ಮಳೆಯಲ್ಲಿ ಕೊಚ್ಚಿ ಹೋದ ಪಂದ್ಯ, ದ.ಆಫ್ರಿಕಾ ಮಹಿಳೆಯರ ತಂಡಕ್ಕೆ ನಿರಾಸೆ

Posted By:
India v/s south Africa women's t20 match washed out

ಸೆಂಚೂರಯನ್, ಫೆಬ್ರವರಿ 22: ಭಾರತ ಮತ್ತು ದ.ಆಫ್ರಿಕಾ ಮಹಿಳೆಯರ ಕ್ರಿಕೆಟ್ ತಂಡಗಳ ನಡುವಿನ 4ನೇ ಟಿ20 ಪಂದ್ಯ ಮಳೆಗೆ ಆಹುತಿಯಾಗಿದ್ದು, ಉತ್ತಮ ಲಯದಲ್ಲಿ ದ.ಆಫ್ರಿಕಾ ತಂಡಕ್ಕೆ ನಿರಾಸೆ ಮೂಡಿಸಿದೆ.

ಸೆಂಚೂರಿಯನ್‌ನಲ್ಲಿ ಆಯೋಜಿತವಾಗಿದ್ದ ಭಾರತ ಮತ್ತು ದ.ಆಫ್ರಿಕಾ ಮಹಿಳೆಯರ ಕ್ರಿಕೆಟ್ ತಂಡದ ನಡುವಿನ 5 ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಟಾಸ್ ಸೋತರು ದ.ಆಫ್ರಿಕಾ ಮೊದಲು ಬ್ಯಾಟಿಂಗ್‌ಗೆ ಇಳಿಯಿತು.

ಆರಂಭಿಕ ಬ್ಯಾಟ್ಸ್‌ವುಮನ್‌ಗಳಾದ ಲೀ ಮತ್ತು ನೈಕಿರ್ಕ್‌ ಅವರುಗಳು ಅತ್ಯುತ್ತಮ ಬ್ಯಾಟಿಂಗ್‌ನಿಂದಾಗಿ ದ.ಆಫ್ರಿಕಾ ಮಹಿಳೆಯರ ತಂಡವು 15.3 ಓವರ್‌ಗಳಲ್ಲಿ 130 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಮಳೆ ಬಂದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು.

ಆರಂಭಿಕ ಬ್ಯಾಟ್ಸ್‌ವುಮನ್‌ಗಳಾದ ಲೀ 38 ಬಾಲ್‌ಗಳಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿ ಭಾರಿಸಿ 58 ರನ್ ಗಳಿಸಿದ್ದರು. ನೈಕಿರ್ಕ್‌ ಅವರು 47 ಎಸೆತದಲ್ಲಿ 2 ಸಿಕ್ಸರ್‌ , 6 ಬೌಂಡರಿ ಬಾರಿಸಿ 55 ರನ್ ಗಳಿಸಿ ಔಟಾದರು. ದ.ಆಫ್ರಿಕಾ ಇನ್ನಿಂಗ್ಸ್‌ ಇತ್ತಮವಾಗಿ ಸಾಗುತ್ತಿದ್ದಾಗಲೇ ಮಳೆ ಬಂದು ದ.ಆಫ್ರಿಕಾ ಮಹಿಳೆಯರ ಗೆಲ್ಲುವ ಆಸೆಗೆ ತಣ್ಣೀರು ಸುರಿಯಿತು.

ಸರಣಿಯಲ್ಲಿ ಈಗಾಗಲೇ ಭಾರತ ಮಹಿಳೆಯರು 2-1 ರಿಂದ ಮುನ್ನಡೆ ಸಾಧಿಸಿದ್ದು, ಕೊನೆಯ ಪಂದ್ಯವನ್ನು ಭಾರತ ಗೆದ್ದಲ್ಲಿ ಸರಣಿ ಕೈವಶ ಮಾಡಿಕೊಳ್ಳಲಿದೆ. ಆ ಪಂದ್ಯವನ್ನು ದ.ಆಫ್ರಿಕಾ ಗೆದ್ದಲ್ಲಿ ಸರಣಿ ಸಮಬಲವಾಗಲಿದೆ.

Story first published: Thursday, February 22, 2018, 14:16 [IST]
Other articles published on Feb 22, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