ಸಹ ಈ ಪಂದ್ಯದಿಂದ ಹೊರ ಹೋಗುವುದು ಖಚಿತ. ಅವರ ಸ್ಥಾನಕ್ಕೆ ಜಸ್ಪ್ರಿತ್ ಬುಮ್ರಾ ಬರಲಿದ್ದಾರೆ. ಮೊದಲ ಪಂದ್ಯದಲ್ಲಿ ಗಮನ ಸೆಳೆದಿರುವ ಎಡಗೈ ವೇಗಿ ಖಲೀಲ್ ಅಹ್ಮದ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಏಷ್ಯಾ ಕಪ್ 2018: ಭಾರತ-ಪಾಕಿಸ್ತಾನದ ಸರ್ವಕಾಲಿಕ 11 ಆಟಗಾರರಿವರು

ಭುವನೇಶ್ವರ್‌ ಕುಮಾರ್‌ಗೆ ಹೊರಗುಳಿಯುವ ಸಾಧ್ಯತೆ

ಭುವನೇಶ್ವರ್‌ ಕುಮಾರ್‌ಗೆ ಹೊರಗುಳಿಯುವ ಸಾಧ್ಯತೆ

ಮೊದಲ ಪಂದ್ಯದಲ್ಲಿ ಆಡಿದ್ದ ಭುವನೇಶ್ವರ್ ಕುಮಾರ್ ಅವರು ಗಾಯದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಮೊದಲ ಪಂದ್ಯದಲ್ಲಿ ವಿಕೆಟ್ ಕೂಡಾ ಬಿದ್ದಿಲ್ಲ. ಹಾಗಾಗಿ ಅವರು ತಂಡದಿಂದ ಹೊರಗುಳಿದರೆ ಭಾರತಕ್ಕೆ ಶಕ್ತ ಬೌಲರ್ ಒಬ್ಬರ ಕಡಿಮೆ ಆಗುತ್ತದೆ. ಶಾರ್ದೂಲ್ ಠಾಕೂರ್ ಅಥವಾ ಹಾರ್ದಿಕ್ ಪಂಡ್ಯಾ ಅವರ ಸ್ಥಾನ ತುಂಬಬೇಕಾಗುತ್ತದೆ.

ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ ನಡುವೆ ಸ್ಪರ್ಧೆ

ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ ನಡುವೆ ಸ್ಪರ್ಧೆ

ಮೊದಲ ಪಂದ್ಯದಲ್ಲಿ 28 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದ ಕೇದಾರ್ ಜಾದವ್ ಮತ್ತು ಹಾರ್ದಿಕ್ ಪಾಂಡ್ಯಾ ನಡುವೆ ಆಲ್‌ರೌಂಡರ್ ಸ್ಥಾನಕ್ಕಾಗಿ ಪೈಪೋಟಿ ಇದೆ. ಇಬ್ಬರಲ್ಲಿ ಒಬ್ಬರು ಮಾತ್ರವೇ ಆಡುವ ಹನ್ನೊಂದರಲ್ಲಿ ಸ್ಥಾನಗಿಟ್ಟಿಸಲಿದ್ದಾರೆ. ನಿಧಾನಗತಿಯ ಪಿಚ್‌ ಆದ್ದರಿಂದ ಸ್ಪಿನ್ನರ್ ಆದ ಕೇದಾರ್ ಜಾದವ್‌ ಆಯ್ಕೆ ಮಾಡುವ ಸಾಧ್ಯತೆ ಇದೆ. ಅಕಸ್ಮಾತ್ ಭುವನೇಶ್ವರ್ ಕುಮಾರ್ ಹೊರಗುಳಿದರೆ ಮಾತ್ರವೇ ಹಾರ್ದಿಕ್ ಪಾಂಡ್ಯ ಮತ್ತು ಕೇದಾರ್ ಜಾದವ್ ಇಬ್ಬರಿಗೂ ಅವಕಾಶ ದೊರೆಯಲಿದೆ. ಆಗ ಇವರಿಬ್ಬರ ಜತೆ ಶಾರ್ದೂಲ್ ಠಾಕೂರ್ ಪೈಪೋಟಿಯಲ್ಲಿರುತ್ತಾರೆ.

ಏಷ್ಯಾಕಪ್: ಭಾರತ-ಪಾಕಿಸ್ತಾನ ಮುಖಾಮುಖಿಯ ಕುತೂಹಲಕಾರಿ ಅಂಶಗಳಿವು!

ಮನೀಶ್ ಪಾಂಡೆ ಮತ್ತು ಅಕ್ಷರ್ ಪಟೇಲ್‌ಗೆ ಇಲ್ಲ ಅವಕಾಶ

ಮನೀಶ್ ಪಾಂಡೆ ಮತ್ತು ಅಕ್ಷರ್ ಪಟೇಲ್‌ಗೆ ಇಲ್ಲ ಅವಕಾಶ

ಏಷ್ಯಾಕಪ್ ಟೂರ್ನಿಗೆ ಆಯ್ಕೆ ಆಗಿರುವ ಕರ್ನಾಟಕದ ಮನೀಶ್ ಪಾಂಡೆ ಮತ್ತು ಗುಜರಾತ್‌ನ ಆಲ್‌ರೌಂಡರ್ ಅಕ್ಷರ್ ಪಟೇಲ್‌ಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುವುದು ಕಷ್ಟ ಸಾಧ್ಯ. ಇಡೀ ಟೂರ್ನಿಯಲ್ಲಿ ಈ ಇಬ್ಬರೂ ಆಟಗಾರರು ಬೆಂಚು ಕಾಯಲೇ ಬೇಕಾದ ಪರಿಸ್ಥಿತಿ ಇದೆ.

ಬದಲಾಗದ ಆಟಗಾರರು

ಬದಲಾಗದ ಆಟಗಾರರು

ನಾಯಕ ರೋಹಿತ್ ಶರ್ಮಾ, ಕಳೆದ ಪಂದ್ಯದಲ್ಲಿ ಶತಕ ಭಾರಿಸಿರುವ ಶಿಖರ್ ಧವನ್, ಭರವಸೆಯ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊದಲ ಪಂದ್ಯದಲ್ಲಿ ವಿಫಲರಾಗಿರುವ ಮಹೇಂದ್ರ ಸಿಂಗ್ ಧೋನಿ ಇಷ್ಟು ಜನ ಆಟಗಾರರು ಬದಲಾಗುವುದಿಲ್ಲ. ಧೋನಿ ಫಾರ್ಮ್‌ನಲ್ಲಿ ಇಲ್ಲದಿದ್ದರೂ ಸಹಿತ ಅವರ ಅನುಭವದ ಮತ್ತು ತಂತ್ರಗಾರಿಕೆಯ ಅವಶ್ಯಕತೆ ತಂಡಕ್ಕೆ ಇರುವ ಕಾರಣ ಅವರನ್ನು ಬದಲಾಯಿಸುವ ಸಾಧ್ಯತೆ ಬಹಳ ಕಡಿಮೆ.

Story first published: Wednesday, September 19, 2018, 15:39 [IST]
Other articles published on Sep 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X