ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಪತ್ಬಾಂಧವ ಎಬಿಡಿ ನೆರವಿನಿಂದ ಪಂಜಾಬ್ ಮಣಿಸಿದ ಆರ್ಸಿಬಿ

By Mahesh
AB de Villiers, bowlers shine as RCB taste first win; edge KXIP by 4 wickets

ಬೆಂಗಳೂರು, ಏಪ್ರಿಲ್ 13 : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ ಎಂಟನನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕು ವಿಕೆಟ್ ಗಳ ಜಯ ದಾಖಲಿಸಿದೆ. ಆರ್ ಸಿಬಿ ಗೆಲುವಿನಲ್ಲಿ ವೇಗಿ ಉಮೇಶ್ ಯಾದವ್ ಹಾಗೂ ಎಬಿ ಡಿ ವಿಲಿಯರ್ಸ್ ಮಹತ್ವದ ಪಾತ್ರವಹಿಸಿದರು.

ಬೆಂಗಳೂರು ವಿರುದ್ಧ ಪಂಜಾಬ್ ಸ್ಕೋರ್ ಕಾರ್ಡ್

ಚೇಸಿಂಗ್ : 156ರನ್ ಗುರಿ ಬೆನ್ನು ಹತ್ತಿದ ಆರ್ ಸಿಬಿ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಬ್ರೆಂಡನ್ ಮೆಕಲಮ್ ತಮ್ಮ ನೆಚ್ಚಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಗೆ ತೆರಳಿದರು.

ಐಪಿಎಲ್ ವಿಶೇಷ ಪುಟ | ಬೆಂಗಳೂರು ವೇಳಾಪಟ್ಟಿ | ಪಂಜಾಬ್ ವೇಳಾಪಟ್ಟಿ

ಆರಂಭಿಕ ಆಟಗಾರ ಕ್ವಿಂಟಾನ್ ಡಿಕಾಕ್ 34 ಎಸೆತಗಳಲ್ಲಿ 45ರನ್ ಗಳಿಸಿ ಉಪಯುಕ್ತ ಕೊಡುಗೆ ನೀಡಿದರು. ನಾಯಕ ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 21ರನ್ ಗಳಿಸಿ, 17 ವರ್ಷ ವಯಸ್ಸಿನ ಆಫ್ಘನ್ ಸ್ಪಿನ್ನರ್ ರಹಮಾನ್ ಸ್ಪಿನ್ ಮೋಡಿ ಅರಿಯದೆ ಕ್ಲೀನ್ ಬೋಲ್ಡ್ ಆದರು.

ಹನಿಮೂನ್ ಬಿಟ್ಟು ಮೈದಾನಕ್ಕೆ ಬಂದು ಸೊನ್ನೆ ಸುತ್ತಿದ ಫಿಂಚ್ಹನಿಮೂನ್ ಬಿಟ್ಟು ಮೈದಾನಕ್ಕೆ ಬಂದು ಸೊನ್ನೆ ಸುತ್ತಿದ ಫಿಂಚ್

ಎಬಿ ಡಿ ವಿಲಿಯರ್ಸ್ 4 ಸಿಕ್ಸರ್, 2 ಬೌಂಡರಿ ಸಿಡಿಸಿ 40 ಎಸೆತಗಳಲ್ಲಿ 57ರನ್ ಗಳಿಸಿ ಟೈ ಬೌಲಿಂಗ್ ನಲ್ಲಿ ಔಟಾದರು. ತಂಡದ ಮೊತ್ತ 146/5 ಆಗಿತ್ತು. ನಂತರ ಮನ್ದೀಪ್ 22ರನ್ ಗಳಿಸಿ ಜಯದ ಹೊಸ್ತಿಲಿಗೆ ತಂಡವನ್ನು ತಂದರು.

ವಾಷಿಂಗ್ಟನ್ ಸುಂದರ್ ಕೊನೆ ಓವರ್ ನಲ್ಲಿ ಇದ್ದ ಆತಂಕ ದೂರ ಮಾಡಿ ಗೆಲುವಿನ ರನ್ ಬಾರಿಸಿದರು. ಆರ್ ಅಶ್ವಿನ್ 2, ಮುಜೀಬ್, ಅಕ್ಷರ್, ಟೈ ತಲಾ 1 ವಿಕೆಟ್ ಪಡೆದರು. ಆರ್ ಸಿಬಿ ಪರ 23ಕ್ಕೆ 3 ವಿಕೆಟ್ ಕಬಳಿಸಿದ ಉಮೇಶ್ ಯಾದವ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Saturday, April 14, 2018, 0:29 [IST]
Other articles published on Apr 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X