ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಸೆಮಣೆ ಏರಲಿದ್ದಾರೆ ಮಹಿಳಾ ಕ್ರಿಕೆಟರ್‌ ವೇದಾ ಕೃಷ್ಣಮೂರ್ತಿ?

Indian Womens Cricketer Veda Krishnamurthy to tie knot soon

ಬೆಂಗಳೂರು, ಮೇ 03: ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಟಾರ್‌ ಬ್ಯಾಟರ್‌ ಕನ್ನಡತಿ ವೇದಾ ಕೃಷ್ಣಮೂರ್ತಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

 ಐಪಿಎಲ್‌: ಮಹಿಳಾ ಟಿ20 ಚಾಲೆಂಜ್‌ಗೆ ತಂಡಗಳು ಪ್ರಕಟ ಐಪಿಎಲ್‌: ಮಹಿಳಾ ಟಿ20 ಚಾಲೆಂಜ್‌ಗೆ ತಂಡಗಳು ಪ್ರಕಟ

ಕರ್ನಾಟಕದ ಕಡೂರು ಮೂಲದವರಾದ 26 ವರ್ಷದ ಕ್ರಿಕೆಟರ್‌ ವೇದಾ, ಕಳೆದ ತಿಂಗಳು ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ತಾವು ವಿವಾಹವಾಗುತ್ತಿರುವ ಹುಡುಗನ ಫೋಟೊ ಪ್ರಕಟಿಸಿದ್ದಾರೆ.

ಅವರ ಈ ಪೋಸ್ಟ್‌ಗೆ 4.5 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಹರಿದುಬಂದಿದ್ದು, 160ಕ್ಕೂ ಹೆಚ್ಚು ಮಂದಿ ಶುಭಾಶಯ ಕೋರಿ ಕಾಮೆಂಟ್‌ ಮಾಡಿದ್ದಾರೆ. ವೇದಾ ಅವರ ಫೇಸ್‌ಬುಕ್‌ ಪೋಸ್ಟ್‌ ಪ್ರಕಾರ ಅವರು ಲಲಿತ್‌ ಚೌಧರಿ ಹೆಸರಿನ ಹುಡುಗನನ್ನು ಮದುವೆಯಾಗುತ್ತಿರುವ ಸುದ್ದಿಯಷ್ಟೇ ತಿಳಿದುಬಂದಿದ್ದು, ಯಾವಾಗ? ಎಲ್ಲಿ? ಎಂಬ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಅಂದಹಾಗೆ ಶೀಘ್ರದಲ್ಲೇ ಈ ಕುರಿತಾಗಿ ಅಧಿಕೃತ ಸಂದೇಶ ಹೊರಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

 ಐಪಿಎಲ್ 2019: 'ಮಹಿಳೆಯರ ಟಿ20 ಚಾಲೆಂಜ್' ಸಮಯದಲ್ಲಿ ಬದಲಾವಣೆ ಐಪಿಎಲ್ 2019: 'ಮಹಿಳೆಯರ ಟಿ20 ಚಾಲೆಂಜ್' ಸಮಯದಲ್ಲಿ ಬದಲಾವಣೆ

ಸದ್ಯ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ನಲ್ಲಿ ತೊಡಗಿಸಿಕೊಂಡಿರುವ ವೇದಾ ಕೃಷ್ಣಮೂರ್ತಿ, ಮೇ6ರಿಂದ 11ರವರೆಗೆ ಜೈಪುರದಲ್ಲಿ ನಡೆಯಲಿರುವ ತ್ರಿಕೋನ ಟಿ20 ಮಹಿಳಾ ಚಾಲೆಂಜ್‌(ಪ್ರಯೋಗಾತ್ಮಕ ಮಹಿಳಾ ಐಪಿಎಲ್‌)ನಲ್ಲಿ ಮಿಥಾಲಿ ರಾಜ್‌ ನಾಯಕತ್ವದ ವೆಲಾಸಿಟಿ ತಂಡದ ಪರ ಆಡಲಿದ್ದಾರೆ.

