ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ನಾಲ್ಕನೇ ದಿನ ಮಳೆ ಇರುತ್ತಾ? ಇಲ್ಲಿದೆ ಹವಾಮಾನ ವರದಿ

India vs England First Test: Day 4 Nottingham weather report

ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಹುನಿರೀಕ್ಷಿತ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಬುಧವಾರದಂದು (ಆಗಸ್ಟ್ 4) ಇಂಗ್ಲೆಂಡ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನವನ್ನೇನೂ ನೀಡಲಿಲ್ಲ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಟೀಮ್ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು 183 ರನ್‌ಗಳಿಗೆ ತಮ್ಮ ಮೊದಲ ಇನ್ನಿಂಗ್ಸ್‌ ಆಟವನ್ನು ಅಂತ್ಯಗೊಳಿಸಿದರು. ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್ 64 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಕೂಡ 30 ರನ್ ಗಡಿ ದಾಟಲೇ ಇಲ್ಲ. ಹೀಗೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳನ್ನು 183 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಯಶಸ್ವಿಯಾದರು.

ತನ್ನ ಟೆಸ್ಟ್ ದಾಖಲೆ ಮುರಿದ ಆ್ಯಂಡರ್ಸನ್ ಕುರಿತು ಪ್ರತಿಕ್ರಿಯಿಸಿದ ಅನಿಲ್ ಕುಂಬ್ಳೆತನ್ನ ಟೆಸ್ಟ್ ದಾಖಲೆ ಮುರಿದ ಆ್ಯಂಡರ್ಸನ್ ಕುರಿತು ಪ್ರತಿಕ್ರಿಯಿಸಿದ ಅನಿಲ್ ಕುಂಬ್ಳೆ

ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ ನಂತರ ಭಾರತದ ಬ್ಯಾಟ್ಸ್‌ಮನ್‌ಗಳು ಮೊದಲನೇ ತಮ್ಮ ಪಾಲಿನ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದರು. ಭಾರತದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಉತ್ತಮ ಆರಂಭವನ್ನು ಪಡೆದುಕೊಂಡರು. ರೋಹಿತ್ ಶರ್ಮಾ 36 ರನ್ ಗಳಿಸಿ ಔಟ್ ಆದರೆ ನಂತರ ಬಂದ ಚೇತೇಶ್ವರ್ ಪೂಜಾರ 4, ವಿರಾಟ್ ಕೊಹ್ಲಿ 0, ಅಜಿಂಕ್ಯಾ ರಹಾನೆ 5, ರಿಷಭ್ ಪಂತ್ 25, ರವೀಂದ್ರ ಜಡೇಜಾ 56, ಶಾರ್ದೂಲ್ ಠಾಕೂರ್ 0, ಮೊಹಮ್ಮದ್ ಶಮಿ 13, ಜಸ್ಪ್ರೀತ್ ಬುಮ್ರಾ 28 ಹಾಗೂ ಮೊಹಮ್ಮದ್ ಸಿರಾಜ್ ಅಜೇಯ 7 ರನ್ ಗಳಿಸಿದರು. ಹೀಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 278 ರನ್‌ಗಳಿಗೆ ಆಲ್ಔಟ್ ಆಗುವುದರ ಮೂಲಕ 95 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ಭಾರತದ ಪರ 84 ರನ್ ಗಳಿಸಿದ ಕೆಎಲ್ ರಾಹುಲ್ ಮೆಚ್ಚುಗೆ ಪಡೆದುಕೊಂಡರು. ತದನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 25 ರನ್ ಗಳಿಸಿ ಯಾವುದೇ ವಿಕೆಟ್ ನಷ್ಟವಿಲ್ಲದೆ ನಾಲ್ಕನೇ ದಿನದಾಟವನ್ನು ಆರಂಭಿಸಲು ಕಾಯುತ್ತಿದೆ.

