ಭಾರತ vs ಇಂಗ್ಲೆಂಡ್: ಭಾರತದ ಆಟಗಾರರ ಕೋವಿಡ್ ಫಲಿತಾಂಶ ನೆಗೆಟಿವ್

ಲಂಡನ್: ಭಾರತ vs ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ಎಲ್ಲಾ ಆಟಗಾರರ ಫಲಿತಾಂಶ ನೆಗೆಟಿವ್ ಬಂದಿರುವುದರಿಂದ ಭಾರತ ತಂಡ ನಿರಾಳವಾಗಿದೆ. ಹೀಗಾಗಿ ಸೆಪ್ಟೆಂಬರ್‌ 10ರಂದು ಮ್ಯಾನ್ಚೆಸ್ಟರ್‌ನಲ್ಲಿ ನಡೆಯಲಿರುವ ಕೊನೇ ಟೆಸ್ಟ್ ಪಂದ್ಯ ವೇಳಾಪಟ್ಟಿಯಂತೆ ನಡೆಯುವುದನ್ನು ನಿರೀಕ್ಷಿಸಲಾಗಿದೆ.

ಒಂದೇ ಓವರ್‌ನಲ್ಲಿ 6 ಸಿಕ್ಸ್ ಚಚ್ಚಿದ ಭಾರತ ಮೂಲದ ಯುಎಸ್‌ಎ ಕ್ರಿಕೆಟರ್!ಒಂದೇ ಓವರ್‌ನಲ್ಲಿ 6 ಸಿಕ್ಸ್ ಚಚ್ಚಿದ ಭಾರತ ಮೂಲದ ಯುಎಸ್‌ಎ ಕ್ರಿಕೆಟರ್!

ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಫಿಸಿಯೋ ನಿತಿನ್ ಪಾಟೆಲ್‌, ಮತ್ತೊಬ್ಬ ಬೆಂಬಲ ಸಿಬ್ಬಂದಿ ಜೂನಿಯರ್ ಫಿಸಿಯೋ ಯೋಗೇಶ್ ಪಾರ್ಮರ್ ಅವರ ಕೋವಿಡ್ ಫಲಿತಾಂಶಗಳು ಪಾಸಿಟಿವ್ ಬಂದಿದ್ದರಿಂದ ಭಾರತೀಯ ಕ್ರಿಕೆಟ್ ತಂಡಕ್ಕೂ ಆತಂಕವಿತ್ತು.

ಮಾಹಿತಿ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ ಶಾ
ಗುರುವಾರ (ಸೆಪ್ಟೆಂಬರ್‌ 9) ಲಂಡನ್‌ನಲ್ಲಿ ಬೆಳಗ್ಗೆ 5.30 AM (ಭಾರತೀಯ ಕಾಲಮಾನ 10 PM) ವೇಳೆಗೆ ಪರೀಕ್ಷೆಗೆ ಒಳಗಾದ ಎಲ್ಲಾ ಆಟಗಾರರ ಆರ್‌ಟಿ-ಪಿಸಿಆರ್‌ ಫಲಿತಾಂಶ ಬಂದಿದ್ದು, ಎಲ್ಲರ ಫಲಿತಾಂಶ ನೆಗೆಟಿವ್ ಆಗಿದೆ. ಹೀಗಾಗಿ ಐದನೇ ಟೆಸ್ಟ್‌ನ ವೇಳಾಪಟ್ಟಿ ಬದಲಾಗುವ ಆತಂಕ ತಪ್ಪಿದೆ. ಹಿಂದಿನ ವೇಳಾಪಟ್ಟಿಯಂತೆ ಮ್ಯಾನ್ಚೆಸ್ಟರ್ ಟೆಸ್ಟ್‌ ನಡೆಯಲಿದೆ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಕಾರ್ಯದರ್ಶಿ ಜಯ್‌ ಶಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಟಗಾರರ ಫಲಿತಾಂಶ ನೆಗೆಟಿವ್ ಬಂದಿರುವುದರಿಂದ ಭಾರತೀಯ ತಂಡ ಐದನೇ ಪಂದ್ಯ ಆಡಲಿದೆ ಎಂದು ಶಾ ಹೇಳಿದ್ದಾರೆ. ಐದು ಪಂದ್ಯಗಳ ಟೆಸ್ಟ್‌ ಸರಣಿಯೀಗ 2-1ರಿಂದ ಭಾರತದ ವಶದಲ್ಲಿದ್ದು, ಸರಣಿ ವಿಜೇತರನ್ನು ಕೊನೇ ಟೆಸ್ಟ್ ನಿರ್ಧರಿಸಲಿದೆ.

