ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕಿಸ್ತಾನ: ಏಷ್ಯಾ ಕಪ್ ನಲ್ಲಿನ ಅವಿಸ್ಮರಣೀಯ ಪಂದ್ಯಗಳು

India vs Pakistan: The most memorable Asia Cup matches

ಬೆಂಗಳೂರು, ಸೆಪ್ಟೆಂಬರ್ 18: ಕ್ರಿಕೆಟ್ ಗೆ ಜಗದಗಲಕ್ಕೂ ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳಿದ್ದಾರೆ. ಕ್ರಿಕೆಟ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದೆಂದರೆ ಅಲ್ಲಿ ಕುತೂಹಲ, ರೋಚಕತೆ ಇನ್ನೂ ಹೆಚ್ಚು. ಭಾರತ-ಪಾಕ್ ಮುಖಾಮುಖಿಯ ಆ ರೋಚಕ ಕ್ಷಣ ಮತ್ತೆ ನಮ್ಮ ಕಣ್ಣ ಮುಂದೆ ಬರುವುದರಲ್ಲಿದೆ.

ಭಾರತ vs ಪಾಕಿಸ್ತಾನ: ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಮೇಲುಗೈ?ಭಾರತ vs ಪಾಕಿಸ್ತಾನ: ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಮೇಲುಗೈ?

ಕ್ರೀಡೆಯಲ್ಲಿ ಸಾಂಪ್ರದಾಯಿಕ ಎದುರಾಳಿಯಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ಕ್ರಿಕೆಟ್ ಗಾಗಿ ಬಹುಕಾಲದ ಬಳಿಕ ಮತ್ತೆ ಎದುರುಬದುರಾಗಲಿವೆ. ಬುಧವಾರ (ಸೆಪ್ಟೆಂಬರ್ 19) ದುಬೈಯ ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್ 5ನೇ ಪಂದ್ಯದಲ್ಲಿ ಇತ್ತಂಡಗಳು ಕಾದಾಟಕ್ಕಿಳಿಯಲಿವೆ.

ಭಾರತ-ಪಾಕ್ ಮುಖಾಮುಖಿಗೂ ಮುನ್ನ ಏಷ್ಯಾಕಪ್ ಹಿಂದಿನ ರೋಚಕ ದಿನಗಳನ್ನು ಒಮ್ಮೆ ಮೆಲುಕು ಹಾಕೋಣ.

ಕೊನೆಯ ಮುಖಾಮುಖಿ

ಕೊನೆಯ ಮುಖಾಮುಖಿ

ಲಂಡನ್ ನ ಓವಲ್ ಸ್ಟೇಡಿಯಂನಲ್ಲಿ 18 ಜೂನ್ 2017ರಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಕೊನೆಯ ಬಾರಿ ಪರಸ್ಪರ ಸೆಣಸಾಟ ನಡೆಸಿದ್ದವು. ಅದಾಗಿ ಮತ್ತೆ ಬುಧವಾರ ಇತ್ತಂಡಗಳು ಸವಾಲು ಸ್ವೀಕರಿಸುವುದರಲ್ಲಿದೆ.