ಕೆಎಲ್ ರಾಹುಲ್‌ನ್ನು ದಿಗ್ಗಜ ಕ್ರಿಕೆಟಿಗನಿಗೆ ಹೋಲಿಸಿದ ಜಹೀರ್ ಖಾನ್ಕೆಎಲ್ ರಾಹುಲ್‌ನ್ನು ದಿಗ್ಗಜ ಕ್ರಿಕೆಟಿಗನಿಗೆ ಹೋಲಿಸಿದ ಜಹೀರ್ ಖಾನ್

ಮೊದಲನೇ ದಿನ ಯಾವುದೇ ಮಳೆಯಿಲ್ಲದೆ ನಡೆದಿದ್ದ ಪಂದ್ಯಕ್ಕೆ ಎರಡನೇ ದಿನ ಮಳೆ ಅಡ್ಡಿಯಾಗಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಅದೇ ರೀತಿ ಮೂರನೇ ದಿನವೂ ಸಹ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಹೀಗಾಗಿ ಎರಡನೇ ಮತ್ತು ಮೂರನೇ ದಿನ ಕಡಿಮೆ ಓವರ್‌ಗಳ ಆಟ ಮಾತ್ರ ನಡೆದಿದೆ. ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಶನಿವಾರದಂದು ನಡೆಯಲಿದ್ದು ಈ ದಿನವಾದರೂ ವರುಣ ಬರದೇ ಇದ್ದರೆ ಪಂದ್ಯ ಒಂದು ಹಂತಕ್ಕೆ ಬಂದು ತಲುಪಲಿದೆ ಎಂಬುದು ಕ್ರೀಡಾಭಿಮಾನಿಗಳ ಕೋರಿಕೆ. ನಾಲ್ಕನೆಯ ದಿನ ಮಳೆ ಬರುತ್ತಾ ಅಥವಾ ಮೊದಲ ದಿನದ ಹಾಗೆ ಸರಾಗವಾಗಿ ಆಟ ನಡೆಯಲಿದೆಯಾ? ಎಂಬ ಮಾಹಿತಿ ಮುಂದೆ ಓದಿ

ಬೆಳ್ಳಂಬೆಳಿಗ್ಗೆಯೇ ಮೋಡ ಕವಿದ ವಾತಾವರಣ

ಬೆಳ್ಳಂಬೆಳಿಗ್ಗೆಯೇ ಮೋಡ ಕವಿದ ವಾತಾವರಣ


ಇಂಗ್ಲೆಂಡ್‌ನ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಾಲ್ಕನೇ ದಿನದ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಉಂಟಾಗಿದೆ. ನಗರದ ತುಂಬಾ ಕಪ್ಪು ಮೋಡ ಆವರಿಸಿದ್ದು ಎರಡು ಮತ್ತು ಮೂರನೇ ದಿನಗಳಿಗೆ ಹೋಲಿಸಿದರೆ ನಾಲ್ಕನೇ ದಿನ ತುಸು ಬೇಗನೆ ಮಳೆಯ ಆಗಮನವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೋಡ ಕವಿದ ವಾತಾವರಣ ಇರುವ ಕಾರಣ ನಾಲ್ಕನೇ ದಿನದಾಟ ಬೆಳಿಗ್ಗೆ ಆರಂಭವಾಗಬಹುದು ಆದರೆ ಮಧ್ಯಾಹ್ನ ಮತ್ತು ಸಂಜೆಯ ವೇಳೆಯಲ್ಲಿ ಮಳೆಯ ಕಾಟ ತಪ್ಪಿದ್ದಲ್ಲ ಎಂದು ಹವಾಮಾನ ವರದಿ ತಿಳಿಸಿದ್ದು ನಾಲ್ಕನೇ ದಿನ ಕೂಡ ಸಂಪೂರ್ಣ ಆಟ ನಡೆಯುವುದು ಅನುಮಾನವಾಗಿದೆ.

