ಜೊಹಾನ್ಸ್‌ಬರ್ಗ್, ಜುಲೈ 21: ದಕ್ಷಿಣ ಆಫ್ರಿಕಾದ ದೇಶಿ ಕ್ರಿಕೆಟ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾರತ ಮೂಲದ ಇನ್ನಿಬ್ಬರ ಹೆಸರು ತಳಕು ಹಾಕಿಕೊಂಡಿದೆ.
ಭಾರತದವರಾದ ಮನೇಶ್ ಜೈನ್ ಹಾಗೂ ಇಮ್ರಾನ್ ಮುಸ್ಕಾನ್ ಶಿಮ್ಜಿ ಅವರ ಹೆಸರನ್ನು ದಕ್ಷಿಣ ಆಫ್ರಿಕಾದ ನ್ಯಾಯಾಲಯದ ಕಡತಗಳಲ್ಲಿ ನಮೂದಿಸಲಾಗಿದೆ.
ದ್ವಿಶತಕ ಬಾರಿಸಿದ ಮೊದಲನೇ ಪಾಕಿಸ್ತಾನಿ ಆಟಗಾರರಾಗಿ ಮಿಂಚಿದ ಫಖರ್
2015ರ ಡಿಸೆಂಬರ್‌ನಲ್ಲಿ ನಡೆದ ರಾಮ್ ಸ್ಲಾನ್ ಟಿ20 ಲೀಗ್ ವೇಳೆ ಆಫ್ರಿಕಾದ ಪ್ರಥಮ ದರ್ಜೆ ಆಟಗಾರರು ಮತ್ತು ಭಾರತದ ಬೆಟ್ಟಿಂಗ್ ವ್ಯವಹಾರಸ್ಥರ ನಡುವೆ ಸಂಪರ್ಕ ಬೆಳೆಸಿದ ಆರೋಪದಲ್ಲಿ ಭಾರತ ಮೂಲದ ಆಟಗಾರ ಗುಲಾಂ ಬೋಡಿಯನ್ನು 2016ರ ಜನವರಿಯಲ್ಲಿ 20 ವರ್ಷಗಳವರೆಗೆ ಅಮಾನತು ಮಾಡಲಾಗಿತ್ತು.
ಟೂರ್ನಿ ಆರಂಭವಾಗುವುದಕ್ಕೂ ಮುಂಚೆ 2015ರ ಆಗಸ್ಟ್‌ನಲ್ಲಿ ಭಾರತಕ್ಕೆ ಬಂದಿದ್ದ ಬೋಡಿ, ಜೈನ್, ಶಿಮ್ಜಿ ಹಾಗೂ ಇತರೆ ಬುಕ್ಕಿಗಳನ್ನು ಭೇಟಿ ಮಾಡಿದ್ದ. ಬಳಿಕ ಅವರನ್ನು ಉಳಿದ ಆಟಗಾರರಿಗೆ ಪರಿಚಯಿಸಿದ್ದ.
ಪ್ರತಿ ಪಂದ್ಯಕ್ಕೆ ಸ್ಪಾಟ್ ಫಿಕ್ಸಿಂಗ್‌ನಿಂದ 6ರಿಂದ 7 ಲಕ್ಷ ರೂಪಾಯಿವರೆಗೆ ಸಂಪಾದಿಸಬಹುದು ಎಂದ ಅವರಿಗೆ ಆಮಿಷವೊಡ್ಡಿದ್ದರು. ಅಲ್ಲದೆ ದುಬಾರಿ ವಾಚ್‌ಗಳ ಕಾಣಿಕೆ ನೀಡುವ ಭರವಸೆಯನ್ನೂ ನೀಡಿದ್ದರು.
2014-15ರ ಸಾಲಿನಲ್ಲಿ ಕೊನೆಯ ಪ್ರಥಮ ದರ್ಜೆ ಪಂದ್ಯ ಆಡಿದ್ದರೂ, ಸ್ಥಳೀಯ ತಂಡವಾದ ಲಯನ್ಸ್‌ನಲ್ಲಿದ್ದ ಸ್ನೇಹಿತರನ್ನು ಮನವೊಲಿಸಿದ್ದ.
ತವರಿಗೆ ಮರಳಲಿರುವ ಭುವಿ: ಎನ್ಸಿಎ ಪದ್ಧತಿ ಕುರಿತು ಆಟಗಾರರ ಅಸಮಾಧಾನ
ಲಯನ್ಸ್ ಮತ್ತು ಟೈಟಾನ್ಸ್ ತಂಡಗಳ ನಡುವೆ ನಡೆದ ಕಡಿಮೆ ಸ್ಕೋರ್‌ನ ಪಂದ್ಯ ಅನುಮಾನ ಹುಟ್ಟಿಸಿತು.
ಅಲ್ವಿರೊ ಪೀಟರ್‌ಸನ್, ತಮಿ ಸೊಲೆಕಿಲೆ, ಲೊನ್ವಾಬೊ ತೊತ್ಸೊಬೆ, ಜೀನ್ ಸೈಮ್ಸ್ ಮತ್ತು ಪುಮಿ ಮತ್ಷಿಕೆವ್ ಅವರನ್ನು 2-12ರವರೆಗೆ ಕ್ರಿಕೆಟ್‌ನಿಂದ ನಿಷೇಧಿಸಲಾಗಿತ್ತು.
ಬಂಧನದಲ್ಲಿರು ಬೋಡಿಗೆ ಜಾಮೀನು ನೀಡಲು ಸರ್ಕಾರ ವಿರೋಧಿಸಿಲ್ಲ. ಆದರೆ, ಆತನ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಯಾವುದೇ ಕ್ರಿಕೆಟ್ ಆಟಗಾರರನ್ನು ಸಂಪರ್ಕಿಸದಂತೆ ತಡೆಯಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದೆ.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