ಭಾರತವನ್ನು 1 ವಿಕೆಟ್ ನಿಂದ ಸೋಲಿಸಿದ್ದ ಪಾಕ್

ಭಾರತವನ್ನು 1 ವಿಕೆಟ್ ನಿಂದ ಸೋಲಿಸಿದ್ದ ಪಾಕ್

ಅಂದು ಮಾರ್ಚ್ 2, 2014. ಧಾಕಾದಲ್ಲಿ ಏಷ್ಯಾಕಪ್ ಗಾಗಿ ಭಾರತ-ಪಾಕ್ ಪಂದ್ಯಕ್ಕಿಳಿದಿತ್ತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ 50 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದು 245 ರನ್ ಪೇರಿಸಿ ಎದುರಾಳಿಗೆ 246 ರನ್ ಗುರಿ ನೀಡಿತ್ತು.
ಪಾಕ್ ಇನ್ನಿಂಗ್ಸ್ ಗೆ ಇಳಿದಿತ್ತು. ಅಂತಿಮ ಓವರ್ ನ ಮೊದಲ ಎಸೆತಕ್ಕೆ ಪಾಕ್ ಆಟಗಾರ ಸಾಯೀದ್ ಅಜ್ಮಲ್ 0 ರನ್ ನಿಂದ ಬೌಲ್ಡ್ ಆಗಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿ ನಡೆದರು. ಭಾರತ ಗೆಲುವಿನ ಅಂಚಿನಲ್ಲಿ ನಿಂತು ಸಂಭ್ರಮಿಸಿತು. ಯಾಕೆಂದರೆ ಪಾಕ್ ಗೆ 5 ಎಸೆತಕ್ಕೆ 10 ರನ್ನಿನ ಅವಶ್ಯಕತೆಯಿತ್ತು. ಆಗಲೇ ಪಾಕ್ ನ 9 ವಿಕೆಟ್ ಉರುಳಿಯಾಗಿತ್ತು. ಅಶ್ವಿನ್ ಅವರ ಕೊನೆಯ ಓವರ್ ನ ಎರಡನೇ ಎಸೆತದಲ್ಲಿ ಜುನೈದ್ ಖಾನ್ ಸಿಂಗಲ್ ರನ್ ಕದ್ದು ಪಾಕ್ ಗಾಗಿ ಉಳಿದಿದ್ದ ಕೊನೆಯ ಭರವಸೆ ಅಫ್ರಿದಿಗೆ ಆಡಲು ಅವಕಾಶ ಮಾಡಿಕೊಟ್ಟರು. ಅಲ್ಲಿಗೆ ಸ್ಟೋರಿ ಫಿನಿಷ್; ಅಶ್ವಿನ್ ಅವರ 3 ಮತ್ತು 4ನೇ ಎಸೆತವನ್ನು ಅಫ್ರಿದಿ ಸಿಕ್ಸ್ ಲೈನ್ ಗೆ ಅಟ್ಟಿದರು! 50 ಓವರ್ ಗೆ ಇನ್ನೂ ಎರಡು ಎಸೆತ ಇರುವಾಗಲೇ (49.4 ಓವರ್ ನಲ್ಲಿ) ಪಾಕಿಸ್ತಾನ 249 ರನ್ ಪೇರಿಸುವುದರೊಂದಿಗೆ 1ನಿಂದ ವಿಕೆಟ್ ಗೆಲುವನ್ನಾಚರಿಸಿತು.

ಭಾರತಕ್ಕೆ 6 ವಿಕೆಟ್ ಜಯ

ಭಾರತಕ್ಕೆ 6 ವಿಕೆಟ್ ಜಯ

18 ಮಾರ್ಚ್ 2012ರ ಈ ಪಂದ್ಯವೂ ಧಾಕಾದಲ್ಲೇ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ್ದ ಪಾಕ್ 50 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು 329 ರನ್ ಪೇರಿಸಿತ್ತು. ಬೃಹತ್ ಮೊತ್ತ ಬೆನ್ನಟ್ಟಿದ ಭಾರತ ವಿಕೆಟ್ ಕಳೆದುಕೊಳ್ಳುತ್ತಾ ಬಂತು. ಓವರ್ ಮುಗಿಯುತ್ತಾ ಬಂದಂತೆ ಗೆಲುವು ನಮ್ಮದೇ ಎಂದು ಪಾಕ್ ಬೀಗುವುದರಲ್ಲಿತ್ತು. ಆಗ ವಿರಾಟ್ ಕೊಹ್ಲಿ ಭಾರತ ತಂಡದ ಬೆಂಬಲಕ್ಕೆ ನಿಂತರು. ಸೋಲುವ ಪಂದ್ಯವನ್ನು ವಿರಾಟ್ ಗೆಲ್ಲಿಸಿಕೊಟ್ಟರು. 148 ಎಸೆತಕ್ಕೆ 183 ರನ್ ಚಚ್ಚಿದ್ದ ವಿರಾಟ್ 47.5 ಓವರ್ ನಲ್ಲೇ ತಂಡದ ಮೊತ್ತ 330 ರನ್ ಗಡಿ ದಾಟಿಸಿ ಭಾರತವನ್ನು ಗೆಲ್ಲಿಸಿದ್ದರು.

ಸೆಹ್ವಾಗ್ ಆರ್ಭಟ

ಸೆಹ್ವಾಗ್ ಆರ್ಭಟ

26 ಜೂನ್ 2008ರಲ್ಲಿ ಕರಾಚಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಪಾಕಿಸ್ತಾನ 50 ಓವರ್ ಗೆ 4 ವಿಕೆಟ್ ಕಳೆದು 299 ರನ್ ಸೇರಿಸಿತ್ತು. 300 ರನ್ ಗುರಿ ಬೆನ್ನತ್ತಿದ ಭಾರತ ವೀರೇಂದ್ರ ಸೆಹ್ವಾಗ್ ಅವರ 119 ರನ್ (95 ಎಸೆತ) ನೆರವಿನಿಂದ ಗೆಲುವು ಸಾಧಿಸಿತ್ತು. ಸುರೇಶ್ ರೈನಾ 84 (69), ಯುವರಾಜ್ ಸಿಂಗ್ 48, ಧೋನಿ ಅಜೇಯ 26 ರನ್ ಪೇರಿಸಿ ಭಾರತವನ್ನು 42.1 ಓವರ್ ನಲ್ಲಿ 300 ರನ್ ಗಡಿ ದಾಟಿಸಿದ್ದರು.

Story first published: Tuesday, September 18, 2018, 17:59 [IST]
Other articles published on Sep 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X