ಏಷ್ಯಾ ಕಪ್ 2018: ಭಾರತ-ಪಾಕಿಸ್ತಾನದ ಸರ್ವಕಾಲಿಕ 11 ಆಟಗಾರರಿವರು

By Sadashiva
Asia cup 2018-IND v/s PAK : ನೆನಪಿನಲ್ಲಿ ಉಳಿದ ಕ್ರಿಕೆಟ್ ಆಟಗಾರರಿವರು | Oneindia Kannada
Dhoni, Tendulkar, Imran and the all-time best India-Pakistan XI

ಬೆಂಗಳೂರು, ಸೆಪ್ಟೆಂಬರ್ 18: ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಕ್ರಿಕೆಟ್ ಜಗತ್ತಿಗೆ ಅನೇಕ ಪ್ರತಿಭಾನ್ವಿತರನ್ನು ಕೊಡುಗೆ ನೀಡಿದೆ. ಇತ್ತಂಡಗಳು ಅನೇಕ ರೋಚಕ ಪಂದ್ಯಗಳಿಗೂ ಸಾಕ್ಷಿಯಾಗಿದ್ದಿದೆ. ಸೆಪ್ಟೆಂಬರ್ 19ರಂದು ಏಷ್ಯಾಕಪ್ ನಲ್ಲಿ ಭಾರತ-ಪಾಕಿಸ್ತಾನ ತಂಡಗಳ ಮುಖಾಮುಖಿಗೂ ಮುನ್ನ ಎರಡೂ ತಂಡಗಳ ಸರ್ವಕಾಲಿಕ 11 ಆಟಗಾರರನ್ನು ಹೆಕ್ಕಿ ತೆಗೆಯೋಣವೆ?

ಒಡಿಐ: ತ್ವರಿತಗತಿಯಲ್ಲಿ 2 ಸಾವಿರ ರನ್ ಗಳಿಸಿದ ಟಾಪ್ 5 ಕ್ರಿಕೆಟರ್ಸ್

ಪಾಕಿಸ್ತಾನ ಮತ್ತು ಭಾರತ ತಂಡದಿಂದ 11 ಶ್ರೇಷ್ಠ ಆಟಗಾರರೆಂದರೆ ಇದು ಹಿಂದಿನಿಂದ ಹಿಡಿದು ಈವರೆಗಿನ ಮತ್ತು ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳನ್ನು ಪರಿಗಣಿಸಿ ಮಾಡಿರುವ ಪಟ್ಟಿಯಷ್ಟೆ. ಅದಕ್ಕೂ ಹೆಚ್ಚಾಗಿ ಕ್ರಿಕೆಟ್ ಹಾದಿಯಲ್ಲಿ ಬಂದು ಮಿನುಗಿದ ಆ(ಈ)ಗಿನ ಪ್ರತಿಭಾವಂತ ಆಟಗಾರರನ್ನು ಸ್ಮರಿಸಿಕೊಳ್ಳಲು ಇದೊಂದು ನೆಪವೆಂದುಕೊಂಡರೂ ಆದೀತು..

1. ಸಚಿನ್ ತೆಂಡೂಲ್ಕರ್
ಭಾರತ-ಪಾಕಿಸ್ತಾನ ಮುಖಾಮುಖಿಯ ಅನೇಕ ಪಂದ್ಯಗಳಿಗೆ ಸಾಕ್ಷಿಯಾದ ಶ್ರೇಷ್ಠ ಆಟಗಾರರಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಬ್ಬರು. 463 ಏಕದಿನ ಪಂದ್ಯಗಳ ಮೂಲಕ 18426 ರನ್ ದಾಖಲೆ ಹೊಂದಿರುವ ತೆಂಡೂಲ್ಕರ್ ಸ್ಪಿನ್ ಮತ್ತು ವೇಗಿ ಬೌಲರ್ ಗಳಿಬ್ಬರನ್ನೂ ಬೆವರಿಳಿಸಿದವರು.