ಭಾರತ ತಂಡದ ಪರ 48 ಏಕದಿನ ಪಂದ್ಯಗಳನ್ನಾಡಿ 8 ಅರ್ಧಶತಕಗಳನ್ನು ಒಳಗೊಂಡ 829 ರನ್‌ಗಳನ್ನು ಗಳಿಸಿರುವ ವೇದಾ, ಇತ್ತೀಚೆಗಷ್ಟೇ ಟೆಲಿವಿಷನ್‌ ಕಾರ್ಯಕ್ರಮ 'ದಿ ಕಪಿಲ್‌ ಶರ್ಮಾ ಶೋ'ದಲ್ಲಿ ಪಾಲ್ಗೊಂಡಿದ್ದರು. ಇನ್ನು 59 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತದ ಪರ ಬ್ಯಾಟ್‌ ಬೀಸಿದ್ದು, 686 ರನ್‌ಗಳನ್ನು ಸಿಡಿಸಿದ್ದಾರೆ. ಆದರೆ, ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲಾಗದೆ ಸದ್ಯ ಭಾರತ ತಂಡದಿಂದ ಹೊರಬಿದ್ದಿದ್ದಾರೆ.

ಡ್ರೆಸಿಂಗ್‌ ರೂಮ್‌ನ 'ಡಾನ್‌'

ಡ್ರೆಸಿಂಗ್‌ ರೂಮ್‌ನ 'ಡಾನ್‌'

2011ರಲ್ಲಿ ತಮ್ಮ 18ನೇ ವಯಸ್ಸಿನಲ್ಲೇ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಪದಾರ್ಪಣೆ ಮಾಡಿದ ಕನ್ನಡತಿ ವೇದಾ ಕೃಷ್ಣಮೂರ್ತಿ ತಮ್ಮ ಹೊಡಿಬಡಿ ಶೈಲಿಯ ಬ್ಯಾಟಿಂಗ್‌ ಮತ್ತು ಮಿಂಚಿನ ಕ್ಷೇತ್ರ ರಕ್ಷಣೆಗೆ ಹೆಸರುವಾಸಿಯಾದವರು. ಡ್ರೆಸಿಂಗ್‌ ರೂಮ್‌ನ 'ಡಾನ್‌' ಎಂದೇ ಕರೆಸಿಕೊಳ್ಳುವ ವೇದಾ, ಭಾರತ ಮಹಿಳಾ ತಂಡದ ಪರ ಏಕದಿನ ಮತ್ತು ಟಿ20ಯಲ್ಲಿ ಜಂಟಿಯಾಗಿ ಅತ್ಯಂತ ವೇಗವಾಗಿ 1000 ರನ್‌ಗಳನ್ನು ಗಳಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ದಾಖಲೆಯನ್ನೂ ಹೊಂದಿದ್ದಾರೆ.

ಇನ್ನು 2017ರ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್‌ ಪ್ರವೇಶಿಸುವಲ್ಲಿ ವೇದಾ ಅವರ ಕೊಡುಗೆ ಮಹತ್ವದ್ದು. ನ್ಯೂಜಿಲೆಂಡ್‌ ವಿರುದ್ಧ 70 ರನ್‌ಗಳನ್ನು ಸಿಡಿಸಿ ತಂಡವನ್ನು ಸೆಮಿಫೈನಲ್‌ಗೆ ಕರೆದೊಯ್ದಿದ್ದರು. ಫೈನಲ್‌ನಲ್ಲಿ ಭಾರತ ತಂಡ ಕೇವಲ 9 ರನ್‌ಗಳಿಂದ ಇಂಗ್ಲೆಂಡ್‌ ಎದುರು ನಿರಾಸೆ ಅನುಭವಿಸಿತ್ತು. ಈ ಪಂದ್ಯದಲ್ಲಿ ಕರ್ನಾಟಕದ ಆಟಗಾರ್ತಿ 35 ರನ್‌ಗಳನ್ನು ಗಳಿಸಿ ಹೋರಾಟ ಪ್ರದರ್ಶಿಸಿದ್ದರು. ಇನ್ನು ಮಹಿಳಾ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಿದ ಭಾರತದ ಮೂರನೇ ಕ್ರಿಕೆಟರ್‌ ಎಂಬ ಹೆಗ್ಗಳಿಕೆಯೂ ವೇದಾ ಅವರದ್ದು.

