ಐಪಿಎಲ್ 2018: ಚೆನ್ನೈ ತಂಡದಿಂದ ಪ್ರಮುಖ ಆಟಗಾರ ಔಟ್!

Posted By:
IPL 2018: CSKs Kedhar Jadhav ruled out for rest of season with hamstring injury

ಚೆನ್ನೈ, ಏಪ್ರಿಲ್ 10: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2018ರ ಗಾಯಾಳುಗಳ ಪಟ್ಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಕೇದಾರ್ ಜಾಧವ್ ಸೇರ್ಪಡೆಯಾಗಿದ್ದಾರೆ.

ಸ್ನಾಯುಸೆಳೆತ ಸಮಸ್ಯೆಯಿಂದ ಬಳಲುತ್ತಿರುವ ಕೇದಾರ್ ಅವರು ಐಪಿಎಲ್ ಟೂರ್ನಮೆಂಟ್ ನಿಂದಲೆ ಹೊರಗಿರಬೇಕಾಗಿದೆ ಎಂದು ಕೋಚ್ ಮೈಕ್ ಹಸ್ಸಿ ಹೇಳಿದ್ದಾರೆ.

ಐಪಿಎಲ್ ವಿಶೇಷ ಪುಟ | ಚೆನ್ನೈ ವೇಳಾಪಟ್ಟಿ | ಕೆಕೆಆರ್ ವೇಳಾಪಟ್ಟಿ

ಶನಿವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡ್ವಾಯ್ನೆ ಬ್ರಾವೋಗೆ ಉತ್ತಮ ಸಾಥ್ ನೀಡಿ, ಪಂದ್ಯಗೆಲ್ಲಲು ಕೇದಾರ್ ಜಾಧವ್ ಬ್ಯಾಟಿಂಗ್ ಕೂಡಾ ಕಾರಣವಾಗಿತ್ತು.

ಆದರೆ, ಕೇದಾರ್ ಅವರ ಗಾಯದ ಸಮಸ್ಯೆ ಉಲ್ಬಣವಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರು, ಐಪಿಎಲ್ ನಲ್ಲಿ ಆಡಲು ಕಷ್ಟ ಎಂದು ತಿಳಿಸಿದ್ದಾರೆ. ಕೇದಾರ್ ಅವರ ಬದಲಿಗೆ ಮತ್ತೊಬ್ಬ ಆಟಗಾರರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಹಸ್ಸಿ ಹೇಳಿದರು.

ವಾಂಖೆಡೆ ಸ್ಟೇಡಿಯಂನಲ್ಲಿ 24ರನ್ ಗಳಿಸಿ ಗೆಲುವಿಗೆ ಕಾರಣರಾದ ಕೇದಾರ್ ಅವರು ಚೆನ್ನೈಗೆ ಬಂದ ಬಳಿಕ ನೋವು ಕಾಣಿಸಿಕೊಂಡಿದೆ. ತಂಡದ ವೈದ್ಯರಿಂದ ಚಿಕಿತ್ಸೆ ನೀಡಲಾಗಿದ್ದು, ಸ್ಕ್ಯಾನ್ ಮಾಡಿದ ಬಳಿಕ, ಮುಂದಿನ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂಬ ಮಾಹಿತಿ ಬಂದಿದೆ.

ಚೆನ್ನೈನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಂಗಳವಾರದಂದು ಪಂದ್ಯ ನಿಗದಿಯಾಗಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 10, 2018, 8:07 [IST]
Other articles published on Apr 10, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