ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್ : ಭಾರತದ ಕಿರಿಯರು ವಿಶ್ವ ಚಾಂಪಿಯನ್

By Manjunatha
India under19 team won in finals of world cup against Australia

ಟೌರಂಗಾ(ನ್ಯೂಜಿಲೆಂಡ್), ಫೆಬ್ರವರಿ 3: ನ್ಯೂಜಿಲೆಂಡಿನ ಟೌರಂಗಾ ದಲ್ಲಿ ಇಂದು(ಫೆ.3) ನಡೆದ ಐಸಿಸಿ ಅಂಡರ್ 19 ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ಭಾರತದ ಕಿರಿಯರ ತಂಡ ವಿಶ್ವಕಪ್‌ ಜಯಿಸಿದೆ.

ವಿಶ್ವಕಪ್‌ ಗೆಲ್ಲುವ ಮೂಲಕ ನಾಲ್ಕು ಬಾರಿ ವಿಶ್ವಕಪ್ ಗೆದ್ದ ಗರಿಮೆಯನ್ನು ಭಾರತದ ಕಿರಿಯರ ಕ್ರಿಕೆಟ್ ತಂಡ ತನ್ನ ಮುಡಿಗೆ ಸಿಕ್ಕಿಸಿಕೊಂಡಿದೆ. ಬ್ಯಾಟಿಂಗ್, ಬೌಲಿಂಗ್, ಫಿಲ್ಡಿಂಗ್ ಮುರೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಅಂಡರ್ 19 ತಂಡ ಅನಾಯಾಸವಾಗಿ ಗೆಲವು ಸಾಧಿಸಿತು.

ಸ್ಕೋರ್ ಕಾರ್ಡ್

ಗೆಲುವಿನ ಕೊನೆಯ ರನ್ ಭಾರಿಸುತ್ತಿದ್ದಂತೆ ಅಂಗಳಕ್ಕೆ ಓಡುತ್ತಾ ಇಳಿದ ಭಾರತದ ಎಳೆ ಹುಲಿಗಳು ಹಾರಾಡಿ, ಖುಷಿಯಿಂದ ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದರು. ಈ ಮುಂಚೆ ಮೊಹಮ್ಮದ್ ಕೈಪ್, ವಿರಾಟ್ ಕೊಹ್ಲಿ, ಉನ್ಮುಕ್ತ್‌ ಚಾಂದ್ ಅವರ ನಾಯತ್ವದಲ್ಲಿ ಭಾರತದ ಅಂಡರ್‌19 ಪುರುಷರ ತಂಡ ವಿಶ್ವಕಪ್ ಜಯಿಸಿತ್ತು. ಈಗ ಪೃಥ್ವಿ ಶಾ ಅವರ ತಂಡವೂ ಇದೇ ಸಾಲಿಗೆ ಸೇರಿಕೊಂಡಿದೆ.

ಆಸ್ಟ್ರೇಲಿಯಾ ನೀಡಿದ್ದ 217 ರನ್ ಗುರಿಯನ್ನು ಕೇವಲ 2 ವಿಕೆಟ್ ಕಳೆದುಕೊಂಡು ಪೂರೈಸಿದ ಭಾರತ ಕಿರಿಯರ ತಂಡ ಇದಕ್ಕೆ ತೆಗೆದುಕೊಂಡಿದ್ದು 38.5 ಓವರ್‌ಗಳನ್ನಷ್ಟೆ. 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ಕಿರಿಯರು ಈಗ ವಿಶ್ವ ವಿಜೇತ ಕ್ರಿಕೆಟ್ ತಂಡದ ಗರಿಮೆ ಪಡೆದುಕೊಂಡಿದ್ದಾರೆ.

ಭಾರತದ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಮನ್‌ಜೋತ್ ಕಲ್ರಾ ಶತಕ ದಾಖಲಿಸಿ ಎದೆ ಉಬ್ಬಿಸಿದರು. 102 ಬಾಲ್‌ನಲ್ಲಿ ಅವರು 101 ರನ್ ಸಿಡಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದ ಮನ್‌ಜೋತ್ ಕಲ್ರಾ ಆರಂಭದಲ್ಲಿ ಭಿರುಸಿನ ಬ್ಯಾಟಿಂಗ್ ಮಾಡಿದರಾದರೂ ಎರಡನೇ ವಿಕೆಟ್ ಬೀಳುತ್ತಿದ್ದಂತೆ ಸಾವಧಾನವಾಗಿ ಒಂದೊಂದೇ ರನ್ ಕದಿಯುತ್ತಾ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಿದರು.

ಕಲ್ರಾ ಗೆ ಅತ್ಯುತ್ತಮ ಸಾಥ್‌ ನೀಡಿದ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ 21 ರನ್‌ ಗಳಿಸಿ ಔಟಾದರೆ ಶುಭಮನ್‌ ಗಿಲ್ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ನಂತರ ಕಾಲ್ರಾ ರನ್ನು ಸೇರಿಕೊಂಡ ವಿಕೆಟ್ ಕೀಪರ್ ಹಾರ್ವಿಕ್ ದೇಸಾಯಿ ಭಾರತವನ್ನು ಗೆಲುವಿನ ದಡ ಸೇರಿಸಿದರು.

ಏಳು ಜನ ಬೌಲರ್‌ಗಳ ಕೈಲಿ ಆಸ್ಟ್ರೇಲಿಯಾ ಬೌಲಿಂಗ್ ನಡೆಸಿದರೂ ಸಹಿತ ವಿಲ್ ಸೌತರ್‌ಲ್ಯಾಂಡ್ ಮತ್ತು ಪರಂ ಉಪ್ಪುಲ್ ಅವರು ತಲಾ ಒಂದು ವಿಕೆಟ್ ಪಡೆದದ್ದು ಬಿಟ್ಟರೆ ಯಾರಿಗೂ ಯಶಸ್ಸು ದೊರಕಲಿಲ್ಲ.

Story first published: Saturday, February 3, 2018, 14:17 [IST]
Other articles published on Feb 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X