ವೆಲಾಸಿಟಿ

ವೆಲಾಸಿಟಿ

ಮಿಥಾಲಿ ರಾಜ್‌ (ನಾಯಕಿ), ಅಮೆಲಿಯಾ ಕೆರ್‌ (ನ್ಯೂಜಿಲೆಂಡ್‌), ಡೇನಿಯೆಲ್‌ ವ್ಯಾಟ್‌ (ಇಂಗ್ಲೆಂಡ್‌), ದೇವಿಕಾ ವಿದ್ಯಾ, ಏಕ್ತ ಬಿಷ್ತ್‌, ಹೇಲೇ ಮ್ಯಾಥ್ಯೂಸ್‌ (ವೆಸ್ಟ್‌ ಇಂಡೀಸ್‌), ಜಹನಾರ ಆಲಮ್‌ (ಬಾಂಗ್ಲಾದೇಶ), ಕೋಮಲ್‌ ಝ್ಹಂಝಾದ್‌, ಶಫಾಲಿ ವರ್ಮಾ, ಶಿಖಾ ಪಾಂಡೆ, ಸುಷ್ಮಾ ವರ್ಮಾ (ವಿಕೆಟ್‌ಕೀಪರ್‌), ಸುಶ್ರೀ ದಿವ್ಯದರ್ಶಿನಿ, ವೇದಾ ಕೃಷ್ಣಮೂರ್ತಿ.

ಟ್ರಯಲ್‌ ಬ್ಲೇಝರ್ಸ್‌

ಟ್ರಯಲ್‌ ಬ್ಲೇಝರ್ಸ್‌

ಸ್ಮೃತಿ ಮಂಧಾನಾ (ನಾಯಕಿ), ಭಾರತಿ ಫುಲ್ಮಾಲಿ, ದಯಾಳನ್‌ ಹೇಮಲತ, ದೀಪ್ತಿ ಶರ್ಮಾ, ಹರ್ಲೀನ್‌ ಡಿಯೋಲ್‌, ಜಸಿಯಾ ಅಖ್ತರ್‌, ಜೂಲನ್‌ ಗೋಸ್ವಾಮಿ, ಆರ್‌. ಕಲ್ಪನಾ(ವಿಕೆಟ್‌ಕೀಪರ್‌), ರಾಜೇಶ್ವರಿ ಗಾಯಕ್ವಾಡ್‌, ಶಕೀರಾ ಸಲ್ಮಾನ್‌ (ವೆಸ್ಟ್‌ ಇಂಡೀಸ್‌), ಸೋಫೀ ಎಕ್ಲೇಸ್ಟೋನ್‌ (ಇಂಗ್ಲೆಂಡ್‌), ಸ್ಟೆಫನಿ ಟೇಲರ್‌ (ವೆಸ್ಟ್‌ ಇಂಡೀಸ್‌), ಸೂಝೀ ಬೇಟ್ಸ್‌ (ನ್ಯೂಜಿಲೆಂಡ್‌).

ಸೂಪರ್‌ನೋವಾಸ್‌

ಸೂಪರ್‌ನೋವಾಸ್‌

ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಅನುಜಾ ಪಾಟಿಲ್‌, ಅರುಂಧತಿ ರೆಡ್ಡಿ, ಚಾಮರಿ ಅತಪತ್ತು(ಶ್ರೀಲಂಕಾ), ಜೆಮಿಮಾ ರೋಡ್ರಿಗಸ್‌, ಒಲೀ ತಹುಹು (ನ್ಯೂಜಿಲೆಂಡ್‌), ಮಾನ್ಸೀ ಜೋಶಿ, ನಥಾಲಿ ಶಿವರ್‌ (ಇಂಗ್ಲೆಂಡ್‌), ಪೂನಮ್‌ ಯಾದವ್‌, ಪ್ರಿಯಾ ಪೂನಿಯಾ, ರಾಧಾ ಪಿ. ಯಾದವ್‌, ಸೋಫೀ ಡಿವೈನ್‌ (ನ್ಯೂಜಿಲೆಂಡ್‌), ತಾನಿಯಾ ಭಾಟಿಯಾ (ವಿಕೆಟ್‌ಕೀಪರ್‌).

Story first published: Friday, May 3, 2019, 19:18 [IST]
Other articles published on May 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X