2. ಸಯೀದ್ ಅನ್ವರ್
ಏಕದಿನ ಕ್ರಿಕೆಟ್ ನಲ್ಲಿ 247 ಪಂದ್ಯಗಳ ಮೂಲಕ 8824 ರನ್ ಸಾಧನೆ ಹೊಂದಿರುವ ಪಾಕಿಸ್ತಾನದ ಆರಂಭಿಕ ಆಟಗಾರ ಸಯೀದ್ ಅನ್ವರ್ ಅವರು ಅದ್ಭುತ ಆಟಗಾರ. ಸಾಂಪ್ರದಾಯಿಕ ಎದುರಾಳಿ ಭಾರತದೆದುರು ಸಯೀದ್ ಅವರ 194 ರನ್ ದಾಖಲೆ ದೀರ್ಘಕಾಲ ಉಳಿದಿತ್ತು.

3. ರೋಹಿತ್ ಶರ್ಮಾ
ಏಕದಿನ ಕ್ರಿಕೆಟ್ ನಲ್ಲಿ 5 ಮಂದಿ ಆಟಗಾರರು ಒಟ್ಟು 8 ಬಾರಿ 200 ರನ್ ಗಡಿ ದಾಟಿಸಿದ್ದಾರೆ. ಅದರಲ್ಲಿ ಭಾರತದ ರೋಹಿತ್ ಶರ್ಮಾ ಅಗ್ರ ಸ್ಥಾನದಲ್ಲಿದ್ದಾರೆ. ಏಕದಿನದಲ್ಲಿ 264 ರನ್ ಸಿಡಿಸಿರುವ ರೋಹಿತ್ ಏಕದಿನದಲ್ಲಿ ವೈಯಕ್ತಿಕ ಅಧಿಕ ರನ್ ಸರದಾರ.

4. ವಿರಾಟ್ ಕೊಹ್ಲಿ
ಕ್ರಿಕೆಟ್ ಮೈದಾನದಲ್ಲಿ ಈಗಿನ ಬಹು ಆಕರ್ಷಣೀಯ ಆಟಗಾರರಲ್ಲಿ ವಿರಾಟ್ ಕೊಹ್ಲಿ ಒಬ್ಬರು. 211 ಏಕದಿನ ಪಂದ್ಯಗಳಲ್ಲಿ ವಿರಾಟ್ 9779 ರನ್ ಸಾಧನೆ ಹೊಂದಿದ್ದಾರೆ. ಏಕದಿನದಲ್ಲಿ ಕೊಹ್ಲಿ 35 ಶತಕದ ಸಾಧನೆಯೊಂದಿಗೆ ಸದ್ಯ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

5. ಜಾವೆದ್ ಮಿಯಾಂದಾದ್
ಏಕದಿನ ಕ್ರಿಕೆಟ್ ನಲ್ಲಿ ಮಿನುಗಿದ್ದ ಪಾಕಿಸ್ತಾನದ ಖ್ಯಾತ ಆಟಗಾರ ಜಾವೆದ್ ಮಿಯಾಂದಾದ್. 1986 ಆಸ್ಟ್ರೇಲ್-ಏಷ್ಯಾಕಪ್ ಪಂದ್ಯದಲ್ಲಿ ಜಾವೆದ್ ಕೊನೆಯ ಬಾಲ್ ಗೆ ಸಿಕ್ಸ್ ಬಾರಿಸಿ ಭಾರತದೆದುರು ಪಾಕಿಸ್ತಾನವನ್ನು ಗೆಲ್ಲಿಸಿದ್ದನ್ನು ಮರೆಯುವಂತಿಲ್ಲ.

6. ಎಂಎಸ್ ಧೋನಿ
ಇತ್ತೀಚೆಗೆ ಕೊಂಚ ಪ್ರಖರತೆಯನ್ನು ಕಳೆದುಕೊಂಡಿದ್ದರೂ ಮಹೇಂದ್ರ ಸಿಂಗ್ ಧೋನಿ ಒಬ್ಬ ಅದ್ಭುತ ಆಟಗಾರ ಎನ್ನುವುದರಲ್ಲಿ ಅನುಮಾನವೇ ಇಲ್ಲ. 321 ಏಕದಿನ ಪಂದ್ಯಗಳಲ್ಲಿ ಧೋನಿ 10046 ರನ್ ಗಳಿಸಿರುವ ಶ್ರೇಷ್ಠ ಆಟಗಾರ. ಅಲ್ಲದೆ 2011ರಲ್ಲಿ ಏಕದಿನ ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ ತಂಡದ ಶ್ರೇಷ್ಠ ನಾಯಕ ಧೋನಿ.