ಬಿಗ್‌ ಬಾಸ್ ಸ್ಪರ್ಧಿಯ ತಂಗಿಯ ಜೊತೆ ದೀಪಕ್ ಚಾಹರ್ ಡೇಟಿಂಗ್?!ಬಿಗ್‌ ಬಾಸ್ ಸ್ಪರ್ಧಿಯ ತಂಗಿಯ ಜೊತೆ ದೀಪಕ್ ಚಾಹರ್ ಡೇಟಿಂಗ್?!

ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಆಡುವ ನಿರೀಕ್ಷೆ
ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆರಂಭಿಕ ಪಂದ್ಯ ಡ್ರಾ ಎನಿಸಿತ್ತು. ದ್ವಿತೀಯ ಪಂದ್ಯದಲ್ಲಿ ಭಾರತ 151 ರನ್ ಜಯ ಗಳಿಸಿತ್ತು. ತೃತೀಯ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಇನ್ನಿಂಗ್ಸ್‌ ಸಹಿತ 76 ರನ್ ಜಯ ಗಳಿಸಿತ್ತು. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 157 ರನ್ ಜಯ ಗಳಿಸಿತ್ತು. ಈಗ ಭಾರತ 2-1ರಿಂದ ಸರಣಿ ಮುನ್ನಡೆಯಲ್ಲಿದೆ.
ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಡಿದ್ದ ರೋಹಿತ್ ಶರ್ಮಾ ಪಂದ್ಯದ ವೇಳೆ ಚೆಂಡಿನಿಂದ ಗಾಯಕ್ಕೀಡಾಗಿದ್ದರು. ಐದನೇ ಟೆಸ್ಟ್‌ ವೇಳೆ ರೋಹಿತ್ ಆಡುವುದಾಗಿ ಹೇಳಿದ್ದರು. ಅವರೇ ಹೇಳಿರುವ ಪ್ರಕಾರ, ಐದನೇ ಟೆಸ್ಟ್‌ ವೇಳೆ ಶರ್ಮಾ ಗುಣಮುಖರಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಗಾಯಕ್ಕೀಡಾಗಿದ್ದ ಮತ್ತೊಬ್ಬ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಕೂಡ ಆಡುವ ಸಾಧ್ಯತೆಯಿದೆ.

ಭಾರತ ಸರಣಿ ಗೆಲ್ಲದೆ 14 ವರ್ಷಗಳ ಕಳೆದಿವೆ
ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯೊಂದನ್ನು ಗೆಲ್ಲದೆ ಭಾರತ ತಂಡ ಬರೋಬ್ಬರಿ 14 ವರ್ಷಗಳನ್ನು ಕಳೆದಿದೆ. ಕಳೆದ ಬಾರಿ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೆಂದರೆ 2007ರಲ್ಲಿ. 2007ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಗೆದ್ದಿತ್ತು. ಈ ವೇಳೆ ಎರಡು ಪಂದ್ಯಗಳು ಡ್ರಾ ಅನ್ನಿಸಿದ್ದವು. ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್ ಜಯ ಗಳಿಸಿತ್ತು. ಅದಾದ ಬಳಿಕ 2011, 2014 ಮತ್ತು 2018ರಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಿತ್ತು. ಇದರಲ್ಲಿ ಯಾವುದರಲ್ಲೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆಲ್ಲಲು ತಂಡಕ್ಕೆ ಅವಕಾಶವಿದೆ. ಮುಂಬರಲಿರುವ ಟೆಸ್ಟ್‌ನಲ್ಲಿ ಭಾರತ ಗೆದ್ದರೆ 14 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದ ದಾಖಲೆಗೆ ವಿರಾಟ್ ಕೊಹ್ಲಿ ಪಡೆ ಕಾರಣವಾಗಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 23:36 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X