ಪಂದ್ಯ ಡ್ರಾ ಆಗುವ ಅನುಮಾನ

ಪಂದ್ಯ ಡ್ರಾ ಆಗುವ ಅನುಮಾನ

ಮೊದಲನೇ ದಿನ ಯಾವುದೇ ಅಡೆತಡೆಯಿಲ್ಲದೆ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಎರಡನೇ ಮತ್ತು ಮೂರನೇ ದಿನ ಮಳೆಯ ಹೊಡೆತಕ್ಕೆ ಸಿಕ್ಕು ವಿಫಲತೆಯನ್ನು ಕಂಡಿದೆ. ಅಷ್ಟೇ ಅಲ್ಲದೆ ನಾಲ್ಕನೇ ದಿನವೂ ಸಹ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳುತ್ತಿದ್ದು ಇಂಗ್ಲೆಂಡ್ ತಂಡ ಈ ದಿನ ಪೂರ್ತಿ ಬ್ಯಾಟಿಂಗ್ ಮಾಡಿ ನಾಳೆಯೂ ಬ್ಯಾಟಿಂಗ್ ಮಾಡಿದರೆ ಪಂದ್ಯ ಡ್ರಾ ಆಗುವ ಸಾಧ್ಯತೆಯಿದೆ. ಹವಾಮಾನ ವರದಿ ಪ್ರಕಾರ ನಾಳೆಯೂ ಮಳೆಯಾಗುವ ಸಾಧ್ಯತೆಯಿದ್ದು ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಗಿಸಿ ನಂತರ ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿ ಇಂಗ್ಲೆಂಡ್ ನೀಡುವ ಗುರಿಯನ್ನು ತಲುಪಬೇಕಾಗುತ್ತದೆ, ಆದರೆ ಇಂದು ಮತ್ತು ನಾಳೆ ಸುರಿಯುವ ಮಳೆಯಲ್ಲಿ ಎರಡೂ ತಂಡಗಳು ಬ್ಯಾಟಿಂಗ್ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಸಿರಾಜ್ & ಆಂಡರ್ಸನ್ ನಡುವೆ ಪಂದ್ಯದ ವೇಳೆ ಮಾತಿನ ಚಕಮಕಿ, ವಿಡಿಯೋ ವೈರಲ್ | Oneindia Kannada
ಜೇಮ್ಸ್ ಆ್ಯಂಡರ್ಸನ್ ವಿಶ್ವದಾಖಲೆ!

ಜೇಮ್ಸ್ ಆ್ಯಂಡರ್ಸನ್ ವಿಶ್ವದಾಖಲೆ!

ಒಂದೆಡೆ ಪಂದ್ಯ ನಿರೀಕ್ಷಿಸದ ರೀತಿ ನಡೆಯದೆ ಇದ್ದರೂ ಸಹ ಜೇಮ್ಸ್ ಆ್ಯಂಡರ್ಸನ್ ಮಾತ್ರ ಇದೇ ಪಂದ್ಯದ ಮೂಲಕ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು ಭಾರತ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದು ಮಿಂಚಿದ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್‍ನಲ್ಲಿ 621 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ವಿಶ್ವ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜೇಮ್ಸ್ ಆ್ಯಂಡರ್ಸನ್ ಮೂರನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮೊದಲು ಮೂರನೇ ಸ್ಥಾನದಲ್ಲಿದ್ದ ಅನಿಲ್ ಕುಂಬ್ಳೆ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ 619 ವಿಕೆಟ್‍ಗಳನ್ನು ಪಡೆದಿದ್ದಾರೆ. ಈ ಮೂಲಕ ಮೂರನೇ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆಯನ್ನು ಹಿಂದಿಕ್ಕಿ ಜೇಮ್ಸ್ ಆ್ಯಂಡರ್ಸನ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

Story first published: Saturday, August 7, 2021, 14:29 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X