7. ಕಪಿಲ್ ದೇವ್
ಕಪಿಲ್ ದೇವ್ ಕ್ರಿಕೆಟ್ ಜಗತ್ತಿನ ಸರ್ವಾಂಗಿಣ ಶ್ರೇಷ್ಠ ಆಟಗಾರರಲ್ಲೊಬ್ಬರು. 225 ಏಕದಿನ ಪಂದ್ಯಗಳನ್ನು ಆಡಿರುವ ಕಪಿಲ್ 253 ವಿಕೆಟ್ ಗಳೊಂದಿಗೆ 3783 ರನ್ ಸಾಧನೆ ಹೊಂದಿದ್ದಾರೆ. 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದವರು ಕಪಿಲ್ ದೇವ್.

8. ಇಮ್ರಾನ್ ಖಾನ್
ಪಾಕಿಸ್ತಾನದ ಬೌಲಿಂಗ್ ದೈತ್ಯ ಇಮ್ರಾನ್ ಖಾನ್. 1992ರ ವಿಶ್ವಕಪ್ ವಿಜೇತ ಪಾಕಿಸ್ತಾನ ತಂಡದ ಪ್ರಮುಖ ಆಟಗಾರರೂ ಆಗಿದ್ದ ಇಮ್ರಾನ್ ಆಡಿರುವ 175 ಏಕದಿನ ಪಂದ್ಯಗಳಲ್ಲಿ 182 ವಿಕೆಟ್ ಗಳನ್ನು ಉರುಳಿಸಿದ್ದರು. 3709 ರನ್ ಸಾಧನೆಯನ್ನೂ ಮಾಡಿದ್ದರು.

9. ವಾಸಿಮ್ ಅಕ್ರಮ್
ಏಕದಿನ ಕ್ರಿಕೆಟ್ ನಲ್ಲಿ 500 ವಿಕೆಟ್ ದಾಖಲೆ ಮೆರೆದ ಮೊದಲ ಆಟಗಾರ ವಾಸಿಮ್ ಅಕ್ರಮ್. 356 ಏಕದಿನ ಪಂದ್ಯಗಳನ್ನಾಡಿರುವ ಅಕ್ರಮ್ 3.8 ಎಕಾನಮಿ ಹೊಂದಿದ್ದರು. ಪಾಕಿಸ್ತಾನದ ಹೆಮ್ಮೆಯ ಆಟಗಾರರಲ್ಲಿ ವಾಸಿಮ್ ಕೂಡ ಒಬ್ಬರು.

10. ಅನಿಲ್ ಕುಂಬ್ಳೆ
ಭಾರತದ ಬೌಲಿಂಗ್ ವಿಭಾಗದಲ್ಲಿ ಮಿಂಚಿದ್ದ ಅನಿಲ್ ಕುಂಬ್ಳೆ ಕನ್ನಡ ನಾಡಿನ ಹೆಮ್ಮೆಯ ಆಟಗಾರ. ಲೆಗ್ ಸ್ಪಿನ್ನರ್ ಆಗಿದ್ದ ಕುಂಬ್ಳೆ 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಕೆಡವಿದ್ದರು.

11. ಸಕ್ಲೈನ್ ​​ಮುಷ್ತಾಕ್
ದೂಸ್ರಾ ಮಾದರಿಯ ಬೌಲಿಂಗ್ ನ ಮೊದಲ ಬೌಲರ್ ಸಕ್ಲೈನ್. ಪಾಕಿಸ್ತಾನದ ಈ ಪ್ರತಿಭಾನ್ವಿತ ಆಟಗಾರ 169 ಪಂದ್ಯಗಳಲ್ಲಿ 288 ವಿಕೆಟ್ ಉರುಳಿಸಿದ್ದರು.

For Quick Alerts
ALLOW NOTIFICATIONS
For Daily Alerts

  ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

  Story first published: Tuesday, September 18, 2018, 23:44 [IST]
  Other articles published on Sep 18, 2018
  POLLS

  myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more